Home ಧಾರ್ಮಿಕ ಸುದ್ದಿ ನೂತನ ಧ್ವಜಮರಕ್ಕೆ ತೈಲಾಭ್ಯಂಜನ

ನೂತನ ಧ್ವಜಮರಕ್ಕೆ ತೈಲಾಭ್ಯಂಜನ

1075
0
SHARE

ಪುತ್ತೂರು: ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನೂತನ ಧ್ವಜಮರ ಕೆತ್ತನೆ ಕೆಲಸ ಪೂರ್ಣಗೊಂಡಿದ್ದು, ಡಿ. 2ರಂದು ಬೆಳಗ್ಗೆ ತೈಲಾಭ್ಯಂಜನ ಆರಂಭಗೊಂಡಿತು. ದೇಗುಲದ ಆವರಣದಲ್ಲಿ ಕುಂಟಾರು ರವೀಶ ತಂತ್ರಿ ಅವರು ಧಾರ್ಮಿಕ ವಿಧಿ ವಿಧಾನ ನಡೆಸಿ, ತೈಲಾಭ್ಯಂಜನಕ್ಕೆ ಚಾಲನೆ ನೀಡಿದರು. ಇದಕ್ಕೆ ಮೊದಲು ಶ್ರೀ ಮಹಾಲಿಂಗೇಶ್ವರ ದೇವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಬಳಿಕ ದೇವಸ್ಥಾನದ ಹೊರಾಂಗಣದ ತೈಲಪಾತ್ರೆಯಲ್ಲಿ ಇಡಲಾಗಿದ್ದ ಕೊಡಿಮರಕ್ಕೆ ತೈಲಾಭ್ಯಂಜನ ನಡೆಯಿತು. ಎನ್‌. ಸುಧಾಕರ ಶೆಟ್ಟಿ, ಸದಸ್ಯರಾದ ಯು.ಪಿ. ರಾಮಕೃಷ್ಣ, ರೋಹಿಣಿ ಆಚಾರ್ಯ, ಪ್ರಧಾನ ಅರ್ಚಕ ವಸಂತ ಕೆದಿಲಾಯ ತೈಲವನ್ನು ಸಮರ್ಪಣೆ ಮಾಡಿದರು.

LEAVE A REPLY

Please enter your comment!
Please enter your name here