ಸುರತ್ಕಲ್ : ಕುಳಾಯಿಯ ಬ್ರಹ್ಮಶ್ರೀ ನಾರಾಯಣಗುರು ಸಮಾಜ ಸೇವಾ ಸಂಘದಲ್ಲಿ ಗುರುಗಳ ಮೂರ್ತಿ ಪ್ರತಿಷ್ಠಾಪನೆ, ನೂತನ ಮಂದಿರದ ಉದ್ಘಾಟನೆ ಫೆ. 21ರಂದು ಜರಗಲಿದೆ. ಬೆಳಗ್ಗೆ 7 ಗಂಟೆಗೆ ಶಿವಗಿರಿ ಮಠದ ಶ್ರೀ ಸತ್ಯಾನಂದತೀರ್ಥರ ಉಪಸ್ಥಿತಿಯಲ್ಲಿ ಮೂರ್ತಿ ಪ್ರತಿಷ್ಠೆ, 10 ಗಂಟೆಗೆ ನೂತನ ಗುರು ಮಂದಿರವನ್ನು ಸಚಿವ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಲಿದ್ದಾರೆ.
ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ ಜರಗಲಿದೆ. 37ನೇ ಭಜನ ಮಂಗಲೋತ್ಸವ ಮತ್ತು ವಾರ್ಷಿಕೋತ್ಸವವು ಅದೇ ದಿನ ಸಂಜೆ ನಡೆಯಲಿದೆ. ಫೆ. 23ರಂದು ಭಜನ ಮಂಗಲ, ಮಧ್ಯಾಹ್ನ ಅನ್ನಸಂತರ್ಪಣೆ, ಸಂಜೆ 6 ಗಂಟೆಗೆ ಧಾರ್ಮಿಕ ಸಭೆ ನಡೆಯಲಿದೆ. ಬಳಿಕ ತುಳು ನಾಟಕ ಪ್ರದರ್ಶನವಾಗಲಿದೆ ಎಂದು ಪ್ರಕಟನೆ ತಿಳಿಸಿದೆ.