ಕಟಪಾಡಿ : ವೇಣು ಗಿರಿ ಶ್ರೀ ಕಾಳಿಕಾಂಬಾ ವಿಶ್ವಕರ್ಮೇಶ್ವರ ದೇವಸ್ಥಾನದಲ್ಲಿ ಗುರು ಪೂರ್ಣಿಮೆಯ ಪ್ರಯುಕ್ತ ವರ್ಷಂಪ್ರತಿಯಂತೆ ಭಕ್ತರ ನೆರವಿನಿಂದ ಲೋಕ ಕಲ್ಯಾಣಾರ್ಥವಾಗಿ ಶ್ರೀ ಆನೆಗುಂದಿ ಸಂಸ್ಥಾನದ ಜಗದ್ಗುರು ಶ್ರೀ ನಾಗಧರ್ಮೇಂದ್ರ ಸ್ವಾಮೀಜಿ ವೃಂದಾವನದಲ್ಲಿ ಎಳನೀರು ಅಭಿಷೇಕ ನಡೆಸಲಾಯಿತು.
ಈ ಸಂದರ್ಭ ದೇವಸ್ಥಾನದ ಆಡಳಿತ ಮೊಕ್ತೇಸರ ನವೀನ್ ಆಚಾರ್ಯ ಪಡುಬಿದ್ರಿ, ಎರಡನೇ ಮೊಕ್ತೇಸರ ಅನಂತಯ್ಯ ಆಚಾರ್ಯ ಕಳತ್ತೂರು, ಮೂರನೇ ಮೊಕ್ತೇಸರ ಸುದರ್ಶನ್ ಪುರೋಹಿತ್ ಪಡುಬಿದ್ರಿ, ಆಡಳಿತ ಮಂಡಳಿಯ ಸದಸ್ಯ ಪಡುಕುತ್ಯಾರು ಸದಾಶಿವ ಎ.ಆಚಾರ್ಯ ಪಡುಕುತ್ಯಾರು, ವೈದಿಕರಾದ ತಂತ್ರಿಗಳಾದ ವಿಶ್ವನಾಥ ಪುರೋಹಿತ್, ದಿವಾಕರ ಪುರೋಹಿತ್, ಮುರಳಿ ಪುರೋಹಿತ್, ಯುವ ಸಂಘಟನೆಯ ಸಂಚಾಲಕ ಮುರಳೀಧರ್ ಆಚಾರ್ಯ ಇನ್ನಂಜೆ, ಪ್ರಧಾನ ಕಾರ್ಯದರ್ಶಿ ಹರೀಶ್ ಆಚಾರ್ಯ ಕಳತ್ತೂರು, ಉಪಾಧ್ಯಕ್ಷ ಸುಧಾಕರ ಆಚಾರ್ಯ ಬಿಳಿಯಾರು, ಪ್ರಕಾಶ್ ಆಚಾರ್ಯ ಇನ್ನಂಜೆ, ಸದಸ್ಯರಾದ ವಿಶ್ವನಾಥ ಬಂಟಕಲ್ಲು , ಉಪಸಮಿತಿಯ ಪದಾಧಿಕಾರಿಗಳು, ಸದಸ್ಯರು, ಮೊದಲಾದವರು ಉಪಸ್ಥಿತರಿದ್ದರು.