Home ಧಾರ್ಮಿಕ ಸುದ್ದಿ ನವೀಕರಣಗೊಳ್ಳುತ್ತಿರುವ ಬಲ್ಯ ಪಟ್ನೂರು ದೈವಸ್ಥಾನದಲ್ಲಿ ಶ್ರಮದಾನ

ನವೀಕರಣಗೊಳ್ಳುತ್ತಿರುವ ಬಲ್ಯ ಪಟ್ನೂರು ದೈವಸ್ಥಾನದಲ್ಲಿ ಶ್ರಮದಾನ

1429
0
SHARE

ಕಡಬ : ನವೀಕರಣಗೊಳ್ಳುತ್ತಿರುವ ಬಲ್ಯ ಪಟ್ನೂರು ಗ್ರಾಮದ ಕೂಡುಕಟ್ಟಿನ ಶ್ರೀ ರಾಜನ್‌ ದೈವ ಹಾಗೂ ಪರಿವಾರ ದೈವಗಳ ದೈವಸ್ಥಾನದದಲ್ಲಿ ಶ್ರಮದಾನದ ಮೂಲಕ ಕೆಲಸ ಕಾರ್ಯಗಳು ಭರದಿಂದ ಸಾಗುತ್ತಿವೆ.

ಎ.10 ಹಾಗೂ 11 ರಂದು ಪುನರ್‌ಪ್ರತಿಷ್ಠೆ, ಕಲಶಾಭಿಷೇಕ ಹಾಗೂ ನೇಮ ಕಾರ್ಯಕ್ರಮವು ಜರಗಲಿದ್ದು, ದೈವಸ್ಥಾನದ ವಠಾರದಲ್ಲಿ ಅಂತಿಮ ಹಂತದ ಕೆಲಸ ಕಾರ್ಯಗಳಲ್ಲಿ ಸ್ಥಳೀಯ ಪರಿಸರದ ಜನರು ಸ್ವಯಂ ಸೇವಕರಾಗಿ ಕೆಲಸ ಮಾಡುತ್ತಿದ್ದಾರೆ. ಶನಿವಾರ ಜರಗಿದ ಶ್ರಮದಾನದ ಕಾರ್ಯಕ್ರಮವು ಶ್ರೀ ರಾಜನ್‌ ದೈವಸ್ಥಾನ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ನಾರಾಯಣ ಗೌಡ ಕೊಲ್ಲಿಮಾರು, ಶ್ರೀ ರಾಜನ್‌ ದೈವ ಸೇವಾ ಸಮಿತಿಯ ಕಾರ್ಯದರ್ಶಿ ಪೂರ್ಣೇಶ್‌ ಗೌಡ ಬಾಬುಬೆಟ್ಟು, ಚಪ್ಪರ ಸಮಿತಿಯ ಸಂಚಾಲಕ ದೇವಯ್ಯ ಗೌಡ ಪನ್ಯಾಡಿ, ಅಣ್ಣಿ ಪೂಜಾರಿ ಪಲ್ಲತ್ತಡ್ಕ ಹಾಗೂ ಇತರ ಪ್ರಮುಖರ ನೇತೃತ್ವದಲ್ಲಿ ನೆರವೇರಿತು.

15 ಲಕ್ಷ ರೂ. ವೆಚ್ಚದಲ್ಲಿ ದೈವಸ್ಥಾನ ನಿರ್ಮಾಣ ಸಂಪೂರ್ಣ ಜೀರ್ಣಾವಸ್ಥೆಯಲ್ಲಿದ್ದ ದೈವಸ್ಥಾನವನ್ನು ಸುಮಾರು 15 ಲಕ್ಷ ರೂ. ವೆಚ್ಚದಲ್ಲಿ ಊರ ಹಾಗೂ ಪರವೂರ ದಾನಿಗಳ ಸಹಕಾರದೊಂದಿಗೆ ಪುನರ್ನಿರ್ಮಾಣ ಮಾಡಲಾಗುತ್ತಿದೆ. ಕೆಂಪು ಕಲ್ಲಿನಲ್ಲಿ ಆಕರ್ಷಕವಾಗಿ ನಿರ್ಮಾ ಣಗೊಳ್ಳುತ್ತಿರುವ ದೈವಸ್ಥಾನಕ್ಕೆ ಸ್ಥಳೀಯ ಕೃಷಿಕ, ಶ್ರೀ ರಾಜನ್‌ ದೈವ ಸೇವಾ ಸಮಿತಿಯ ಕೋಶಾಧಿಕಾರಿ ದೇವದಾಸ ಭಟ್‌ ಪಟ್ನೂರು ಅವರು ತಮ್ಮ ಪಟ್ಟಾ ಜಮೀನನ್ನು ದಾನವಾಗಿ ನೀಡಿದ್ದಾರೆ.

ಸ್ಥಳೀಯ ಸ್ವಯಂ ಸೇವಕರು ಕಳೆದ ಹಲವು ದಿನಗಳಿಂದ ಹಗಲಿ ರುಳೆ ನ್ನದೆ ಶ್ರಮದಾನದ ಮೂಲಕ ದೈವ ಸ್ಥಾನದ ಪರಿಸರವನ್ನು ಸcತ್ಛಗೊಳಿಸಿ ಸಮತಟ್ಟುಗೊಳಿಸುವ ಕೆಲಸವನ್ನು ಮಾಡು ತ್ತಿದ್ದಾರೆ. ಅದೇ ರೀತಿ ಚಪ್ಪರ ಸಮಿತಿಯ ನೇತೃತ್ವದಲ್ಲಿ ಸುಂದರವಾದ ಚಪ್ಪರದ ನಿರ್ಮಾಣವಾಗುತ್ತಿದೆ ಎಂದು ಶ್ರೀ ರಾಜನ್‌ ದೈವಸ್ಥಾನ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ನಾರಾಯಣ ಗೌಡ ಕೊಲ್ಲಿಮಾರು ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here