ಮಹಾನಗರ : ನಗರದ ಸೂಟರ್‌ಪೇಟೆಯಲ್ಲಿರುವ ಶ್ರೀ ಕೋರ್ದಬ್ಬು ದೈವಸ್ಥಾನದ ವಾರ್ಷಿಕ ನೇಮ ನಡೆಯಿತು. ನೇಮ ಮೊದಲು ಧರ್ಮದರ್ಶಿ ಭಾಸ್ಕರ್ ಐತಾಳ್ ಅವರ ನೇತೃತ್ವದಲ್ಲಿ ಸಾರ್ವಜನಿಕ ಸತ್ಯನಾರಾಯಣ ಪೂಜೆಯು ನಡೆಯಿತು. ಅನಂತರ ಸ್ಥಳದ ಗುಳಿಗ, ಶ್ರೀ ಬಬ್ಬುಸ್ವಾಮಿ-ತನ್ನಿಮಾನಿಗ, ರಾಹುಗುಳಿಗ, ಪಂಜುರ್ಲಿ-ಗುಳಿಗ, ಧರ್ಮದೈವ, ಸುಬÂಮ್ಮ-ಸುಬ್ಬಿಗುಳಿಗ, ಸಂಕಳೆಗುಳಿಗ ಹಾಗೂ ಕೊರಗಜ್ಜ ದೈವಗಳ ನೇಮ ನಾಲ್ಕು ದಿನಗಳ ಕಾಲ ಶ್ರೀ ಕ್ಷೇತ್ರದಲ್ಲಿ ನಡೆಯಿತು.
ಸಂಸದ ನಳಿನ್ ಕುಮಾರ್ ಕಟೀಲು ಮತ್ತು ಶಾಸಕ ಜೆ.ಆರ್. ಲೋಬೋ ಅವರು ಕ್ಷೇತ್ರಕ್ಕೆ ಭೇಟಿ ನೀಡಿ ಶ್ರೀ ಬಬ್ಬುಸ್ವಾಮಿ ಹಾಗೂ ಪರಿವಾರ ದೈವಗಳ ಗಂಧಪ್ರಸಾದ ಸ್ವೀಕರಿಸಿದರು.
ಕ್ಷೇತ್ರದ ಪರವಾಗಿ ಅವರನ್ನು ಗುರಿಕಾರರಾದ ಎಸ್. ರಾಘವೇಂದ್ರ ಅವರು ಸಮ್ಮಾನಿಸಿದರು.
ಮಂಗಳೂರು ಮನಪಾ ಕಾರ್ಪೊ ರೇಟರ್ ಅಪ್ಪಿ ಎಸ್., ಕ್ಷೇತ್ರದ ಸಲಹೆಗಾರ ಕೆ. ಪಾಂಡುರಂಗ, ಎಸ್. ಬಾಬು, ಪ್ರಧಾನ ಕಾರ್ಯದರ್ಶಿ ಎಸ್. ಜಗದೀಶ್ಚಂದ್ರ, ಖಜಾಂಚಿ ಎಸ್. ನವೀನ್, ದೈವದ ಪಾತ್ರಿ ಗಳಾದ ಎಸ್. ಗಣೇಶ, ಅರ್ಚಕರಾದ ಜಯ, ಪದಾಧಿಕಾರಿಗಳಾದ ಬಿ. ವಿಶ್ವನಾಥ ಸಾಲ್ಯಾನ್, ಎಸ್. ಪವಿತ್ರಾ, ಮೋಹನ್, ಮೋಹನ್ ದಾಸ್, ಗಣೇಶ್, ಜನಾರ್ದನ, ವಸಂತ, ಸುರೇಶ್, ಗುಣವಂತಿ ಗೋಪಾಲ, ಉಪೇಂದ್ರ, ಪ್ರವೀಣ್, ರಂಜಿತ್, ಬೋಜ, ಅನ್ನಪೂರ್ಣಾ ರಘುರಾಮ್, ಪುರುಷೋತ್ತಮ ಪದಕಣ್ಣಾಯ, ಉಮಾ ಪ್ರಸಾದ್, ಸುನೀಲ್ ರಾಜ್, ಕಿರಣ್ ರಾಜ್, ಸುದೇಶ್ ಕುಮಾರ್, ತಿಲಕ್ ರಾಜ್, ಸಂತೋಷ , ಸಂದೀಪ್ ಉಪಸ್ಥಿತರಿದ್ದರು.
ವಿಜಯ್ ಫ್ರೆಂಡ್ಸ್ ಸರ್ಕಲ್, ಪ್ರಜ್ವಲ್ ಯುವಕ ಮಂಡಲ, ಸೂಟರ್‌ಪೇಟೆ ಫ್ರೆಂಡ್ಸ್ ಸರ್ಕಲ್, ರಾಘವೇಂದ್ರ ಫ್ರೆಂಡ್ಸ್ ಸರ್ಕಲ್, ತುಳುವೆರೆ ಕೂಟ, ಜ್ವಾಲಿ ಫ್ರೆಂಡ್ಸ್, ವೆಲೆನ್ಸಿಯಾ ಆಟೋ ರಿಕ್ಷಾ ಚಾಲಕರ/ಮಾಲಕರ ಸಂಘ, ಸ್ತ್ರೀ ಶಕ್ತಿ ಮಹಿಳಾ ಮಂಡಲ, ಶ್ರೀ ವರಮಹಾಲಕ್ಷ್ಮೀ ಮಹಿಳಾ ಸಂಘ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾ ಭಿವೃದ್ಧಿ ಯೋಜನೆಯ ಸ್ವ-ಸಹಾಯ ಸಂಘಗಳು, ನವೋದಯ ಗ್ರಾಮ ವಿಕಾಸ ಚಾರಿಟೆಬಲ್ ಟ್ರಸ್ಟ್ ಪ್ರವರ್ತಿತ ನವೋದಯ ಸ್ವಸಹಾಯ ಸಂಘಗಳು ಹಾಗೂ ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳ ಸರ್ವ ಸದಸ್ಯರು ನೇಮದಲ್ಲಿ ಭಾಗಿಯಾಗಿದ್ದರು.