ತೋಕೂರು: ಇಲ್ಲಿನ ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ದೇವಸ್ಥಾನ ದಲ್ಲಿ ಭಕ್ತರು ಚಂಪಾ ಷಷ್ಠಿಯ ಹಗಲು ರಥೋತ್ಸವದಲ್ಲಿ ಭಾಗವಹಿಸಿ, ತಮ್ಮ ಹರಕೆಯ ಸೇವೆಯನ್ನು ಸಲ್ಲಿಸಿದರು.
ಬ್ರಹ್ಮರಥಕ್ಕೆ ದೇವರ ರಥಾರೋಹಣ ವಾದ ಅನಂತರ ರಥವನ್ನು ಬಾಕಿಮಾರು ಗದ್ದೆಯಲ್ಲಿ ಭಕ್ತರು ಎಳೆದು ಮಹೋತ್ಸವಕ್ಕೆ ವಿಶೇಷ ಮೆರುಗು ನೀಡಿದರು.ಭಾರೀ ಸಂಖ್ಯೆಯಲ್ಲಿ ಭಕ್ತರು ಕ್ಷೇತ್ರಕ್ಕೆ ಆಗಮಿಸಿದ್ದರಿಂದ ಸ್ಥಳೀಯ ಸಂಘ ಸಂಸ್ಥೆಗಳ ಸ್ವಯಂ ಸೇವಕರು ವಿವಿಧ ರೀತಿಯಲ್ಲಿ ಭಕ್ತರಿಗೆ ದೇವರ ದರ್ಶನ ಪಡೆಯಲು ನೆರವಾದರು. ಸುಮಾರು 5 ಸಾವಿರ ಮಂದಿ ವಿವಿಧೆಡೆಯಿಂದ ಆಗಮಿಸಿ ಷಷ್ಠಿ ಜಾತ್ರಾ ಮಹೋತ್ಸವದ ಸಂತೆಯಲ್ಲಿ ತಿರುಗಾಡಿ ಸಂಭ್ರಮಿಸಿದರು.
ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನ ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಚಂಪಾ ಷಷ್ಠಿ ಮಹೋತ್ಸವದ ಕೊನೆಯ ದಿನ ಗುರುವಾರ ಭಾರೀ ಸಂಖ್ಯೆಯಲ್ಲಿ ಭಕ್ತರು ಸೇರಿದ್ದು, ದೇಗುಲದಲ್ಲಿ ನಡೆದ ವಿವಿಧ ಧಾರ್ಮಿಕ ವಿಧಿ ವಿಧಾನಗಳಲ್ಲಿ ಭಾಗವಹಿಸಿ ದೇವರಲ್ಲಿ ತಮ್ಮ ಪ್ರಾರ್ಥನೆ ಸಲ್ಲಿಸಿದರು.
ಬೆಳಗ್ಗೆಯೇ ತುಲಾಭಾರ ಸೇವೆ, ಮಹಾಪೂಜೆ, ಉತ್ಸವ ಬಲಿಯೊಂದಿಗೆ ಪಲ್ಲಪೂಜೆ, ಮಹಾ ಅನ್ನ ಸಂತರ್ಪಣೆ ನಡೆಯಿತು. ಸುಮಾರು 10 ಸಾವಿರ ಮಂದಿ ಅನ್ನ ಪ್ರಸಾದ ಸೀÌಕರಿಸಿದರು. ಸಂಜೆ ರಂಗಪೂಜೆ, ಶ್ರೀ ಅಣ್ಣಪ್ಪ ಸ್ವಾಮಿಯ ಭೇಟಿ ಅವಭೃತೋತ್ಸವ, ಧ್ವಜಾವರೋಹಣ ನಡೆದು ಅಣ್ಣಪ್ಪ ಸ್ವಾಮಿಗೆ ನರ್ತನ ಸೇವೆಯೊಂದಿಗೆ ಭಂಡಾರವನ್ನು ಮೂಲಸ್ಥಾನಕ್ಕೆ ಸೇರಿಸುವ ಸಂಪ್ರದಾಯ ನಡೆ ಯಿತು. ಭಕ್ತರಿಗೆ ಬಾಕಿಮಾರು ಗದ್ದೆಯಲ್ಲಿ ಅನ್ನಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ಸ್ಥಳೀಯ ಸಂಘ -ಸಂಸ್ಥೆಯ ಕಾರ್ಯ ಕರ್ತರು, ಶಿಕ್ಷಣ ಸಂಸ್ಥೆಯ ವಿದ್ಯಾ ರ್ಥಿಗಳು ಸ್ವಯಂ ಸೇವಕರಾಗಿ ಸೇವೆ ನೀಡಿದರು.