Home ಧಾರ್ಮಿಕ ಸುದ್ದಿ ಅಷ್ಟಬಂಧ ಬ್ರಹ್ಮಕಲಶಾಭಿಷೇಕ: ಆಮಂತ್ರಣ ಪತ್ರಿಕೆ ಬಿಡುಗಡೆ

ಅಷ್ಟಬಂಧ ಬ್ರಹ್ಮಕಲಶಾಭಿಷೇಕ: ಆಮಂತ್ರಣ ಪತ್ರಿಕೆ ಬಿಡುಗಡೆ

1291
0
SHARE

ಸುರತ್ಕಲ್‌ : ಸುರತ್ಕಲ್‌ ಇಡ್ಯಾ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಫೆ.7ರಂದು ಶ್ರೀ ಮಹಾಲಿಂಗೇಶ್ವರ, ಶ್ರೀ ಮಹಾಗಣಪತಿ ದೇವರಿಗೆ ನಡೆಯುವ ಅಷ್ಟಬಂಧ ಬ್ರಹ್ಮಕಲಶಾಭಿಷೇಕ, ಅಷ್ಟ ಪವಿತ್ರ ನಾಗಮಂಡಲೋತ್ಸವ, ಫೆ. 9ರಂದು ಶ್ರೀ ಪಿಲಿಚಾಮುಂಡಿ ದೈವಕ್ಕೆ ನಡೆಯುವ ಧರ್ಮ ನೇಮದ ಬಗ್ಗೆ ಪೂರ್ವಭಾವಿ ಸಭೆ, ಆಮಂತ್ರಣ ಪತ್ರಿಕೆ ಬಿಡುಗಡೆ ಗುರುವಾರ ಜರಗಿತು.

ಬ್ರಹ್ಮ ಶ್ರೀ ಕುಡುಪು ನರಸಿಂಹತಂತ್ರಿಗಳು ಪ್ರಾರ್ಥಿಸಿ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು. ಇಡ್ಯಾ ಶ್ರೀ ಮಹಾಲಿಂಗೇಶ್ವರ ದೇವಸ್ಥನದ ಪ್ರಧಾನ ಅರ್ಚಕ, ಅನುವಂಶಿಕ ಮೊಕ್ತೇಸರ ವೇ| ಮೂ| ಐ. ರಮಾನಂದ ಭಟ್‌, ಸಮಿತಿಯ ಅಧ್ಯಕ್ಷ ಮಹಾಬಲ ಪೂಜಾರಿ ಕಡಂಬೋಡಿ, ಗೌರವಾಧ್ಯಕ್ಷ ಐ.ಕೆ. ನಾರಾಯಣ ರಾವ್‌, ಕಟ್ಲಬೀಡು ಚಿನ್ನಯ ಮಾಡ (ಶ್ರೀಧರ ಶೆಟ್ಟಿ), ಮಂಜು ಕಾವ ಪಣಂಬೂರು ಕಾವರ ಮನೆ, ಐ. ವಿದ್ಯಾಧರ ರಾವ್‌, ಕಾರ್ಯಧ್ಯಕ್ಷ ಸತ್ಯಜಿತ್‌ ಸುರತ್ಕಲ್‌, ಅಗರಿ ರಾಘವೇಂದ್ರ ರಾವ್‌, ಸಂತೋಷ್‌ ಕುಮಾರ್‌ ಶೆಟ್ಟಿ, ಶರತ್‌ ಎಲ್‌. ಕರ್ಕೇರ ಹೊಸಬೆಟ್ಟು ಟಿ.ಎನ್‌. ರಮೇಶ್‌, ಪ್ರಧಾನ ಕಾರ್ಯದರ್ಶಿ ಕೃಷ್ಣಕುಮಾರ್‌ ಇಡ್ಯಾ, ಕಾರ್ಯದರ್ಶಿ ಎಚ್‌. ಮಧುಸೂದನ ರಾವ್‌, ಓಂ ಪ್ರಕಾಶ್‌ ಶೆಟ್ಟಿಗಾರ್‌, ಐ. ಉದಯಶಂಕರರಾವ್‌, ಹರೀಶ್‌ ಬಂಗೇರಾ
ಕಡಂಬೋಡಿ, ಬಿ.ಕೆ. ತಾರಾನಾಥ್‌, ಪ್ರಧಾನ ಸಂಚಾಲಕ ಅಣ್ಣಪ್ಪ ದೇವಾಡಿಗ, ಸಂಚಾಲಕ ಸತೀಶ್‌ ಮುಂಚೂರು, ಐ. ವಿಧ್ಯಾದರ ಭಟ್‌, ಜೆ.ಡಿ. ವೀರಪ್ಪ, ಸಮಿತಿ ಸರ್ವ ಸದಸ್ಯರು ಮೊದಲಾದವರು ಉಪಸ್ಥಿತರಿದ್ದರು. ಈ ಸಂದರ್ಭ ಇಡ್ಯಾ ದೀಪೋತ್ಸವದ ಅಂಗವಾಗಿ ವಿಶೇಷ ರಂಗ ಪೂಜೆ ನೆರವೇರಿತು.

LEAVE A REPLY

Please enter your comment!
Please enter your name here