ಮೂಡುಬಿದಿರೆ: ಅಲಂಗಾರು ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಸೋಮವಾರ ಐದು ದಿನಗಳ ಶಿವರಾತ್ರಿ ಮಹೋತ್ಸವ ಆರಂಭಗೊಂಡಿತು. ದೇವಸ್ಥಾನದಲ್ಲಿ ಸೋಮವಾರ ಶತ ರುದ್ರಾಭಿಷೇಕ, ಪಂಚರತ್ನ ಕೀರ್ತನೆ, ಕರ್ಣಾಟಕ ಶಾಸ್ತ್ರೀಯ ಸಂಗೀತ, ದೀಪಾರಾಧನೆ, ನಾದಸ್ವರ ವಾದನ, ಯಕ್ಷಗಾನ ಪ್ರದರ್ಶನ, ಸಾರ್ವಜನಿಕ ಶತರುದ್ರಾಭಿಷೇಕ, ಬಿಲ್ವಾರ್ಚನೆ, ಶಿವಪೂಜೆ ಜರಗಿತು.
ಮಂಗಳವಾರ ಪುರುಷ ಸೂಕ್ತ ಹೋಮ, ಮಾನಸ ಗಂಗೋತ್ರಿ ಸರೋವರದಲ್ಲಿ ಕೆರೆ ದೀಪೋತ್ಸವ, ಅಷ್ಟಾವಧಾನ ಸೇವೆ -ಚತು ರ್ವೇದ, ಕರ್ಣಾಟಕ ಸಂಗೀತ, ನೃತ್ಯ, ಭಜನೆ,
ವಾದ್ಯಸಂಗೀತ , ತುಳು ನಾಟಕ ಪ್ರದರ್ಶನ ನಡೆ ಯ ಲಿದೆ. ಬುಧವಾರ ಸಂಜೆ ಸ್ಯಾಕ್ಸೋಫೋನ್ವಾದನ, ಚಂದ್ರಮಂಡಲದಲ್ಲಿ ರಥಯಾತ್ರೆ, ಕಟ್ಟೆ ಪೂಜೆ, ಗುರುವಾರ
ಸಂಜೆ ಸ್ಯಾಕ್ಸೋಫೋನ್ ವಾದನ, 8ಕ್ಕೆ ಯಕ್ಷಗಾನ ಪ್ರದರ್ಶನ, ಶುಕ್ರವಾರ ಕವಾಟೋದ್ಘಾಟನೆ, ಸಂಜೆ ಸ್ಯಾಕ್ಸೋಫೋನ್ ವಾದನ, ಓಕುಳಿ, ದೈವಗಳಿಗೆ ನೇಮ, ಧ್ವಜಾವರೋಹಣ, ನಾಟಕ ಪ್ರದರ್ಶನ ನಡೆಯಲಿದೆ. ಐದು ದಿನ ಮಧ್ಯಾಹ್ನ ಅನ್ನ ಸಂತರ್ಪಣೆ, ಸಂಜೆ ಫಲಾಹಾರ ವಿತರಣೆ ಸೇವಾರೂಪದಲ್ಲಿ ನಡೆಯಲಿವೆ.