ಸುರತ್ಕಲ್: ಕ್ಷೇತ್ರದ ಜೀರ್ಣೋದ್ಧಾರ ಕಾರ್ಯಕ್ರಮವನ್ನು ಶೀಘ್ರ ಮುಗಿಸಿ ಭಕ್ತರಿಗೆ ಹೆಚ್ಚಿನ ಅನುಕೂಲ ಕಲ್ಪಿಸುವಂತಾಗಲು ಎಲ್ಲ ಪ್ರಯತ್ನ ನಡೆಸಲಾಗುವುದು ಎಂದು ಕ್ಷೇತ್ರದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಧರ್ಮೇಂದ್ರ ಗಣೇಶಪುರ ನುಡಿದರು.
ಗಣೇಶಪುರ ಶ್ರೀಮಹಾಗಣಪತಿ ದೇವಸ್ಥಾನದ ಜೀರ್ಣೋದ್ಧಾರ ಕಾಮಗಾರಿಯ ಪ್ರಯುಕ್ತ ಕ್ಷೇತ್ರದ ನೂತನ ವಸಂತ ಮಂಟಪ, ಯಜ್ಞ ಮಂಟಪದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮುಂದಿನ ಎ. 3ರಂದು ಕ್ಷೇತ್ರದಲ್ಲಿನ ಆರಾಧ್ಯ ದೇವರಿಗೆ ಅಷ್ಟಬಂಧ ಬ್ರಹ್ಮ ಕಲಶ, ಎ. 5ರಂದು ಅಷ್ಟ ಪವಿತ್ರ ನಾಗ ಮಂಡಲೋತ್ಸವ ನಡೆಸಲು ಮುಂದಿನ
ವ್ಯವಸ್ಥಾಪನ ಸಮಿತಿ ಸಭೆಯಲ್ಲಿ ನಿರ್ಧರಿಸಲಾಗುವುದು ಎಂದರು.
ಮುಜರಾಯಿ ವ್ಯಾಪ್ತಿಯಲ್ಲಿ ಬರುವ ದೇವಸ್ಥಾನದಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಸುವ ಮುಜರಾಯಿ ಸಚಿವರ ಪ್ರಸ್ತಾವ ಸ್ವಾಗತರ್ಹ. ನಮ್ಮ ಕ್ಷೇತ್ರದಲ್ಲಿ ನಡೆಸುವ ಬಗ್ಗೆ ಕ್ಷೇತ್ರದ ಭಕ್ತರ ಅಭಿಪ್ರಾಯ ಸಂಗ್ರಹಿಸಿ ಮುಂದಿನ ದಿನಗಳಲ್ಲಿ ಅಲೋಚಿಸಲಾಗುವುದು ಎಂದರು.
ಕ್ಷೇತ್ರದ ತಂತ್ರಿ ದೇರೆಬೈಲು ಶಿವಪ್ರ ಸಾದ್ ತಂತ್ರಿಯವರು ಶಿಲಾನ್ಯಾಸದ ಧಾರ್ಮಿಕ ವಿಧಾನವನ್ನು ನೆರವೇರಿಸಿದರು. ವ್ಯವಸ್ಥಾಪನ ಸಮಿತಿ ಸದಸ್ಯ ನಿರಂಜನ ಹೊಳ್ಳ, ಸುಮತಿ, ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಮಂಜುಕಾವ, ಕಾರ್ಯದರ್ಶಿ ಸದಾಶಿವ ಐತಾಳ್, ರಾಮಚಂದ್ರ ಶೆಟ್ಟಿಗಾರ್, ಪ್ರಪುಲ್ಲಚಂದ್ರ ರೈ, ಜಿ.ಕೆ. ಸುಂದರ್, ವಿಟ್ಟಲ್ ಶೆಟ್ಟಿಗಾರ್, ವೆಂಕಟೇಶ್ ಶೆಟ್ಟಿಗಾರ್, ಮೋಹಿನಿ ರಾವ್, ಲೋಕೇಶ್ ಬೊಳ್ಳಾಜೆ, ರಘು ರೈ, ಸೇವಾರ್ಥಿಗಳಾದ ಶ್ರೀಧರ ಹೊಳ್ಳ,
ಸೀತಾರಾಮ ರೈ, ಸುಧಾಕರ, ಸುಧೀರ್ ಶೆಟ್ಟಿ ಹಿಂದೂ ಧಾರ್ಮಿಕ ಸೇವಾ ಸಮಿತಿ
ಹಾಗೂ ಭಗಿನಿ ಸೇವಾ ಸಮಿತಿಯ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.