ಬಡಗನ್ನೂರು : ನಿಡ್ಪಳ್ಳಿ ಮೂಲ ಗ್ರಾಮಕ್ಕೆ ಸಂಬಂಧಿಸಿದ ಕಂಬಳತ್ತಡ್ಡ ಧೂಮಾವತಿ, ರಕ್ತೇಶ್ವರಿ, ನಾಗ ಸನ್ನಿಧಿಯಲ್ಲಿ ವರ್ಷಾವಧಿ ತಂಬಿಲ ಮೇ 1ರಂದು ನಡೆಯಿತು.
ಶ್ರೀ ಶಾಂತದುರ್ಗಾ ದೇವಸ್ಥಾನದ ಅರ್ಚಕ ವೇದ ಮೂರ್ತಿ ರಾಜೇಂದ್ರ ಭಟ್ ಪೂಜಾ ವಿಧಿ ವಿಧಾನವನ್ನು ನೆರವೇರಿಸಿದರು. ಶ್ರೀ ಶಾಂತದುರ್ಗಾ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ನಾಗೇಶ ಗೌಡ ಪುಳಿತ್ತಡಿ, ಕಂಬಳತ್ತಡ್ಡ ಸೇವಾ ಸಮಿತಿ ಅಧ್ಯಕ್ಷ ಶಿವಪ್ಪ ಗೌಡ ಚೆಲ್ಯರಮೂಲೆ ಹಾಗೂ ಪದಾಧಿಕಾರಿಗಳು ಮತ್ತು ಭಕ್ತರು ಪಾಲ್ಗೊಂಡಿದ್ದರು.