ನಗರ : ಪಟ್ನೂರು ಯರ್ಮುಂಜಪಳ್ಳ ಮರಿಯಪ್ಪ ಭಟ್ ಸ್ಮಾರಕ ಅಭಿನಯ ರಂಗಮಂದಿರದ ವಠಾರದಲ್ಲಿ ಎ. 2ರಂದು ಅಶ್ವತ್ಥ ಪೂಜೆಯ ಪೂರ್ಣ ಮಂಡಲೋತ್ಸವ ನಡೆಯಿತು.
ವೇ| ಮೂ| ಹರಿಪ್ರಸಾದ್ ಭಟ್ ಬನಾರಿ ಅವರ ನೇತೃತ್ವದಲ್ಲಿ ಯರ್ಮುಂಜಪಳ್ಳ ಶ್ರೀ ಅಶ್ವತ್ಥಕಟ್ಟೆ ದೇವತಾ ಸಮಿತಿ, ಶ್ರೀ ಧೂಮಾವತಿ ಯುವಕ ಮಂಡಲ, ಪಟ್ನೂರು ಜಯಕರ್ನಾಟಕ ಘಟಕದ ಸಹಯೋಗದಲ್ಲಿ ನಡೆಯಿತು.
ಬೆಳಿಗ್ಗೆ ಸಾಮೂಹಿಕ ದೇವತಾ ಪ್ರಾರ್ಥನೆ, ಗಣಪತಿ ಹವನ, ಅಶ್ವತ್ಥ ನಾರಾಯಣ ಕಲ್ಪೋಕ್ತ ಪೂಜೆ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಡಾ| ಕಿರಣ್ ಕುಮಾರ್ ಸಾರ ಥ್ಯದ ಗಾನಸಿರಿ ಸ್ವರ ಸಂಗಮ ಗಾಯನ ತಂಡದಿಂದ ಕನ್ನಡದ ಅತಿಮಧುರ ಗೀತೆಗಳ ಸಂಗಮ ನಡೆಯಿತು.
ರಾತ್ರಿ ವಿಠಲ ನಾಯಕ್ ಮತ್ತು ಬಳಗ ಕಲ್ಲಡ್ಕ ಅವರಿಂದ ಗೀತಾ ಸಾಹಿತ್ಯ ಸಂಭ್ರಮ, ಚೌಕಿ ಪೂಜೆ, ಮಂಗಳೂರು ಬಾಳ ಕಳುವಾರು ಬೆಂಕಿನಾಥೇಶ್ವರ ಕೃಷಾಪೋಷಿತ ಯಕ್ಷ ಗಾನ ಮಂಡಳಿ ಅವರಿಂದ ಸತ್ಯೊದ ಸ್ವಾಮಿ ಕೊರಗಜ್ಜ ಯಕ್ಷಗಾನ ನಡೆಯಿತು. ಮಧ್ಯಾಹ್ನ , ರಾತ್ರಿ ಅನ್ನಸಂತರ್ಪಣೆ ನಡೆಯಿತು.