ಸುರತ್ಕಲ್: ಇಡ್ಯಾ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ 2020 ಫೆಬ್ರವರಿಯಲ್ಲಿ ಜರಗಲಿರುವ ಬ್ರಹ್ಮ ಕಲಶೋತ್ಸವ, ನಾಗಮಂಡಲ ಧರ್ಮ ನೇಮದ ಪೂರ್ವಭಾವಿ ಸಭೆ ಇತ್ತೀಚೆಗೆ ಜರಗಿತು.
ಶಾಸಕ ಡಾ| ಭರತ್ ಶೆಟ್ಟಿ ವೈ. ಮಾತನಾಡಿ, ಬ್ರಹ್ಮಕಲಶೋತ್ಸವದಂತಹ ಧಾರ್ಮಿಕ ಪ್ರಕ್ರಿಯೆಯಿಂದ ದೇವಸ್ಥಾನದ ಕಾರಣಿಕ, ಕಲೆ ಹೆಚ್ಚಾಗುತ್ತದೆ. ದೇವರ ಸಾನ್ನಿಧ್ಯದಲ್ಲಿ ಪಾವಿತ್ರ್ಯ ಹೆಚ್ಚುತ್ತದೆ. ಈ ನಿಟ್ಟಿನಲ್ಲಿ ಇಲ್ಲಿ ನಡೆಯುವ ಕಾರ್ಯಕ್ರಮಕ್ಕೆ ನನ್ನಿಂದಾದ ಸಹಕಾರ ನೀಡುತ್ತೇನೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಶ್ರೀ ಕ್ಷೇತ್ರದ ಆನುವಂಶಿಕ ಆಡಳಿತ ಮೊಕ್ತೇಸರ ಬ್ರಹ್ಮಶ್ರೀ ಕುಡುಪು ನರಸಿಂಹ ತಂತ್ರಿ ಶುಭಹಾರೈಸಿದರು. ಬ್ರಹ್ಮಶ್ರೀ ಕುಡುಪು ಕೃಷ್ಣರಾಜ ತಂತ್ರಿ ದಿಕ್ಸೂಚಿ ಭಾಷಣ ಮಾಡಿದರು. ದೇವಸ್ಥಾನದ ಆನುವಂಶಿಕ ಮೊಕ್ತೇಸರ ವೇ| ಮೂ| ಐ. ರಮಾನಂದ ಭಟ್ ಪ್ರಸ್ತಾವಿಸಿದರು.
ಊರಿನ ಗುರಿಕಾರರಾದ ಐ.ಕೆ. ನಾರಾಯಣ ರಾವ್, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಕಡಂಬೋಡಿ ಮಹಾ ಬಲ ಪೂಜಾರಿ ನೂತನ ಸಮಿತಿಯ ಪ್ರಮುಖರಾದ ಕೆ.ಸಿ.ನಾಗೇಂದ್ರ ಭಾರ ದ್ವಾಜ್, ಸಂತೋಷ್ ಕುಮಾರ್ ಶೆಟ್ಟಿ, ಸತ್ಯಜಿತ್ ಸುರತ್ಕಲ್, ಕೃಷ್ಣಕುಮಾರ್ ಇಡ್ಯಾ, ದೊಂಬಯ್ಯ ಪೂಜಾರಿ ಇಡ್ಯಾ, ಹಾ.ಜಿ. ಮಂಜಯ್ಯ ಶೆಟ್ಟಿ, ವಿದ್ಯಾಧರ ಭಟ್, ವಾಸುದೇವ ಭಟ್ ಇಡ್ಯಾ ಉಪಸ್ಥಿತರಿದ್ದರು.
ಎಂ. ಸದಾಶಿವ, ಸತೀಶ್ ರಾವ್ ಇಡ್ಯಾ, ಉಲ್ಲಾಸ್ ಶೆಟ್ಟಿ ಪೆರ್ಮುದೆ, ಎಚ್. ದೇವರಾಜ್ ಶೆಟ್ಟಿ ಮಧ್ಯ, ಉಷಾಕಿರಣ್ ಅಭಿಪ್ರಾಯ ತಿಳಿಸಿದರು. ಮಹೇಶ್ ಮೂರ್ತಿ ಸ್ವಾಗತಿಸಿ ಅಗರಿ ರಾಘವೇಂದ್ರ ರಾವ್ ವಂದಿಸಿದರು.