ಸಸಿಹಿತ್ಲು : ಐತಿಹಾಸಿಕ ಕಾರ್ಣಿಕ ಕ್ಷೇತ್ರವಾಗಿರುವ ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನದ ನಡಾವಳಿ ಮಹೋತ್ಸವವು ವಿವಿಧ ಸೇವೆ, ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಭಕ್ತ ಜನಸಾಗರದ ನಡುವೆ ಸಂಪನ್ನಗೊಂಡಿತ್ತು. ನಡಾವಳಿ ಮಹೋತ್ಸವವು ಒಟ್ಟು 64 ಸುತ್ತು ಬಲಿಯೊಂದಿಗೆ ನಡೆಯಿತು.
ಮಹೋತ್ಸವದ ಮೂರ್ತಿ ಬಲಿ, ವಿವಿಧ ವಾದ್ಯ ಪ್ರಕಾರಗಳೊಂದಿಗೆ ಶೃಂಗಾರಗೊಳಿಸಿದ ಪಲ್ಲಕ್ಕಿಯಲ್ಲಿ ದೇವಿಯ ಸುತ್ತು, ಕ್ಷೇತ್ರದ ಯಕ್ಷಗಾನ ಮಂಡಳಿಯವರಿಂದ ಪಲ್ಲಕ್ಕಿಯೊಂದಿಗೆ ವಿಶೇಷ ನೃತ್ಯದ ಸುತ್ತು ಬಲಿ, ಮುಂಜಾನೆ ಬಲಿ ಮೂರ್ತಿಯ ಜತೆಗೆ ಭಕ್ತ ರಿಂದ ಉರುಳು ಸೇವೆ ಮತ್ತು ಕಂಚಿಲು ಸೇವೆ ಜರ ಗಿ ತು. ಈ ಸಂದರ್ಭದಲ್ಲಿ ಸಾವಿರಾರು ಭಕ್ತರು ಶ್ರೀ ದೇವಿಯ ದರ್ಶನ ಪಡೆದು ಅನ್ನ ಪ್ರಸಾದವನ್ನು ಸ್ವೀಕರಿಸಿದರು.
ವಿಶೇಷ ಸಾರಿಗೆ ವ್ಯವಸ್ಥೆ
ಕ್ಷೇತ್ರಕ್ಕೆ ಆಗಮಿಸುವ ಭಕ್ತರಿಗೆ ವಿಶೇಷ ಸಾರಿಗೆ ವ್ಯವಸ್ಥೆಯನ್ನು ಸ್ಥಳೀಯರು ಮಾಡಿದ್ದರು. ಸಂಚಾರ ನಿಯಂತ್ರಣಕ್ಕೆ ಪೊಲೀಸ ರೊಂದಿಗೆ ಗೃಹರಕ್ಷಕ ದಳ ಹಾಗೂ ಸ್ಥಳೀಯ ಯುವಕರು ಸಹಕರಿಸಿದರು. ಕ್ಷೇತ್ರದ ಆಡಳಿತ ಮೊಕ್ತೇಸರರು, ಆನುವಂಶಿಕ ಮೊಕ್ತೇಸರರು, ಸಮಿತಿಯ ಗೌರವಾಧ್ಯಕ್ಷರು, ಅಧ್ಯಕ್ಷರು, ಪದಾಧಿಕಾರಿಗಳು, ಏಳೂರ ಗುರಿಕಾರರು, ಕ್ಷೇತ್ರದ ಆಡಳಿತ ಮಂಡಳಿ, ಅಭಿವೃದ್ಧಿ ಸಮಿತಿ, ಜೀರ್ಣೋದ್ಧಾರ ಸಮಿತಿಯ ಪದಾ ಧಿಕಾರಿಗಳು, ಊರ ಪರವೂರ ಭಕ್ತರು ಉಪಸ್ಥಿತರಿದ್ದರು.
ವಿವಿಧ ಸೇವೆ
ಕ್ಷೇತ್ರದಲ್ಲಿ ಈ ಬಾರಿ ಒಟ್ಟು 70 ಬಾಲಕ, ಬಾಲಕಿಯರು ತಮ್ಮ ಕುಟುಂಬದವರೊಂದಿಗೆ
ಕಂಚಿಲು ಸೇವೆಯನ್ನು ನೀಡಿದರು. 40 ಮಂದಿ ತುಲಾ ಭಾರ ಸೇವೆ, 200ಕ್ಕು ಹೆಚ್ಚು ಮಂದಿ
ಉರುಳು ಸೇವೆಯನ್ನು ನಡೆಸಿದರು.