ಉಡುಪಿ: ಉಡುಪಿ ಶ್ರೀಕೃಷ್ಣ ಮಠಕ್ಕೂ ಪಡು ಅಲೆವೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೂ ನಿಕಟ ಸಂಬಂಧವಿದೆ. ಆದ್ದರಿಂದ ಅಷ್ಟ ಮಠಾಧೀಶರು ಆಗಾಗ ಬಂದು ಶ್ರೀದೇವಿಯ ದರ್ಶನ ಪಡೆದು ಹೋಗುತ್ತಾರೆ. ಅತಿ ಶೀಘ್ರದಲ್ಲಿ ಉತ್ತಮ ರೀತಿಯಲ್ಲಿ ಭವ್ಯವಾದ ದೇವಸ್ಥಾನವು ನಿರ್ಮಾಣವಾಗಲಿ ಎಂದು ಶ್ರೀ ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು ಹೇಳಿದರು.
ಅವರು ಜ. 18ರಂದು ಪಡು ಅಲೆವೂರು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಸುಮಾರು 3.5 ಕೋ.ರೂ. ವೆಚ್ಚದಲ್ಲಿ ಜೀರ್ಣೋದ್ಧಾರ ಗೊಳ್ಳುತ್ತಿರುವ ದೇವಸ್ಥಾನದ ಜೀರ್ಣೋ ದ್ಧಾರಕ್ಕೆ ಶಿಲಾನ್ಯಾಸ ನೆರವೇರಿಸಿ ಅವರು ಅಶೀರ್ವಚನ ನೀಡಿದರು.
ಆಡಳಿತ ಮೊಕ್ತೇಸರ ಡಾ| ಕೃಷ್ಣರಾಜ್ ಭಟ್ ಸ್ವಾಗತಿಸಿ ಅಧ್ಯಕ್ಷತೆ ವಹಿಸಿದರು.
ಜಿ.ಪಂ. ಅಧ್ಯಕ್ಷ ದಿನಕರ ಬಾಬು, ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ಲಕ್ಷ್ಮೀರಮಣ ಉಪಾಧ್ಯ,ಉಪಾಧ್ಯಕ್ಷ ರಾದ ಸಖಾರಾಮ ಶೆಟ್ಟಿ , ಬಿ. ಶ್ರೀಕಾಂತ ನಾಯಕ್, ಶ್ರೀಕಾಂತ ಉಪಾಧ್ಯ ಉಪಸ್ಥಿತರಿದ್ದರು. ದೇವಿಪ್ರಸನ್ನ ಉಪಾಧ್ಯ ಕಾರ್ಯಕ್ರಮ ನಿರೂಪಿಸಿದರು. ಲಕ್ಷ್ಮಿವಲ್ಲಭ ಉಪಾಧ್ಯ ವಂದಿಸಿದರು.