Home ಧಾರ್ಮಿಕ ಸುದ್ದಿ ನೂತನ ಬ್ರಹ್ಮರಥ ಸಮರ್ಪಣೆ ವಿಧಿ ವಿಧಾ

ನೂತನ ಬ್ರಹ್ಮರಥ ಸಮರ್ಪಣೆ ವಿಧಿ ವಿಧಾ

210
0
SHARE

ಪುಂಜಾಲಕಟ್ಟೆ : ಉಳಿ ಗ್ರಾಮದ ಕಕ್ಯಬೀಡು ಶ್ರೀ ಪಂಚದುರ್ಗಾಪರಮೇಶ್ವರೀ ದೇವಿ ಕ್ಷೇತ್ರಕ್ಕೆ ಸುಮಾರು 50 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ನೂತನ ಬ್ರಹ್ಮರಥದ ಸಮರ್ಪಣೆಯ ಧಾರ್ಮಿಕ ವಿಧಿ ವಿಧಾನಗಳು ಜ. 13ರಂದು ರಾತ್ರಿ ದೇವಸ್ಥಾನದ ಅಂಗಣದಲ್ಲಿ ಜರಗಿದವು.

ಕ್ಷೇತ್ರದ ತಂತ್ರಿ ವೇ| ಮೂ| ಬ್ರಹ್ಮಶ್ರೀ ನಡ್ವಂತಾಡಿ ಬಾಲಕೃಷ್ಣ ಪಾಂಗಣ್ಣಾಯ ಅವರ ನೇತೃತ್ವದಲ್ಲಿ ಕ್ಷೇತ್ರದ ಪ್ರಧಾನ ಅರ್ಚಕ ಶ್ರೀನಿವಾಸ ಅರ್ಮುಡ್ತಾಯ ಅವರ ಸಹಕಾರದಲ್ಲಿ ನೂತನ ರಥಕ್ಕೆ ಪೂಜೆ ಸಹಿತ ವಿವಿಧ ಧಾರ್ಮಿಕ ವಿಧಿ ವಿಧಾನಗಳು ನಡೆದವು. ಅಶ್ವತ್ಥಪುರದ ಕಾಷ್ಠ ಶಿಲ್ಪಿ ಶಿವಪ್ರಸಾದ್‌ ಆಚಾರ್ಯ ಅವರಿಂದ ಬ್ರಹ್ಮರಥದ ಹಸ್ತಾಂತರ ಕಾರ್ಯಕ್ರಮ ನೆರವೇರಿತು.

ದೇವಳದ ಜೀರ್ಣೋದ್ಧಾರ ಸಮಿತಿಯ ಸ್ಥಾಪಕಾಧ್ಯಕ್ಷ ಕೆ. ಜಾರಪ್ಪ ಶೆಟ್ಟಿ ಖಂಡಿಗ, ಬಾರ್ದಡ್‌ ಗುತ್ತಿನ ಮನೆಯವರು, ಅಧ್ಯಕ್ಷ ಉಳಿ ದಾಮೋದರ ನಾಯಕ್‌, ಪೂರ್ವಾಧ್ಯಕ್ಷ ಜಯ ಶೆಟ್ಟಿ ಕಿಂಜಾಲು, ಉಪಾಧ್ಯಕ್ಷ ಕೆ. ಮಾಯಿಲಪ್ಪ ಸಾಲ್ಯಾನ್‌, ಕಾರ್ಯದರ್ಶಿ ನಾರಾಯಣ ರೈ, ಪದಾಧಿಕಾರಿಗಳಾದ ಅಗ್ಪಲ ಸಂಜೀವ ಗೌಡ, ಪಿ. ರಾಮಯ್ಯ ಭಂಡಾರಿ, ಉತ್ಸವ ಸಮಿತಿ ಅಧ್ಯಕ್ಷ ಪಿ. ವಾಸುದೇವ ಮಯ್ಯ, ಉಪಾಧ್ಯಕ್ಷ ವಿಶ್ವನಾಥ ಸಾಲ್ಯಾನ್‌ ಬಿತ್ತ, ಕಚೇರಿ ವ್ಯವಸ್ಥಾಪಕ ವೀರೇಂದ್ರ ಕುಮಾರ್‌ ಜೈನ್‌, ಶ್ರೀ ಸತ್ಯ ಸಾಯಿ ಸೇವಾ ಸಮಿತಿ, ಐವೆರ್‌ ಫ್ರೆಂಡ್ಸ್‌, ಶಿವಾಜಿ ಫ್ರೆಂಡ್ಸ್‌ ಸದಸ್ಯರು, ಜೀರ್ಣೋದ್ಧಾರ ಸಮಿತಿ, ಉತ್ಸವ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here