ಮಧೂರು: ಮಧೂರು ಕ್ಷೇತ್ರದ ಅರ್ಚಕರ ಹುದ್ದೆಗೆ 40 ವರ್ಷಗಳಿಂದ ಕಾನೂನು ಹೋರಾಟ ಮಾಡುತ್ತಿರುವ ಮೇಲಿನ ಮನೆ ಕಲ್ಲೂರಾಯರ ಮನೆಯವರಾದ ವೇ|ಮೂ| ವೆಂಕಟಕೃಷ್ಣ ಕಲ್ಲೂರಾಯ ಮತ್ತು ವೇ|ಮೂ| ನಾಮದೇವ ಕಲ್ಲೂರಾಯ ಅವರಿಗೆ ಕೇರಳ ಉಚ್ಚ ನ್ಯಾಯಾಲಯದ ತೀರ್ಪಿನ ಪ್ರಕಾರ ಪಾರಂಪರ್ಯ ಅರ್ಚಕರಾಗಿ ನಿಯಮಿತರಾಗಿದ್ದು ಶ್ರೀ ಕ್ಷೇತ್ರದಲ್ಲಿ ಹುದ್ದೆಗೆ ಹಾಜರಾದರು. ಇವರೀರ್ವರನ್ನು ಮಧೂರಿನ ಭಕ್ತ ಜನರು ಮೆರವಣಿಗೆಯಲ್ಲಿ ಶ್ರೀ ಕ್ಷೇತ್ರಕ್ಕೆ ಕರೆತಂದರು.
ಕ್ಷೇತ್ರದಲ್ಲಿ ನಡೆದ ಸ್ವಾಗತ ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ತಂತ್ರಿವರ್ಯರಾದ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ, ತಾರಾನಾಥ ಮಧೂರು, ಯೋಗೀಶ್ ಎಂ.ಆರ್, ನಾರಾ
ಯಣಯ್ಯ, ಕೆ. ವಿಷ್ಣು ಭಟ್, ವಾಸುದೇವ ಹೊಳ್ಳ, ಚಂದ್ರಹಾಸ ಕೆ, ಮಾಧವ ಮಾಸ್ಟರ್, ಗಣಪತಿ ಕೋಟೆಕಣಿ, ನಾರಾಯಣ ರಾವ್ ಕೋಟೆಕಣಿ, ಮುರಳಿ ಗಟ್ಟಿ, ದಿವಾಕರ ಆಚಾರ್ಯ ಮೊದಲಾದವರಿದ್ದರು. ಧಮೇಂದ್ರ ಆಚಾರ್ ಅಧ್ಯಕ್ಷತೆ ವಹಿಸಿದರು. ಗೋಪಾಲಕೃಷ್ಣ ಭಟ್, ವೇಣುಗೋಪಾಲ ಕಲ್ಲೂರಾಯ, ಬಾಲಕೃಷ್ಣ ಕಲ್ಲೂರಾಯ ಮೊದಲಾದವರು ಮಾತನಾಡಿದರು.