Home ನಂಬಿಕೆ ಸುತ್ತಮುತ್ತ ವಿದ್ಯೆ ಪಡೆಯಲೊಬ್ಬ ಗುರು ಬೇಕು…ಗುರುವಿಗೇ ಗುರು ಯಾವುದು?

ವಿದ್ಯೆ ಪಡೆಯಲೊಬ್ಬ ಗುರು ಬೇಕು…ಗುರುವಿಗೇ ಗುರು ಯಾವುದು?

1371
0
SHARE

ಮನುಷ್ಯ ಗಡ್ಡೆ ಗೆಣಸುಗಳನ್ನು ತಿಂದುಕೊಂಡಿದ್ದ ಕಾಲದಲ್ಲಿಯೂ ಯಾವುದನ್ನು ತಿನ್ನಬೇಕು? ಯಾವುದನ್ನು ತಿನ್ನಬಾರದು? ಎಂಬ ಜ್ಞಾನ ಬೇಕೇ ಬೇಕಿತ್ತು. ಕಾಡಿನಲ್ಲಿ ಸಿಗುವ ಎಲ್ಲಾ ಗೆಡ್ಡೆ ಗೆಣಸು ಅಥವಾ ಹಣ್ಣುಗಳು ತಿನ್ನಲು ಯೋಗ್ಯವಾದವುಗಳಲ್ಲ. ಕೆಲವು ವಿಷಪೂರಿತ ಗಡ್ಡೆ ಹಣ್ಣುಗಳೂ ಇವೆ. ಹಾಗಾಗಿ ಯಾವುದು ಯೋಗ್ಯ ಎಂಬುದನ್ನು ಅರಿತುಕೊಳ್ಳುವ ಜ್ಞಾನ ಬೇಕೇ ಬೇಕು. ಈ ರೀತಿ ಬದುಕಿನ ವಿವೇಚನೆ ತಿಳಿಸುವ ವಿದ್ಯೆ ನಮ್ಮೊಳಗೆ ನಾವು ಬೆಳೆಸಿಕೊಳ್ಳುವ, ನಮ್ಮನ್ನು ನಾವು ಬೆಳೆಸಿಕೊಳ್ಳುವ ವಿಶೇಷವಾದ ಬುದ್ಧಿಯ ರೂಪ. ಬದುಕನ್ನು ರೂಪಿಸಿಕೊಳ್ಳಲು ಬೇಕಾಗುವ ವಿಶೇಷವಾದ ಪರಿಕರ ಈ ವಿದ್ಯೆ.

ಒಂದು ಸಂಸ್ಕಾರ, ಒಂದು ಸನ್ನಡತೆ, ಒಂದು ಸದ್ವಿಚಾರ, ಒಂದು ಸುಖಜೀವನ, ಒಂದು ಸುಂದರ ದಾಂಪತ್ಯ, ಒಂದು ಸರಳ ಸಂಸಾರ, ಒಂದು ಶಕ್ತಿಯುತ ಸಮಾಜ, ಒಂದು ವಿಶೇಷವಾದ ದೇಶ ಆಮೇಲೆ ಜಗತ್ತು ಎಲ್ಲವಕ್ಕೂ ವಿದ್ಯೆ ಎಂಬ ಸಾಧನ ಅಗತ್ಯ. ಗೆಲುವಿಗೆ ಮೊದಲು ಆತ್ಮವಿಶ್ವಾಸ ಬೇಕು. ಈ ಆತ್ಮವಿಶ್ವಾಸ ಹೆಚ್ಚಲು, ಅಥವಾ ಸರಿಯಾದ ಮಾರ್ಗದಲ್ಲಿ ಗುರಿ ತಲುಪಲು ವಿದ್ಯೆ ಬೇಕು. ಈ ವಿದ್ಯೆ ಬದುಕನ್ನು ಹಸನಾಗಿಸುವಲ್ಲಿ ಒಂದಲ್ಲ ಸಾವಿರ ದಾರಿ ತೋರುತ್ತದೆ. ವಿದ್ಯೆಯ ವಿಶೇಷ ಗುಣವೆಂದರೆ ಅದು ಕೇವಲ ಒಬ್ಬನ ಜೀವನವನ್ನು ಕಟ್ಟಿಕೊಡುವುದಷ್ಟೇ ಅಲ್ಲ, ಒಂದು ದೇಶದ ಬೆಳವಣಿಗೆಯನ್ನೂ ಆ ದೇಶದ ಸಂಸ್ಕೃತಿಯನ್ನೂ ಉನ್ನತಿಯ ಹಂತಕ್ಕೆ ಕೊಂಡೊಯ್ಯುತ್ತದೆ. ವಿದ್ಯೆ ಸಂಪತ್ತೂ ಹೌದು; ಸಂಸ್ಕಾರವೂ ಹೌದು.

