Home ಧಾರ್ಮಿಕ ಸುದ್ದಿ ದೇವಸ್ಥಾನ ಸ್ಥಳೀಯ ಅಭಿವೃದ್ಧಿಯ ಸಂಕೇತ: ಭುಜಂಗ

ದೇವಸ್ಥಾನ ಸ್ಥಳೀಯ ಅಭಿವೃದ್ಧಿಯ ಸಂಕೇತ: ಭುಜಂಗ

ಶ್ರೀ ಗೌರಿ ಶಂಕರ ದೇವಸ್ಥಾನ ಬ್ರಹ್ಮಕಲಶೋತ್ಸವ: ಪೂರ್ವಭಾವಿ ಸಭೆ

1339
0
SHARE
ಪಡುಪಣಂಬೂರು ಹೊಗೆಗುಡ್ಡೆ ಶ್ರೀ ಗೌರಿ ಶಂಕರ ದೇವಸ್ಥಾನದ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆಯನ್ನು ಅನಾವರಣಗೊಳಿಸಲಾಯಿತು.

ಪಡುಪಣಂಬೂರು: ಧಾರ್ಮಿಕ ಕ್ಷೇತ್ರದ ಅಭಿವೃದ್ಧಿಯಿಂದ ಭಕ್ತರಲ್ಲಿ ದೇವರ ಮೇಲೆ ನಂಬಿಕೆ ಹೆಚ್ಚಾಗುತ್ತದೆ. ದೇವಸ್ಥಾನಕ್ಕೆ ಜನರ ಪ್ರೋತ್ಸಾಹ ಹೆಚ್ಚಾದಂತೆ ಸ್ಥಳೀಯ ಅಭಿವೃದ್ಧಿಯ ಸಂಕೇತವಾಗಿಯೂ ಕ್ಷೇತ್ರವನ್ನು ಕಾಣಬಹುದು ಎಂದು ಮುಂಬಯಿ ಬಂಟರ ಸಂಘದ ಮಾಜಿ ಅಧ್ಯಕ್ಷ ಹೊಗೆಗುಡ್ಡೆ ಶ್ರೀ ಗೌರಿಶಂಕರ ದೇವಸ್ಥಾನದ ಬ್ರಹ್ಮಕಲಶೋತ್ಸವದ ಸಮಿತಿಯ ಅಧ್ಯಕ್ಷ ಕೊಲ್ನಾಡು ಉತ್ರುಂಜೆ ಭುಜಂಗ ಎಂ. ಶೆಟ್ಟಿ ಹೇಳಿದರು.

ಪಡುಪಣಂಬೂರು ಹೊಗೆಗುಡ್ಡೆ ಶ್ರೀ ಗೌರಿಶಂಕರ ದೇವಸ್ಥಾನದ ಬ್ರಹ್ಮ ಕಲಶೋತ್ಸವದ ಸಮಿತಿಯ ನೇತೃತ್ವದಲ್ಲಿ ದೇವಸ್ಥಾನದ ಅಂಗಣದಲ್ಲಿ ಇತ್ತೀಚೆಗೆ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ ನಡೆಸಿ, ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆಯನ್ನು ಅನಾವರಣಗೊಳಿಸಲಾಯಿತು.

ಸಮಿತಿಯ ಗೌರವ ಪ್ರಧಾನ ಕಾರ್ಯದರ್ಶಿ ಕೊಲ್ನಾಡು ಗುತ್ತು ರಾಮಚಂದ್ರ ನಾಯಕ್‌ ಅವರು ಬ್ರಹ್ಮಕಲಶೋತ್ಸವದ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು.

