Home ಧಾರ್ಮಿಕ ಸುದ್ದಿ ಆನೆಗುಡ್ಡೆ ದೇವಸ್ಥಾನದಲ್ಲಿ ಸಂಭ್ರಮದ ಕಾರ್ತಿಕ ಸಂಕಷ್ಟಹರ ಚತುರ್ಥಿ, ದೀಪೋತ್ಸವ

ಆನೆಗುಡ್ಡೆ ದೇವಸ್ಥಾನದಲ್ಲಿ ಸಂಭ್ರಮದ ಕಾರ್ತಿಕ ಸಂಕಷ್ಟಹರ ಚತುರ್ಥಿ, ದೀಪೋತ್ಸವ

1299
0
SHARE

ತೆಕ್ಕಟ್ಟೆ: ಕುಂಭಾಸಿ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ನ.15 ಶುಕ್ರವಾರ‌ ಕಾರ್ತಿಕ ಸಂಕಷ್ಟಹರ ಚತುರ್ಥಿ, ದೀಪೋತ್ಸವ ನಡೆಯಿತು.

ಪೂರ್ವಾಹ್ನ ಅಷ್ಟೋತ್ತರ ಸಹಸ್ರ ನಾಳಿಕೇರ ಗಣಯಾಗ , ಸುವರ್ಣ ಪಾಲಿಕೆ, ರಜತ ರಥ, ರಂಗ ಪೂಜಾದಿ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಸಂಭ್ರಮದ ದೀಪೋತ್ಸವ ಹಾಗೂ ಸುಡುಮದ್ದು ಪ್ರದರ್ಶನಗೊಂಡಿದ್ದು ನಂಬಿದ ನೂರಾರು ಭಕ್ತರು ಶ್ರೀಸನ್ನಿಧಿಯಲ್ಲಿ ನೆರೆದಿದ್ದರು.

ಸಂಜೆ ಶ್ರುತಿ ಮ್ಯೂಸಿಕಲ್ಸ್‌ ಇವರಿಂದ ಭಕ್ತಿ ಸಂಗೀತ ಮತ್ತು ಅಭಿವೃದ್ದಿ ಸಂಸ್ಥೆ ಬಾಳುದ್ರು ಇಲ್ಲಿನ ಮಕ್ಕಳಿಂದ ಭಕ್ತ ಸುಧನ್ವ ಯಕ್ಷಗಾನ ಪ್ರದರ್ಶನಗೊಂಡಿತು .

ಈ ಸಂದರ್ಭದಲ್ಲಿ ದೇವಳ ಹಿರಿಯ ಆಡಳಿತ ಧರ್ಮದರ್ಶಿ ಕೆ.ಸೂರ್ಯನಾರಾಯಣ ಉಪಾಧ್ಯಾಯ, ಆಡಳಿತ ಧರ್ಮದರ್ಶಿ ಕೆ.ಶ್ರೀರಮಣ ಉಪಾಧ್ಯಾಯ, ಮೆನೇಜರ್‌ ನಟೇಶ್‌ ಕಾರಂತ್‌ ತೆಕ್ಕಟ್ಟೆ, ಪರ್ಯಾಯ ಅರ್ಚಕ ಚಂದ್ರಕಾಂತ್‌ ಉಪಾಧ್ಯಾಯ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

 

LEAVE A REPLY

Please enter your comment!
Please enter your name here