ನೀತಿಶತಕ ವಿದ್ಯೆಯ ಬಗ್ಗೆ ಹೀಗೆ ಹೇಳಿದೆ;

“ವಿದ್ಯಾ ನಾಮ ನರಸ್ಯ ರೂಪಮಧಿಕಂ ಪ್ರಚ್ಚನ್ನಗುಪ್ತಮ್ ಧನಂ
ವಿದ್ಯಾ ಭೋಗಕರೀ ಯಶಸ್ಸುಖಕರೀ ವಿದ್ಯಾ ಗುರೂಣಾಂ ಗುರುಃ |
ವಿದ್ಯಾ ಬಂಧುಜನೋ ವಿದೇಶಗಮನೇ ವಿದ್ಯಾ ಪರದೇವತಾ
ವಿದ್ಯಾ ರಾಜಸು ಪೂಜಿತಾ ನ ತು ಧನಂ ವಿದ್ಯಾವಿಹೀನಃ ಪಶುಃ ||

ವಿದ್ಯೆ ಎಂಬುದು ಮನುಷ್ಯನ ವಿಶೇಷವಾದ ರೂಪ; ಮತ್ತು ಅದು ಅವನ ಬಚ್ಚಿಲ್ಪಟ್ಟ ಹಣ. ವಿದ್ಯೆಯೇ ಅವನಿಗೆ ಸುಖಾಸುಖಗಳನ್ನೂ ಕೀರ್ತಿಯನ್ನೂ ಉಂಟು ಮಾಡುತ್ತವೆ. ಅದು ಅವನ ಗುರುಗಳಿಗೆ ಗುರು! ಪರದೇಶಗಳಿಗೆ ಹೊರಟಾಗ ಅದೇ ಅವನ ಬಂಧು. ಅದೇ ಅವನಿಗೆ ಪರದೈವ. ಅದು ರಾಜರಲ್ಲಿ ಪೂಜಿಸಲ್ಪಟ್ಟಿದೆ; ಆದರೆ, ಹಣವಲ್ಲ. ವಿದ್ಯೆ ಇಲ್ಲದವನು ಪಶುವಿಗೆ ಸಮಾನ!

