Home ಧಾರ್ಮಿಕ ಸುದ್ದಿ ಗುಡ್ಡೆಕೊಪ್ಲ: ಬಬ್ಬರ್ಯ, ಬಬ್ಬರ್ಯ ಬಂಟ ದೈವಗಳ ಪುನಃ ಪ್ರತಿಷ್ಠಾ ಕಲಶಾಭಿಷೇಕ

ಗುಡ್ಡೆಕೊಪ್ಲ: ಬಬ್ಬರ್ಯ, ಬಬ್ಬರ್ಯ ಬಂಟ ದೈವಗಳ ಪುನಃ ಪ್ರತಿಷ್ಠಾ ಕಲಶಾಭಿಷೇಕ

1273
0
SHARE

ಸುರತ್ಕಲ್‌ : ಗುಡ್ಡೆಕೊಪ್ಲ ಬಬ್ಬರ್ಯ, ಬಬ್ಬರ್ಯ ಬಂಟ ಧರ್ಮ ದೈವಗಳ ಪುನಃ ಪ್ರತಿಷ್ಠಾ ಕಲಶಾಭಿಷೇಕವು ಸುರತ್ಕಲ್‌ ರಾಮ ಮಯ್ಯರ ನೇತೃತ್ವದಲ್ಲಿ ಬುಧವಾರ ಜರಗಿತು.

ಮಧ್ಯಾಹ್ನ ದೈವ ದರ್ಶನ, ಪ್ರಸಾದ ವಿತರಣೆ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ ಜರಗಿತು. 1.25 ಕೋಟಿ ರೂ. ವೆಚ್ಚದಲ್ಲಿ ಗರ್ಭಗುಡಿ, ಸುತ್ತುಪೌಳಿ ಸಹಿತ ಆಲಯವನ್ನು ಶಿಲಾಮಯವಾಗಿ ನಿರ್ಮಿಸಲಾಗಿದೆ. ನಾಗದೇವರ ನೂತನ ಗುಡಿಯನ್ನು ಮರು ಪ್ರತಿಷ್ಠೆ ಮಾಡಲಾಗಿದೆ.

ಬುಧವಾರ ಶಾಸಕ ಡಾ| ಭರತ್‌ ಶೆಟ್ಟಿ ವೈ. ಅವರು ಕ್ಷೇತ್ರಕ್ಕೆ ಭೇಟಿ ನೀಡಿ ಪ್ರಸಾದ ಸ್ವೀಕರಿಸಿದರು. ಈ ಸಂದರ್ಭ ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷರು, ಅಧ್ಯಕ್ಷರು, ಪದಾಧಿಕಾರಿಗಳು, ಗುರಿಕಾರರು, ವಿವಿಧ ಭಜನ ಮಂದಿರಗಳ, ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here