ನೆಲ್ಯಾಡಿ : ಸೌತಡ್ಕ ಶ್ರೀ ಮಹಾಗಣಪತಿ ದೇವರಿಗೆ ಮಾಘ ಶುದ್ಧ ಚೌತಿಯ ಪ್ರಯುಕ್ತ ಶುಕ್ರವಾರ 108 ಕಾಯಿ ಗಣಪತಿ ಹೋಮ, ಅಭಿಷೇಕ, ಮೂಡಪ್ಪ ಸೇವೆ ನಡೆಯಿತು. ಇದೇ ವೇಳೆ ನೂತನವಾಗಿ ನಿರ್ಮಿಸಲಾದ ಪಶ್ಚಿಮ ಗೋಪುರವನ್ನು ಉದ್ಘಾಟಿಸಲಾಯಿತು.
ಬ್ರಹ್ಮಶ್ರೀ ವೇ|ಮೂ| ಕೆಮ್ಮಿಂಜೆ ನಾಗೇಶ ತಂತ್ರಿ ಅವರು ಧಾರ್ಮಿಕ ಕಾರ್ಯಕ್ರಮಗಳ ನೇತೃತ್ವಗಳ ನೇತೃತ್ವ ವಹಿಸಿದ್ದರು. ಸುಬ್ರಹ್ಮಣ್ಯ ಶ್ರೀಗಳು ಪಶ್ಚಿಮ ಗೋಪುರದ ಉದ್ಘಾಟನೆ ನೆರವೇರಿಸಿದರು. ಶ್ರೀ ದೇವರಿಗೆ ಅಲಂಕಾರ ನಡೆದು ಮಧ್ಯಾಹ್ನ ಶ್ರೀ ದೇವರಿಗೆ ಮಹಾಪೂಜೆ, ಅನ್ನಸಂತರ್ಪಣೆ, ರಾತ್ರೆ ಮೂಡಪ್ಪ ಸೇವೆ ನಡೆದವು. ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.