ಬೆಂಗ್ರೆ : ಶ್ರೀ ಮಹಾವಿಷ್ಣು ಶೇಷಶಯನ ಮಂದಿರ ಇಲ್ಲಿನ ಸುವರ್ಣ ಮಹೋತ್ಸವ ಹಾಗೂ ಅಖಂಡ ಏಕಾದಶ ಭಜನೋತ್ಸವ ಕಾರ್ಯಕ್ರಮದ ಪ್ರಯುಕ್ತ ಧಾರ್ಮಿಕ ಸಭೆ ಜರಗಿತು. ಈ ಸಂದರ್ಭ ವಿವಿಧ ಕ್ಷೇತ್ರಗಳ ಸಾಧನೆಗೈದವರನ್ನು ಸಮ್ಮಾನಿಸಲಾಯಿತು. ಮಾಜಿ ಉಪಸಭಾಪತಿ ಯೋಗೀಶ್ ಭಟ್ ಅಧ್ಯಕ್ಷತೆ ವಹಿಸಿದ್ದರು.
ಮೇಯರ್ ಭಾಸ್ಕರ್ ಕೆ., ಬಿಜೆಪಿ ಮೀನುಗಾರರ ಪ್ರಕೋಷ್ಠದ ರಾಜ್ಯ ಸಂಚಾಲಕ ರಾಮಚಂದರ್ ಬೈಕಂಪಾಡಿ, ಕಾರ್ಪೊರೇಟರ್ ಮೀರಾ ಕರ್ಕೇರ, ಬಿಜೆಪಿ ಮಂಗಳೂರು ದಕ್ಷಿಣ ಮಂಡಲ ಅಧ್ಯಕ್ಷ ವೇದವ್ಯಾಸ ಕಾಮತ್, ಬೆಂಗ್ರೆ ಮಹಾಜನ ಸಭಾದ ಅಧ್ಯಕ್ಷ ಮೋಹನ್ ಬೆಂಗ್ರೆ, ಮಂದಿರದ ಅಧ್ಯಕ್ಷ ಧನ್ರಾಜ್ ಕರ್ಕೇರ, ಮಹಾಸಭಾದ ಪದಾ ಧಿಕಾರಿಗಳು, ಶೇಷಶಯನ ಮಂದಿರದ ಪದಾ ಧಿಕಾರಿಗಳು ಉಪಸ್ಥಿತರಿದ್ದರು.