ಬ್ರಹ್ಮಾವರ: ಉಪ್ಪೂರು ತೆಂಕಬೆಟ್ಟು ಶ್ರೀ ಬಬ್ಬುಸ್ವಾಮಿ ದೈವಸ್ಥಾನದಲ್ಲಿ ಶ್ರೀ ಬಬ್ಬುಸ್ವಾಮಿ ಹಾಗೂ ಪರಿವಾರ ದೈವಗಳ ಪುನಃಪ್ರತಿಷ್ಠೆ, ಕಲಶಾಭಿಷೇಕ, ಮಹಾ ಅನ್ನಸಂತರ್ಪಣೆ ಜರಗಿತು.
ಗುರುವಾರ ಹೊರೆಕಾಣಿಕೆ ಮೆರವಣಿಗೆ, ಸಂಜೆ ಪ್ರಾರ್ಥನೆ, ಗೇಹ ಪ್ರತಿಗೃಹ,ಪ್ರಾಸಾದ ಶುದ್ಧಿ, ವಾಸ್ತುಪೂಜೆ, ಬಲಿ ಪ್ರತಿಷ್ಠಾಯಾಗ, ಬಿಂಬ ಶುದ್ಧಿ, ಅಧಿವಾಸ ಪೂಜೆ ಜರಗಿತು.
ಶುಕ್ರವಾರ ಬೆಳಗ್ಗೆ ಪ್ರತಿಷ್ಠೆ, ಕಲಶ ಪ್ರತಿಷ್ಠೆ, ಕಲಾತತ್ವ ಹೋಮ, ಕಲಶಾಭಿಷೇಕ, ಮಹಾಪೂಜೆ, ದರ್ಶನ ಸೇವೆ ಹಾಗೂ ಪ್ರಸಾದ ವಿತರಣೆ, ಮಧ್ಯಾಹ್ನ ಅನ್ನಸಂತರ್ಪಣೆ ನೆರವೇರಿತು.
ಮಧ್ಯಾಹ್ನ ಭಜನಾ ಕಾರ್ಯಕ್ರಮ, ಸಂಜೆ ಧಾರ್ಮಿಕ ಸಭೆ, ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮ, ಶ್ರೀ ಬಬ್ಬುಸ್ವಾಮಿ ಚರಿತ್ರೆ ಆಧಾರಿತ ತುಳು ನೃತ್ಯ ರೂಪಕ ಮೈಮೆದ ಬಬ್ಬುಸ್ವಾಮಿ ಪ್ರದರ್ಶನಗೊಂಡಿತು.