Home ಧಾರ್ಮಿಕ ಸುದ್ದಿ ಭಜನ ಮಂದಿರ ಪುನಃ ಪ್ರತಿಷ್ಠೆ, ಕಲಾಶಾಭಿಷೇಕ ‘ಧಾರ್ಮಿಕತೆಯಿಂದ ಸಂಸ್ಕಾರದ ಅನಾವರಣ’

ಭಜನ ಮಂದಿರ ಪುನಃ ಪ್ರತಿಷ್ಠೆ, ಕಲಾಶಾಭಿಷೇಕ ‘ಧಾರ್ಮಿಕತೆಯಿಂದ ಸಂಸ್ಕಾರದ ಅನಾವರಣ’

1287
0
SHARE

ಪಡುಪಣಂಬೂರು: ಧಾರ್ಮಿಕತೆಯ ನಂಬಿಕೆಯಿಂದ ಸಂಸ್ಕಾರದ ಅನಾವರಣಗೊಳ್ಳುತ್ತಿದೆ. ಧಾರ್ಮಿಕ ಕ್ಷೇತ್ರದಲ್ಲಿ ಸಂಸ್ಕೃತಿಯ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ನಿರಂತರವಾಗಿ ನಡೆಯುತ್ತಿರಬೇಕು ಎಂದು ವೇ|ಮೂ| ಕಳತ್ತೂರು ಕರುಣಾಕರ ತಂತ್ರಿ ಹೇಳಿದರು. ಕೆರೆಕಾಡು ಶ್ರೀ ದುರ್ಗಾಪರಮೇಶ್ವರೀ ಭಜನ ಮಂದಿರದಲ್ಲಿ ನಡೆದ ಪುನರ್‌ ಪ್ರತಿಷ್ಠೆ, ಕಲಾಶಾಭಿಷೇಕ ವಿವಿಧ ಧಾರ್ಮಿಕ ಕಾರ್ಯಕ್ರಮದ ಧಾರ್ಮಿಕ ಸಭೆಯಲ್ಲಿ ಅವರು ಮಾತನಾಡಿದರು.

ಮಂದಿರದ ಗೌರವಾಧ್ಯಕ್ಷ ಪಠೇಲ್‌ ವಾಸುದೇವರಾವ್‌ ಪುನರೂರು ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಸಾಮೂಹಿಕ ಸಾರ್ವಜನಿಕ ಸತ್ಯನಾರಾಯಣ ಪೂಜಾ ಕಾರ್ಯಕ್ರಮವು ಜರುಗಿತು.

ಪಡುಪಣಂಬೂರು ಗ್ರಾಮ ಪಂಚಾಯತ್‌ನ ಉಪಾಧ್ಯಕ್ಷೆ ಸುರೇಖಾ ಕರುಣಾಕರ್‌, ಕಿಲ್ಪಾಡಿ ಗ್ರಾಮ ಪಂಚಾಯತ್‌ ಸದಸ್ಯೆ ದಮಯಂತಿ ಮಾಧವ ಶೆಟ್ಟಿಗಾರ್‌, ಪುನರೂರು ಜನವಿಕಾಸ ಸಮಿತಿಯ ಎಸ್‌.ಸುರೇಶ್‌ ರಾವ್‌, ಮಂದಿರದ ಆರ್ಚಕ ರಾಘವೇಂದ್ರ ರಾವ್‌, ಅಧ್ಯಕ್ಷ ಮನೋಹರ್‌ ಜಿ. ಕುಂದರ್‌, ಮಾತೃ ಮಂಡಳಿಯ ರತ್ನಾ ಶಿವಾನಂದ ಕೋಟ್ಯಾನ್‌, ಲಲಿತಾ ಭಾಸ್ಕರ ಶೆಟ್ಟಿಗಾರ್‌, ಭಾರತೀ ಯೋಗಾನಂದ, ಗೌರವ ಸಲಹೆಗಾರರಾದ ಸಂಜೀವ ಶೆಟ್ಟಿ, ಟಿ.ಎನ್‌.ರವೀಂದ್ರನ್‌, ಉಪೇಂದ್ರ ಆಚಾರ್ಯ, ಸುರೇಂದ್ರ ಪದ್ಮಶಾಲಿ,ಭಾಸ್ಕರ ಶೆಟ್ಟಿಗಾರ್‌, ಮಾಧವ ಶೆಟ್ಟಿಗಾರ್‌ ಮತ್ತಿತರರು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಹರ್ಷ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here