Home ಧಾರ್ಮಿಕ ಸುದ್ದಿ ಶಿಬರೂರು ಶ್ರೀ ಕೊಡಮಣಿತ್ತಾಯ ಕ್ಷೇತ್ರ, ಡಿ.16-23: ವರ್ಷಾವಧಿ ಉತ್ಸವ

ಶಿಬರೂರು ಶ್ರೀ ಕೊಡಮಣಿತ್ತಾಯ ಕ್ಷೇತ್ರ, ಡಿ.16-23: ವರ್ಷಾವಧಿ ಉತ್ಸವ

1078
0
SHARE

ಸುರತ್ಕಲ್‌ : ಇತಿಹಾಸ ಪ್ರಸಿದ್ಧ ಶಿಬರೂರು ಶ್ರೀ ಕೊಡಮಣಿತ್ತಾಯ ಕ್ಷೇತ್ರದ ವರ್ಷಾವ ಧಿ ಉತ್ಸವ, ತಿಬರಾಯನ ಡಿ. 16ರಿಂದ ಡಿ. 23ರ ವರೆಗೆ ಶ್ರೀಕ್ಷೇತ್ರದಲ್ಲಿ ನಡೆಯಲಿದೆ.

ಡಿ.16ರಂದು ಸಂಜೆ ನವಕ ಕಲಶಾಭಿಷೇಕ, ಮಹಾಪೂಜೆ, ರಾತ್ರಿ 9 ಗಂಟೆಗೆ ಧ್ವಜಾರೋಹಣ ನಡೆಯಲಿದೆ. ಡಿ. 17ರಂದು ಮಹೋತ್ಸವ ನಡೆಯಲಿದ್ದು ಬೆಳಗ್ಗೆ 7.30ರಿಂದ 9ರ ವರೆಗೆ ತುಲಾಭಾರ ಸೇವೆ, 10 ಗಂಟೆಗೆ ಶ್ರೀ ಉಳ್ಳಾಯ ದೈವದ ನೇಮೋತ್ಸವ, ಉರುಳು ಸೇವೆ, ಕಂಚೀಲು ಸೇವೆ, ಮಧ್ಯಾಹ್ನ ಮಹಾ ಅನ್ನಸಂತರ್ಪಣೆ, ರಾತ್ರಿ 11 ಗಂಟೆಗೆ ಶ್ರೀ ಕೊಡಮಣಿತ್ತಾಯ ದೈವದ ನೇಮೋತ್ಸವ ಮತ್ತು ರಥೋತ್ಸವ ನಡೆಯಲಿದೆ.

ಡಿ. 18ರಂದು ರಾತ್ರಿ ಶ್ರೀ ಕಾಂತೇರಿ ಧೂಮಾವತಿ ದೈವದ ನೇಮೋತ್ಸವ, ಡಿ. 19ರಂದು ಶ್ರೀ ಸರಳ ಧೂಮಾವತಿ ದೈವದ ನೇಮೋತ್ಸವ, ಡಿ. 20ರಂದು ಶ್ರೀ ಜಾರಂದಾಯ ದೈವದ ನೇಮೋತ್ಸವ, ಡಿ. 21ರಂದು ಶ್ರೀ ಕೈಯ್ಯೂರು ಧೂಮಾವತಿ ದೈವದ ನೇಮೋತ್ಸವ, ಡಿ.22ರಂದು ಶ್ರೀ ಪಿಲಿಚಾಮುಂಡಿ ದೈವದ ನೇಮೋತ್ಸವ ನಡೆಯಲಿದೆ.

ಡಿ. 23ರಂದು ಬೆಳಗ್ಗೆ 9ಕ್ಕೆ ತುಲಾಭಾರ ಸೇವೆಯ ಅನಂತರ ಧ್ವಜಾವರೋಹಣ ನಡೆಯಲಿದೆ. ಉತ್ಸವದ ದಿನಗಳಲ್ಲಿ ಮತ್ತು ಪ್ರತಿ ಸಂಕ್ರಮಣದಂದು ಮಧ್ಯಾಹ್ನ 2ರಿಂದ 4ರ ತನಕ ಅನ್ನಸಂತರ್ಪಣೆ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.

LEAVE A REPLY

Please enter your comment!
Please enter your name here