Home ಧಾರ್ಮಿಕ ಸುದ್ದಿ ಭಕ್ತಿ ಭಾವದ ವೇದಘೋಷ ಮೊಳಗಿಸಿ ಶಿಖರ ಪ್ರತಿಷ್ಠೆ

ಭಕ್ತಿ ಭಾವದ ವೇದಘೋಷ ಮೊಳಗಿಸಿ ಶಿಖರ ಪ್ರತಿಷ್ಠೆ

537
0
SHARE

ಬೆಳ್ತಂಗಡಿ: ಚಂದ್ಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಸೋಮವಾರ ಸಹಸ್ರಾರು ಭಕ್ತರ ಸಮ್ಮುಖ ದಲ್ಲಿ ವೈದಿಕರಿಂದ ಬ್ರಹ್ಮಕಲಶ ಜರಗಿತು.

ಪುನರ್‌ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ 7.10ಕ್ಕೆ ಮಖಾ ನಕ್ಷತ್ರದಲ್ಲಿ ಶ್ರೀ ದುರ್ಗಾ ಪರಮೇಶ್ವರಿಯ ಪುನರ್‌ ಪ್ರತಿಷ್ಠೆ, ವೀರಭದ್ರ ಸಾನ್ನಿಧ್ಯ ಪ್ರತಿಷ್ಠೆ, ಅಷ್ಟಬಂಧ ಲೇಪನ, ಕುಂಭೇಶ ಕಲಶಾಭಿಷೇಕ, ನಿದ್ರಾ ಕಲಶಾಭಿಷೇಕ, ಜೀವ ಕಲಶಾಭಿಷೇಕ, ಪ್ರಾಣ ಪ್ರತಿಷ್ಠೆ, ಪ್ರತಿಷ್ಠಾಪೂಜೆ, ಶಿಖರ ಪ್ರತಿಷ್ಠೆ, ಪರಿಕಲಶಾಭಿಷೇಕ, ಬ್ರಹ್ಮಕಲಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನೆರವೇರಿತು.

ಊರ ಪರವೂರ ಸಹಸ್ರಾರು ಭಕ್ತರು ದೇವರನ್ನು ಕಣ್ತುಂಬಿಕೊಂಡರು.

ಭೂತ ಬಲಿ, ಉತ್ಸವ
ರಾತ್ರಿ 8ಕ್ಕೆ ನಿತ್ಯ ನೈಮಿತ್ಯಾದಿಗಳ ಹಾಗೂ ಪಂಚ ಪರ್ವಾದಿಗಳ ನಿರ್ಣಯ, ರಾತ್ರಿ 9ಕ್ಕೆ ಮಹಾಪೂಜೆ ಮತ್ತು ಶ್ರೀ ಭೂತ ಬಲಿ, ಶ್ರೀ ದೇವಿಯ ಉತ್ಸವ, ಬಟ್ಟಲು ಕಾಣಿಕೆ, ರಾಜಾಂಗಣ ಪ್ರಸಾದ, ಮಂತ್ರಾಕ್ಷತೆ ನಡೆಯಿತು.

ಬ್ರಹ್ಮಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಬೆಳಗ್ಗೆ 5ರಿಂದ ಗಣಪತಿ ಹೋಮ, ಅಧಿವಾಸ ಉದ್ಘಾಟನೆ, ಪ್ರಸಾದ ಪ್ರತಿಷ್ಠೆ, ನಪುಂಸಕ ಶಿಲೆಯಲ್ಲಿ ರತ್ನನ್ಯಾಸ, ಪೀಠ ಪ್ರತಿಷ್ಠೆ ನಡೆಯಿತು.

LEAVE A REPLY

Please enter your comment!
Please enter your name here