ತಲಪಾಡಿ: ಸಮುದಾಯದ ಅಭಿವೃದ್ಧಿಗೆ ಕಳೆದ 20 ವರ್ಷಗಳ ಹಿಂದೆ ಆರಂಭಗೊಂಡ ಮಸೀದಿಯಲ್ಲಿ ಹಲವು ಯೋಜನೆಗಳ ಮೂಲಕ ಕಾರ್ಯ ನಿರ್ವಹಿಸಲಾಗುತ್ತಿದೆ ಎಂದು ಅಲ್-ಹಿದಾಯ ಜುಮ್ಮಾ ಮಸೀದಿ ಅಧ್ಯಕ್ಷ ಎನ್.ಎಸ್. ಉಮರ್ ಮಾಸ್ಟರ್ ಹೇಳಿದರು.
ಕೆ.ಸಿ.ರೋಡ್ ಸಮೀಪದ ಹಿದಾಯತ್ ನಗರ ಅಲ್ ಹಿದಾಯ ಜುಮ್ಮಾ ಮಸೀದಿಯ ಮೇಲಂತಸ್ತು ಉದ್ಘಾಟನೆ, ಮೆಹ್ಫಿಲೇ ತ್ವಯಿಬಾ ಹಾಗೂ ಶೈಖ್ ರಿಫಾಯೀ ಅನುಸ್ಮರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಮಾತನಾಡಿದರು.
ಮಸೀದಿ ವತಿಯಿಂದ ವಿದ್ಯಾರ್ಥಿಗಳಿಗೆ ಧಾರ್ಮಿಕ ಮತ್ತು ಲೌಕಿಕ ವಿದ್ಯಾಭ್ಯಾಸ ನೀಡಲಾಗುತ್ತಿದ್ದು, ಮದರಸ ಬಿಟ್ಟವರಿಗೆ ವಿಶೇಷ ತರಗತಿ ನೀಡಲಾಗುತ್ತಿದೆ. ಮಂಗಳವಾರ ಮಹಿಳೆಯರಿಗಾಗಿಯೇ ಪ್ರತ್ಯೇಕ ತರಗತಿ ನಡೆಸಲಾಗುತ್ತಿದೆ. ಶುಕ್ರವಾರ ಮೂರು ಶಾಲೆಗಳಿಂದ 500ರಷ್ಟು ವಿದ್ಯಾರ್ಥಿಗಳು ನಮಾಝ್ ಗೆ ಬರುತ್ತಿದ್ದು, ಈ ನಿಟ್ಟಿನಲ್ಲಿ ಮಸೀದಿ ವಿಸ್ತರಿಸುವ ಯೋಜನೆಗೆ ದಾನಿಗಳು ಹಿಂದೇಟು ಹಾಕದೆ ಸಹಕರಿಸಿದ್ದಾರೆ ಎಂದರು.
ಕೆ.ಸಿ.ರೋಡ್ ಸಿಟಿಎಮ್ ಸಲೀಂ ಅಸ್ಸಖಾಫ್ ತಂಙಳ್ ದುಆ ಮಾಡಿದರು. ಕಾಸರಗೋಡು ಜಾಮಿಯಾ ಸಅದಿಯಾ ಪ್ರೊಫೆಸರ್ ಕೆ.ಪಿ. ಹುಸೈನ್ ಸಅದಿ ನೇತೃತ್ವ ವಹಿಸಿದ್ದರು. ಆಹಾರ ಸಚಿವ ಯು.ಟಿ.ಖಾದರ್, ಸದರ್ ಮುಅಲ್ಲಿ ಅಬ್ದುಲ್ ಅಝೀಝ್ ಸಖಾಫಿ, ಮುಅಲ್ಲಿಂ ಅಶ್ರಫ್ ಅಮ್ಜದಿ, ಕಾರ್ಯದರ್ಶಿ ಝುಬೈರ್ ಝುಹುರಿ, ಎಸ್.ಎಸ್.ಎಫ್. ಹಿದಾಯತ್ ನಗರ ಅಧ್ಯಕ್ಷ ಶಬೀರ್ ಅಜ್ಹರಿ, ಪ್ರಮುಖರಾದ ಪಿ.ಎಮ್. ಮುಹಮ್ಮದ್ ಮದನಿ, ಕೆ.ಎಸ್.ಮೊದಿನ್ ಬಾವ ತಲಪಾಡಿ, ಉದ್ಯಮಿಗಳಾದ ಮೊದಿನ್ ಸ್ವಾಲಿಹ್, ಅನ್ವರ್ ಹುಸೈನ್ ಉಳ್ಳಾಲ, ಮೂಸ ಕೆ.ಸಿ.ನಗರ, ಅಬ್ಟಾಸ್ ಪೆರಿಬೈಲ್, ಯು.ಬಿ.ಮುಹಮ್ಮದ್, ಇಕ್ಬಾಲ್, ಪಿ.ಎ. ಅಹ್ಮದ್ ಕುಂಞಿ, ಸುಲೈಮಾನ್, ಅಬ್ದುಲ್ ಖಾದರ್, ಮಜೀದ್ ಹಸನ್, ಕೆ.ಎಫ್ ಅಬ್ದುಲ್, ನಝೀರ್, ಇಬ್ರಾಹಿಂ ಪೂಮನ್ನು ತಲಪಾಡಿ, ಅಬ್ಟಾಸ್, ಹನೀಫ್ ಕೋಟೆಪುರ, ವಕ್ಪ ಸಮಿತಿ ಸದಸ್ಯ ಉಸ್ಮಾನ್, ಶರೀಫ್ ಮಿಲ್ಲತ್ ನಗರ, ಅಹ್ಮದ್ ಬಾವ, ಸಾಮಾಜಿಕ ಕಾರ್ಯಕರ್ತ ಅಬ್ದುಲ್ ಬಶೀರ್, ಎಮ್.ಎಮ್. ಅಬ್ದುಲ್, ರಹೀಂ ಯು.ಬಿ.ಎಮ್, ಅಬ್ದುಲ್ ಬಶೀರ್, ಮುನೀರ್ ಎಸ್.ಎಚ್, ಬಶೀರ್ ಎಸ್. ಎಚ್. ಉಪಸ್ಥಿತರಿದ್ದರು. ಮಸೀದಿಯ ಖತೀಬ್ ಅಬು.ಅಹ್ಮದ್ ಕಬೀರ್ ಸಅದಿ ಉಳ್ಳಾಲ ಸ್ವಾಗತಿಸಿದರು.