Home ಧಾರ್ಮಿಕ ಸುದ್ದಿ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

1191
0
SHARE

ಬೆಳ್ಮಣ್‌: ಬೋಳ ಪರ್ತಿಮಾರು ಗುತ್ತು ಕುಟುಂಬಿಕರ ಸಹಕಾರದಿಂದ ಊರ ಪರವೂರ ಭಕ್ತರ ನೆರವಿನಿಂದ ಸುಮಾರು 2.5 ಕೋ.ರೂ. ಅಂದಾಜು ವೆಚ್ಚದಲ್ಲಿ ನಿರ್ಮಾಣಗೊಂಡ ಬೋಳ ಶ್ರೀ ಬ್ರಹ್ಮ ಬೈದರ್ಕಳ ಗರಡಿಯ ಬ್ರಹ್ಮಕಲಶೋತ್ಸವ 2019ರ ಜ. 23ರಿಂದ 28ರವರೆಗೆ ನಡೆಯಲಿದ್ದು ಆಮಂತ್ರಣ ಪತ್ರಿಕೆ ಬಿಡುಗಡೆ ಶುಕ್ರವಾರ ಮಂಗಳೂರಿನಲ್ಲಿ ನಡೆಯಿತು. ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷ ಹಾಗೂ ದಾನಿಗಳಾದ ಬೋಳ ಪರ್ತಿಮಾರುಗುತ್ತು ಸುಬ್ಬಯ್ಯ ಶೆಟ್ಟಿ , ಸರಸ್ವತಿ ಸುಬ್ಬಯ್ಯ ಶೆಟ್ಟಿ ಹಾಗೂ ಅವರ ಪುತ್ರಿ ಉಷಾ ಸತೀಶ್‌ ಶೆಟ್ಟಿ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಶುಭ ಹಾರೈಸಿದರು.

ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಬಿ. ರಾಮಚಂದ್ರ ಹೆಗ್ಡೆ, ಪ್ರಧಾನ ಕಾರ್ಯದರ್ಶಿ ಬಿ. ಸದಾಶಿವ ಶೆಟ್ಟಿ, ಕಾರ್ಯಾಧ್ಯಕ್ಷ ಬಿ. ಜಯರಾಮ ಸಾಲ್ಯಾನ್‌, ಲೆಕ್ಕಪರಿಶೋಧಕರಾದ
ಎನ್‌. ತುಕಾರಾಮ ಶೆಟ್ಟಿ, ಗುಡುಕಲ್ಲು ಉದಯ ಶೆಟ್ಟಿ, ಪೆಜತ್ತಬೆಟ್ಟು ಸತೀಶ್‌ ಶೆಟ್ಟಿ, ಮರಿಮಾರುಗುತ್ತು ಅವಿನಾಶ್‌ ಮಲ್ಲಿ, ಮಾರಗುತ್ತು ಸುಭಾಶ್‌ ಶೆಟ್ಟಿ, ಬೋಳಪರಾರಿ ವಿಕಾಸ್‌ ಶೆಟ್ಟಿ, ಪಾಲಿಂಗೇರಿ ಪರಾರಿ ಬಾಲಕೃಷ್ಣ ಶೆಟ್ಟಿ, ಕಲೆಟ್ಟು ಜಗನ್ನಾಥ ಶೆಟ್ಟಿ, ಕಟ್ಟಿಂಗೇರಿ ಅರುಣ್‌ ಶೆಟ್ಟಿ, ಕರಂಕಿಲ ಬೆಟ್ಟು ಸುಖೇಂದ್ರ ಶೆಟ್ಟಿ, ಕುಕ್ಕುದಡಿ ಅಶೋಕ ಶೆಟ್ಟಿ ಮತ್ತಿತರರಿದ್ದರು. ಕ್ಷೇತ್ರದಲ್ಲಿ ಜ. 25ರಂದು ಬ್ರಹ್ಮಕಲಶೋತ್ಸವ ಹಾಗೂ 26ರಂದು ನೇಮೋತ್ಸವ ನಡೆಯಲಿದೆ.

LEAVE A REPLY

Please enter your comment!
Please enter your name here