Home ಧಾರ್ಮಿಕ ಸುದ್ದಿ ಸನಾತನ ಧರ್ಮ ಶ್ರೇಷ್ಠ : ಶ್ರೀ ಏಕಗಮ್ಯಾನಂದ ಸ್ವಾಮೀಜಿ

ಸನಾತನ ಧರ್ಮ ಶ್ರೇಷ್ಠ : ಶ್ರೀ ಏಕಗಮ್ಯಾನಂದ ಸ್ವಾಮೀಜಿ

ಇಡ್ಯಾ ಬ್ರಹ್ಮಕಲಶಾಭಿಷೇಕ: ಧಾರ್ಮಿಕ ಸಭೆ

1088
0
SHARE
ಮಂಗಳೂರು ರಾಮಕೃಷ್ಣ ಮಠದ ಶ್ರೀ ಏಕಗಮ್ಯಾನಂದ ಸ್ವಾಮೀಜಿ ಆಶಿರ್ವಚನ ನೀಡಿದರು.

ಸುರತ್ಕಲ್‌: ಭಾರತದ ಪಾರಂಪರಿಕ ಧರ್ಮ ಸನಾತನ ಧರ್ಮ ಆಗಿದೆ. ಸಿಂಧೂ ನಾಗರಿಕತೆಯಿಂದ ಬಂದ ಹೆಸರು ಇಂಡಸ್‌ ಹೋಗಿ ಹಿಂದೂ ಧರ್ಮವೆಂದು ರೂಢಿಯಾಗಿದೆ. ಪ್ರಪಂಚದ ಅತೀ ಶ್ರೇಷ್ಠ ಧರ್ಮ ಸನಾತನ ಧರ್ಮವಾಗಿದೆ ಎಂದು ಮಂಗಳೂರು ರಾಮಕೃಷ್ಣ ಮಠದ ಶ್ರೀ ಏಕಗಮ್ಯಾನಂದ ಸ್ವಾಮೀಜಿ ನುಡಿದರು.

ಸುರತ್ಕಲ್‌ ಇಡ್ಯಾ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶಾಭಿಷೇಕ, ಅಷ್ಟಪವಿತ್ರ ನಾಗಮಂಡಲೋತ್ಸವ ಹಾಗೂ ಧರ್ಮನೇಮ ಅಂಗವಾಗಿ ಶನಿವಾರ ಜರಗಿದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು. ಪರಮಾತ್ಮನನ್ನು ಮೂರ್ತಿಯಲ್ಲಿ ಕಂಡು ಬ್ರಹ್ಮಕಲಶಾಭಿಷೇಕ ನಡೆಸಿ ತನ್ಮೂಲಕ ನಮ್ಮ ಮನಸ್ಸನ್ನು ಶುದ್ಧ ಮಾಡಿಕೊಳ್ಳುವ ಕೆಲಸ ಮಾಡಿದ್ದೇವೆ. ಧಾರ್ಮಿಕತೆಯ ವಿಚಾರಗಳೊಂದಿಗೆ ಆಧ್ಯಾತ್ಮಿಕತೆಯನ್ನು ಬೆಳೆಸಿಕೊಳ್ಳುವುದನ್ನು ರೂಢಿಸಿಕೊಳ್ಳಬೇಕು. ಸಾಮಾಜಿಕ ಸೇವೆಯ ಮೂಲಕ ಭಗವಂತನ ಸೇವೆ ನಡೆಸಬಹುದು ಎಂದರು.

ಪಣಂಬೂರು ಕಾಂತೇರಿ ಧೂಮಾವತಿ ದೈವಸ್ಥಾನ ಇಡ್ಯಾ ಸುರತ್ಕಲ್‌ ಆಡಳಿತ ಮೊಕ್ತೇಸರ ಕಾವರಮನೆ ಮಂಜುಕಾವ ಪಣಂಬೂರು ಅವರು ಉದ್ಘಾಟನೆ ನೆರವೇರಿಸಿದರು. ಮಂಗಳೂರು ಭಾರತೀಯ ವೈದ್ಯಕೀಯ ಸಂಘ ಅಧ್ಯಕ್ಷ ಡಾ| ಅಣ್ಣಯ್ಯ ಕುಲಾಲ್‌ ಉಳ್ಳೂರ್‌ ಅಧ್ಯಕ್ಷತೆ ವಹಿಸಿದ್ದರು. ಧಾರ್ಮಿಕ ಉಪನ್ಯಾಸ ನಿವೃತ್ತ ಸಂಸ್ಕೃತ ಉಪನ್ಯಾಸಕ ಸೋಂದಾ ಭಾಸ್ಕರ್‌ ಭಟ್‌ ಹಿಂದೂ ಸಮಾಜ ಮತ್ತು ದೇವಾಲಯಗಳು ವಿಚಾರದ ಕುರಿತು ಧಾರ್ಮಿಕ ಉಪನ್ಯಾಸ ನೀಡಿದರು.

ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ವೇ| ಮೂ| ಕಮಲಾದೇವಿ ಪ್ರಸಾದ ಆಸ್ರಣ್ಣ ಎಸ್‌ಸಿಡಿಸಿಸಿ ಬ್ಯಾಂಕ್‌ ಉಪಾಧ್ಯಕ್ಷ ವಿನಯ್‌ ಕುಮಾರ್‌ ಸೂರಿಂಜೆ, ಸುರತ್ಕಲ್‌ ರೋಟರಿ ಕ್ಲಬ್‌ ಅಧ್ಯಕ್ಷ ರಮೇಶ್‌ ರಾವ್‌, ಪ್ರೊ| ಜತ್ತಿ ಈಶ್ವರ್‌ ಭಟ್‌ ಭರತ್‌ ನಗರ ಇಡ್ಯಾ, ಮನಪಾ ಸದಸ್ಯ ವರುಣ್‌ ಚೌಟ ಹೊಸಬೆಟ್ಟು, ಮುಕ್ಕ ಶಿವರಾಮ ಗುರಿಕಾರ ಮಿತ್ರಪಟ್ಣ, ಕೃಷ್ಣಾಪುರ ಕೋಡ್ದಬ್ಬು ದೈವಸ್ಥಾನ ಅಧ್ಯಕ್ಷ ಮಹಾಬಲ ರೈ, ಉದ್ಯಮಿ ರವೀಂದ್ರ ಪೂಜಾರಿ ಸುರತ್ಕಲ್‌, ಸೋಮನಾಥ ದೇವಾಡಿಗ ಇಡ್ಯಾ, ಕೃಷ್ಣಾಪುರ ಯುವಕ ಮಂಡಲ ಗೌರವಧ್ಯಕ್ಷ ಸುಧಾಕರ್‌ ಕಾಮತ್‌, ಇಡ್ಯಾ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಆನುವಂಶಿಕ ಆಡಳಿತ ಮೊಕ್ತೇಸರ ಐ. ರಮಾನಂದ ಭಟ್‌, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಮಹಾಬಲ ಪೂಜಾರಿ ಕಡಂಬೋಡಿ ಉಪಸ್ಥಿತರಿದ್ದರು. ಮಹೇಶ್‌ ಮೂರ್ತಿ ಸುರತ್ಕಲ್‌ ಸ್ವಾಗತಿಸಿದರು. ರಾಜೇಶ್ವರಿ ಡಿ. ಶೆಟ್ಟಿ ನಿರೂಪಿಸಿದರು

LEAVE A REPLY

Please enter your comment!
Please enter your name here