Home ಧಾರ್ಮಿಕ ಸುದ್ದಿ ಸುರತ್ಕಲ್ ಬಾಕಿಮಾರು ಗದ್ದೆಯಲ್ಲಿ ಕದಿರ ಹಬ್ಬಕ್ಕೆ ಭಕ್ತರಿಂದಲೇ ನೇಜಿ ನಾಟಿ

ಸುರತ್ಕಲ್ ಬಾಕಿಮಾರು ಗದ್ದೆಯಲ್ಲಿ ಕದಿರ ಹಬ್ಬಕ್ಕೆ ಭಕ್ತರಿಂದಲೇ ನೇಜಿ ನಾಟಿ

2405
0
SHARE
ಬಾಕಿಮಾರು ಗದ್ದೆಯಲ್ಲಿ ನೇಜಿ ನೆಡುತ್ತಿರುವ ಮಹಿಳೆಯರು.

ಸುರತ್ಕಲ್ : ನೇಜಿ ನೆಡುತ್ತಿರುವ ಮಹಿಳೆಯರು, ಯುವಕರು, ಸಹಾಯ ಮಾಡುತ್ತಿರುವ ಮಕ್ಕಳು ಇನ್ನೊಂದೆಡೆ ಭೂಮಿ ಹದ ಮಾಡುತ್ತಿರುವ ಜೋಡೆತ್ತುಗಳು. ಇದು ರಥಬೀದಿಯ ಇಲ್ಲಿನ ಪುರಾತನ ಮಾರಿಯಮ್ಮ ದೇವಸ್ಥಾನದ ಬಾಕಿಮಾರುಗದ್ದೆಯಲ್ಲಿ ರವಿವಾರ ಕಂಡು ಬಂತು.

ಊರಿನ ಭಕ್ತರು, ನವದುರ್ಗಾ ಫ್ರೆಂಡ್ಸ್‌ ಸರ್ಕಲ್, ತ್ತೈರೂಪಿಣಿ ಮಹಿಳಾ ಮಂಡಳಿ ಸೇರಿ ಕದಿರ ಹಬ್ಬಕ್ಕೆ ತೆನೆ ನಾಟಿ ಮಾಡುವ ಕಾರ್ಯ ಜರಗಿತು.

ಮಹಿಳೆಯರು, ಯುವಕರ ದಂಡು ನೇಜಿ ನಾಟಿ ಮಾಡುವ ಕಾಯಕದಲ್ಲಿ ಕೈ ಜೋಡಿಸಿದರು. ಐದು ಮಾಗಣೆಯ ಶ್ರೀ ಮಾರಿಯಮ್ಮ ದೇವಸ್ಥಾನದಲ್ಲಿ ಕದಿರ ಹಬ್ಬಕ್ಕೆ ಸಾವಿರಾರು ಭಕ್ತರು ಆಗಮಿಸಿ ತೆನೆ ಕೊಂಡೊಯ್ಯುತ್ತಾರೆ.

ದೇವರ ಗದ್ದೆಯಿಂದ ತೆನೆ
ಸಾಂಪ್ರದಾಯಿಕವಾಗಿ ದೇವರ ಮುಂದೆ ತೆನೆಯಿಟ್ಟು ಪೂಜೆ ಸಲ್ಲಿಸಿದ ಬಳಿಕ ಭಕ್ತರು ದೇವರ ಗದ್ದೆಯಿಂದ ತೆನೆಯನ್ನು ತಾವೆ ಕೊಯ್ದು ಮನೆಯಲ್ಲಿ ಕಟ್ಟಿ ವರ್ಷ ಪೂರ್ತಿ ದವಸ ಧಾನ್ಯಗಳಿಂದ ಮನೆ ತುಂಬಿರಲಿ ಎಂದು ಪ್ರಾರ್ಥಿಸುತ್ತಾರೆ.

ದೇಗುಲದ ಆಡಳಿತ ಮಂಡಳಿ ಅಧ್ಯಕ್ಷರಾದ ಓಂಪ್ರಕಾಶ್‌ ಶೆಟ್ಟಿಗಾರ್‌ ಕಡಂಬೋಡಿ, ನಿಕಟಪೂರ್ವ ಅಧ್ಯಕ್ಷ ಕೇಶವ ಶೆಟ್ಟಿಗಾರ್‌, ನವದುರ್ಗಾ ಫ್ರೆಂಡ್ಸ್‌ ಸರ್ಕಲ್ನ ಗೌರವಾಧ್ಯಕ್ಷರಾದ ಮಹಾಬಲ ಪೂಜಾರಿ ಕಡಂಬೋಡಿ, ಉಪಾಧ್ಯಕ್ಷ ಹಾಗೂ ಕೃಷಿಯ ನೇತೃತ್ವ ವಹಿಸಿದ ಸುರೇಶ್‌ ಹೊಸಮನೆ ಮತ್ತು ಸರ್ವ ಸದಸ್ಯರು ತ್ತೈರೂಪಿಣಿ ಮಹಿಳಾ ಮಂಡಳಿಯ ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here