Home ಧಾರ್ಮಿಕ ಸುದ್ದಿ ಹಸುರುವಾಣಿ ಹೊರೆಕಾಣಿಕೆ ಮೆರವಣಿಗೆ

ಹಸುರುವಾಣಿ ಹೊರೆಕಾಣಿಕೆ ಮೆರವಣಿಗೆ

1468
0
SHARE

ಬೆಳ್ತಂಗಡಿ : ಇತಿಹಾಸ ಪ್ರಸಿದ್ಧ ಬೆಳಾಲು ಅನಂತೋಡಿ ಶ್ರೀ ಅನಂತ ಪದ್ಮನಾಭ ದೇವಸ್ಥಾನದ ಬ್ರಹ್ಮಕಲಶೋತ್ಸವ ಮೇ 11ರಂದು ಆರಂಭಗೊಂಡಿದ್ದು, 20ರ ವರೆಗೆ ಜರಗಲಿದೆ. ಆ ಪ್ರಯುಕ್ತ ಶನಿವಾರ ಊರ-ಪರವೂರ ಭಕ್ತರು ಹಸುರುವಾಣಿ ಹೊರೆಕಾಣಿಕೆ ಸಮರ್ಪಿಸಿದರು.

ಬೆಳಗ್ಗೆ 11ಕ್ಕೆ ಬೆಳಾಲು, ಮಾಯ, ಕೊಲ್ಪಾಡಿ, ಸುರುಳಿ ಪ್ರದೇಶದ ನೂರಾರು ಭಕ್ತರು ಹೊರೆಕಾಣಿಕೆಯನ್ನು ಮಹಾದ್ವ್ವಾರದಿಂದ ಚೆಂಡೆ, ವಾದ್ಯಘೋಷ ದೊಂದಿಗೆ ಮೆರವಣಿಗೆಯಲ್ಲಿ ತಂದು ದೇಗುಲಕ್ಕೆ ಸಮರ್ಪಿಸಿದರು. 30ಕ್ಕೂ ಹೆಚ್ಚು ಪಿಕಪ್‌-ತ್ರಿಚಕ್ರ ವಾಹನ ಹಾಗೂ 120ಕ್ಕೂ ಹೆಚ್ಚು ಬೈಕ್‌ಗಳಲ್ಲಿ ಸಾಗಿಬಂದು, ಅನಂತರ ದೇವಸ್ಥಾನಕ್ಕೆ ಸುತ್ತು ಬಂದು ಹಸುರುವಾಣಿ ಹೊರೆಕಾಣಿಕೆಯನ್ನು ಉಗ್ರಾಣದಲ್ಲಿರಿಸಲಾಯಿತು.

ಇದಕ್ಕೂ ಮುನ್ನ ಬೆಳಗ್ಗೆ 8ಕ್ಕೆ ದೇವರ ಸಹಸ್ರ ಮೋದಕ ಹೋಮ, ಬಳಿಕ ಶರತ್‌ಕೃಷ್ಣ ಪಡ್ವೆಟ್ನಾಯ ಉಜಿರೆ ಅವರು ಕ್ಷೇತ್ರದ ಕಾರ್ಯಾಲಯ ಉದ್ಘಾಟಿಸಿದರು. ಚಾಲನೆ ನೀಡಿ ದರು. ಉದ್ಯಮಿ ರಮಾನಂದ ಸಾಲ್ಯಾನ್‌ ಅನ್ನಛತ್ರ ಉದ್ಘಾಟಿಸಿದರು. ಮಧ್ಯಾಹ್ನ ಮಹಾಪೂಜೆ, ಅನ್ನಪ್ರಸಾದ ಜರಗಿತು.

LEAVE A REPLY

Please enter your comment!
Please enter your name here