ದೇವಸ್ಥಾನದ ಆಡಳಿತ ಮೊಕ್ತೇಸರ ಎಚ್‌. ಗಣಪತಿ ಭಟ್‌, ಕಲ್ಲಾಪುವಿನ ರತ್ನಾಕರ ಶೆಟ್ಟಿಗಾರ್‌ ಯಾನೆ ಕಾಂತಣ್ಣ ಗುರಿಕಾರ, ಮೂಲ್ಕಿ ಅರಮನೆಯ ಗೌತಮ್‌ ಜೈನ್‌, ಸಮಿತಿಯ ಉಪಾಧ್ಯಕ್ಷರಾದ ವಿದ್ಯಾಧರ ಶೆಟ್ಟಿ ಕೊಲ್ನಾಡುಗುತ್ತು, ಜೈಕೃಷ್ಣ ಶೆಟ್ಟಿ ಕಲ್ಲಿಮಾರ್‌, ಉಮೇಶ್‌ ಪೂಜಾರಿ ಪಡುಪಣಂಬೂರು, ಸದಸ್ಯರಾದ ರತಿ ಎಕ್ಕಾರು, ಶ್ಯಾಮ್‌ಪ್ರಸಾದ್‌ ಪಡುಪಣಂಬೂರು, ವಾಸುದೇವ ಶೆಣೈ ಕೊಲ್ನಾಡು, ನಾಗರಾಜ್‌ ಆಚಾರ್ಯ ಹಳೆಯಂಗಡಿ, ಉಮಾನಾಥ ಶೆಟ್ಟಿಗಾರ್‌ ಕಲ್ಲಾಪು, ಪುಷ್ಪಾ, ಮಂಜುಳಾ, ಸುಮತಿ, ಜೀವನ್‌ ಪ್ರಕಾಶ್‌ ಕಾಮೆರೊಟ್ಟು, ಕೃಷ್ಣ ಶೆಟ್ಟಿಗಾರ್‌ ಕಲ್ಲಾಪು, ಸುಬ್ರಹ್ಮಣ್ಯ ಪ್ರಸಾದ್‌ ಹೊಗೆಗುಡ್ಡೆ,  ಕೃಷ್ಣ ಹೆಬ್ಟಾರ್‌ ಪಡುಪಣಂಬೂರು, ಮಮತಾ, ವಿಶ್ವಾಸ್‌ ಶೆಟ್ಟಿ ಸಸಿತೋಟ, ಚಂದ್ರ ಪಡುತೋಟ ಮತ್ತಿತರರು ಉಪಸ್ಥಿತರಿದ್ದರು.

ಸಮಿತಿಯ ಸಹ ಕಾರ್ಯದರ್ಶಿ ನವೀನ್‌ ಶೆಟ್ಟಿ ಎಡ್ಮೆಮಾರ್‌ ಸ್ವಾಗತಿಸಿ, ನಿರೂಪಿಸಿದರು. ಕೋಶಾಧಿ ಕಾರಿ ಎಚ್‌.ಶ್ರೀಕಾಂತ ಭಟ್‌ ವಂದಿಸಿದರು.

ಸಾನಿಧ್ಯ ವೃದ್ಧಿ
ಮೂಲ್ಕಿ ಸೀಮೆಯಲ್ಲಿ ಅನೇಕ ದೇವಸ್ಥಾನಗಳು ಜೀರ್ಣೋದ್ಧಾರಗೊಂಡು ಬ್ರಹ್ಮಕಲಶೋತ್ಸವದ ಪುಣ್ಯ ಕಾರ್ಯ ನಡೆಯುತ್ತಿದೆ. ಇದರಿಂದ ಸಾನ್ನಿಧ್ಯ ವೃದ್ಧಿಯಾಗುವುದರಿಂದ ಮುಂದಿನ ಹೊಸ ಪೀಳಿಗೆಯನ್ನು ಕ್ಷೇತ್ರದ ಅಭಿವೃದ್ಧಿಯಲ್ಲಿ ಸೇರಿಸಿಕೊಂಡು ಮುನ್ನಡೆಯಂತಾಗಬೇಕು.
ಎಂ. ದುಗ್ಗಣ್ಣ ಸಾವಂತರು,
ಮೂಲ್ಕಿ ಸೀಮೆಯ ಅರಸ

LEAVE A REPLY

Please enter your comment!
Please enter your name here