ಇವಿಷ್ಟು ಸಾಕು, ವಿದ್ಯೆ ಎಂಬ ಶಕ್ತಿಯ ನಿಜವಾದ ಬಲ, ಆಳ ಮತ್ತು ವಿಶಾಲವನ್ನು ತಿಳಿಯಲು. ವಿದ್ಯೆ ಎಂಬುದು ನಮ್ಮೊಳಗಿನ ವಿಶೇಷ ರೂಪ. ಭಿಕ್ಷೆ ಬೇಡಿಯಾದರೂ ವಿದ್ಯೆಯನ್ನು ಸಂಪಾದಿಸಿಕೊಂಡವ ಜೀವನಕ್ಕಾಗಿ ಪರದಾಡುವ ಸ್ಥಿತಿ ಬಾರದು. ವಿದ್ಯೆ ಎಂಬ ಬಂಧು ನಮ್ಮ ಜೋಳಿಗೆಯಲ್ಲಿ ಇದ್ದಾಗ ಬದುಕು ದಿಕ್ಕು ತಪ್ಪುವುದಿಲ್ಲ. ಸ್ವದೇಶವಾಗಲೀ ವಿದೇಶವಾಗಲೀ ಜಯಿಸುವುದಕ್ಕೆ ಈ ವಿದ್ಯೆ ಎಂಬ ಅಸ್ತ್ರ ಸಾಕು. ವಿದ್ಯೆ ಎಂಬುದು ಯಾರೂ ದೋಚಲಾಗದ, ಎಲ್ಲಾ ಸಂಪತ್ತಿಗಿಂತ ಮಿಗಿಲಾದ ಸಂಪತ್ತು. ದೇಶದ ದೊರೆ ಕೂಡ ವಿದ್ಯೆಗೆ ತಲೆ ಬಾಗುತ್ತಾನೆ. ವಿದ್ಯೆ ಇದ್ದವನು ರಾಜನಿಂದಲೂ ಪುರಸ್ಕೃತನಾಗುವನು. ವಿದ್ಯೆ ಇಲ್ಲದವ ಪ್ರಾಣಿಗಿಂತ ಕಡೆ!

ಗುರುವಿಗೆ ಗುರುವೇ ವಿದ್ಯೆ. ವಿದ್ಯೆ ಪಡೆಯಲೊಬ್ಬ ಗುರು ಬೇಕು. ಆ ಗುರುವನ್ನು ಗುರುವಾಗಿಸಿದ್ದು ಈ ವಿದ್ಯೆ. ಗುರು ಕಲಿಸುತ್ತಾ ಕಲಿಯುತ್ತಾನೆ. ವಿದ್ಯೆಯೇ ಗುರುವಿಗೆ ಗುರುವಾಗಲು ಅರಿವಿನ ಹಾದಿ. ಈ ಗುರುವಿನ ಗುರು ಸಂಸ್ಕಾರದ ಪರಿಧಿ; ಬದುಕಿನ ಅನಂತತೆ!

ಭಾಸ್ವ

ಓಂ ಶ್ರೀ ಸಾಯಿ ಜ್ಯೋತಿಷ್ಯಾಲಯ
South Canara’s Famous Asrologer
Family issue, ಮದುವೆಯಲ್ಲಿ ವಿಘ್ನ, ಸತಿ-ಪತಿ ಕಲಹ, Court Case, ವಶೀಕರಣ, Love problems, ಸದಾ ಕುಟುಂಬದಲ್ಲಿ ಕಲಹ, Money problem, ಕೆಲಸದಲ್ಲಿ ಕಿರಿಕಿರಿ, ಮಕ್ಕಳ ಸಮಸ್ಯೆ, ವ್ಯಾಪಾರದಲ್ಲಿ ಅಡೆ-ತಡೆ, Loan Issue, ನಿಮ್ಮ ಯಾವುದೇ ಸಮಸ್ಯೆಗೆ 3 ದಿನಗಳಲ್ಲಿ ಶಾಶ್ವತ ಪರಿಹಾರ.
ಹೊಟೇಲ್ ದುರ್ಗಾ ಇಂಟರ್ ನ್ಯಾಶನಲ್, ರೂಂ. ನಂ. 310, 3ನೇ ಮಹಡಿ, ಸಿಟಿ ಬಸ್ ಸ್ಟ್ಯಾಂಡ್ ಹತ್ತಿರ, ಉಡುಪಿ.
ಪಂಡಿತ್ ಸಾಯಿನಾಥ್ ಜೋಶಿ : Ph- 98449-44242

LEAVE A REPLY

Please enter your comment!
Please enter your name here