Home ಧಾರ್ಮಿಕ ಸುದ್ದಿ ಪೊಳಲಿಯಲ್ಲಿ ಕಿಕ್ಕಿರಿದು ತುಂಬಿದ ಭಕ್ತರು

ಪೊಳಲಿಯಲ್ಲಿ ಕಿಕ್ಕಿರಿದು ತುಂಬಿದ ಭಕ್ತರು

451
0
SHARE

ಪೊಳಲಿ : ದೇವಿಗೆ ಪ್ರಿಯ ವಾದ ದಿನ ಶುಕ್ರವಾರ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ಭಕ್ತರು ಕಿಕ್ಕಿರಿದು ತುಂಬಿದ್ದರು. ವಿಶೇಷ ವಾಗಿ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು.

ಮಧ್ಯಾಹ್ನದ ವೇಳೆಗೆ ಕ್ಷೇತ್ರದ ಪ್ರತಿ ಯೊಂದು ಭಾಗವೂ ಭಕ್ತರಿಂದ ತುಂಬಿತ್ತು. ಬೆಳಗ್ಗಿನಿಂದಲೇ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ ಭಕ್ತರು ರಾತ್ರಿವರೆಗೂ ಆಗಮಿಸುತ್ತಲೇ ಇದ್ದರು. ಶುಕ್ರವಾರ ಸುಮಾರು 50 ಸಾವಿರಕ್ಕೂ ಅಧಿಕ ಮಂದಿ ದೇವರ ದರ್ಶನ ಪಡೆದಿದ್ದಾರೆ.

ಅನ್ನಪ್ರಸಾದ ಕ್ಷೇತ್ರದಲ್ಲಿ ಮಧ್ಯಾಹ್ನ 25 ಸಾವಿರ ಮಂದಿಗೆ ಅನ್ನಪ್ರಸಾದದ ವ್ಯವಸ್ಥೆ ಮಾಡಲಾಗಿದ್ದು, ಅಪರಾಹ್ನ 3ರ ವೇಳೆಗೆ 30 ಸಾವಿರಕ್ಕೂ ಅಧಿಕ ಮಂದಿ ಅನ್ನಪ್ರಸಾದ
ಸೇವಿಸಿದ್ದಾರೆ. ಸಂಜೆ 10 ಸಾವಿರಕ್ಕೂ ಅಧಿಕ ಮಂದಿ ಉಪಾಹಾರ ಸೇವಿಸಿದ್ದಾರೆ. ಭಾಗವಹಿಸಿದ್ದ ಭಕ್ತರಿಗೆ ಯಾವುದೇ ತೊಂದರೆಯಾಗದ ರೀತಿಯಲ್ಲಿ ಸಕಲ ವ್ಯವಸ್ಥೆಗಳನ್ನು ಮಾಡಲಾಗಿತ್ತು.

ಪೊಳಲಿ: ಪೊಳಲಿ ಶ್ರೀ ರಾಜರಾಜೇಶ್ವರಿ- ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಪ್ರಯುಕ್ತ ಶುಕ್ರವಾರ ಹಲವು ವೈದಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಪ್ರಾತಃ ಕಾಲ ಗಣಹೋಮ, ದುರ್ಗಾಹೋಮ, ದೇವರುಗಳಿಗೆ ಅನುಜ್ಞಾ ಕಲಶಾಭಿಶೇಕ, ಅಂಕುರ ಪೂಜೆ, ಮಹಾಪೂಜೆ ನಡೆಯಿತು.

ಸಂಜೆ ಮಂಟಪ ಸಂಸ್ಕಾರ, ದುರ್ಗಾಪೂಜೆ, ಬ್ರಹ್ಮಕಲಶಕ್ಕೆ ಅಂಕುರಾರೋಪಣೆ, ವಾಸ್ತು ಪೂಜೆ, ಹೋಮ, ಮಹಾಪೂಜೆ ನಡೆಯಿತು. ಅರ್ಕುಳ ತುಪ್ಪೆಕಲ್ಲು ಅರ್ಕುಳ ಮನೆ ಬೀಡಿನಿಂದ ಉಳ್ಳಾಕ್ಲು ಮಗೃಂತಾಯಿ ದೈವಗಳ ಭಂಡಾರ ಪೊಳಲಿಗೆ ಭವ್ಯ ಮೆರವಣಿಗೆಯೊಂದಿಗೆ ಆಗಮಿಸಿತು. ಹಲವು ಶತಮಾನಗಳಿಂದ ಪೊಳಲಿ ರಾಜರಾಜೇಶ್ವರಿ ದೇವಿಗೂ ಅರ್ಕುಳದ ಧರ್ಮದೇವತೆಗಳಿಗೂ ಅವಿನಾಭಾವ ಸಂಬಂಧವಿದೆ. ಇಲ್ಲಿ ಕಳೆದ ಏಳೆಂಟು ವರ್ಷಗಳಿಂದ ನೇಮ ನಿಂತುಹೋಗಿದ್ದು, ಈ ಬಾರಿ ಮತ್ತೆ ಆರಂಭಗೊಳ್ಳಲಿದೆ.

ಭಂಡಾರವನ್ನು ಪೊಳಲಿಯಲ್ಲಿ ಸೂಕ್ತ ವಿಧಿವಿಧಾನಗಳ ಮೂಲಕ ಸ್ವಾಗತಿಸಲಾಯಿತು. ಮೆರವಣಿಗೆಯೊಂದಿಗೆ ಬಸವನೂ ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು. ವಜ್ರನಾಭ ಶೆಟ್ಟಿ ಅರ್ಕುಳ ಬೀಡು ನೇತೃತ್ವದಲ್ಲಿ ಮೆರವಣಿಗೆ ಆಗಮಿಸಿತ್ತು. ಇದರೊಂದಿಗೆ ಅರ್ಕುಳ ಗ್ರಾಮದ ಹೊರೆಕಾಣಿಕೆಯೂ ಆಗಮಿಸಿತು.

LEAVE A REPLY

Please enter your comment!
Please enter your name here