Home ಧಾರ್ಮಿಕ ಸುದ್ದಿ ಪೊಳಲಿ ಕೊಡಿಮರಕ್ಕೆ ಕಂಚಿನ ಹೊದಿಕೆ ಕೆಲಸ ಆರಂಭ

ಪೊಳಲಿ ಕೊಡಿಮರಕ್ಕೆ ಕಂಚಿನ ಹೊದಿಕೆ ಕೆಲಸ ಆರಂಭ

1477
0
SHARE

ಪೊಳಲಿ: ಇಲ್ಲಿನ ಶ್ರೀ ರಾಜರಾಜೇಶ್ವರೀ ದೇವಸ್ಥಾನಕ್ಕೆ ಬಿಲ್ಲವ ಸಮಾಜದಿಂದ ಸೇವಾರೂಪದಲ್ಲಿ ನೀಡುವ ನೂತನ ಧ್ವಜಸ್ತಂಭದ ಕಂಚಿನ ಹೊದಿಕೆ ಕೆಲಸ ಕಾರ್ಯವನ್ನು ಕಾಂಞಗಾಡಿನ ಶಿಲ್ಪಿ ವಿ.ಪಿ. ಪ್ರಕಾಶ್‌ ನೇತೃತ್ವದಲ್ಲಿ ಆರಂಭಿಸಲಾಗಿದೆ.

ಪಂಚಲೋಹ ಚಿನ್ನದ ಲೇಪನವಿರುವ ನವಿಲು, ಧ್ವಜಸ್ತಂಭದ ಬುಡದಲ್ಲಿ ಅಷ್ಟದಿಕ್ಪಾಲಕರು ಸೇರಿ 3,500 ಕೆ.ಜಿ. ಕಂಚಿನ ಶಿಲಾಕೃತಿಯೊಂದಿಗೆ ತಯಾರಿಸಲ್ಪಟ್ಟ ಕಂಚಿನ ಹೊದಿಕೆಯನ್ನು ಕೊಡಿಮರಕ್ಕೆ ಅಳವಡಿಸಲಿದೆ.

ಈ ಸಂದರ್ಭ ಪೊಳಲಿ ದೇಗುಲದ ಸುಬ್ರಹ್ಮಣ್ಯ ತಂತ್ರಿ, ಅರ್ಚಕ ಪರಮೇಶ್ವರ ಭಟ್, ಕಾರ್ಯನಿರ್ವಹಣಾಧಿಕಾರಿ ಪ್ರವೀಣ್‌, ಸುಬ್ರಾಯ ಕಾರಂತ, ವೆಂಕಟೇಶ್‌ ನಾವಡ, ಗೌರವಾಧ್ಯಕ್ಷ ರಾಮದಾಸ ಕೋಟ್ಯಾನ್‌, ಭುವನೇಶ್‌ ಪಚಿನಡ್ಕ, ಪುರುಷ ಸಾಲ್ಯಾನ್‌, ಶೇಖರ ಬಳ್ಳಿ, ಚಂದಪ್ಪ ಅಂಚನ್‌, ಯಶವಂತ ಪೊಳಲಿ, ಗೋಪಾಲಕೃಷ್ಣ ಕೈಕಂಬ, ನಾರಾಯಣಬಡಕಬೈಲ್‌, ಉಮೇಶ ಬಾರಿಂಜ, ರಾಮಪ್ಪ ಪೂಜಾರಿ, ಗಣೇಶ ಪೂಜಾರಿ, ಪ್ರಶಾಂತ್‌ ವಿಮಲಕೋಡಿ, ಸದಾಶಿವ ಕರ್ಕೇರ ಕಾಜಿಲ, ಲೋಕೇಶ್‌ ಭರಣಿ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here