Home ಧಾರ್ಮಿಕ ಸುದ್ದಿ ಸುಳ್ಯ ಶ್ರೀಚೆನ್ನಕೇಶವ ದೇವಸ್ಥಾನ ಜಾತ್ರೆ, ನಡು ಬೆಳಗು ಬಟ್ಟಲು ಕಾಣಿಕೆ, ಪಟ್ಟಣ ಸವಾರಿ

ಸುಳ್ಯ ಶ್ರೀಚೆನ್ನಕೇಶವ ದೇವಸ್ಥಾನ ಜಾತ್ರೆ, ನಡು ಬೆಳಗು ಬಟ್ಟಲು ಕಾಣಿಕೆ, ಪಟ್ಟಣ ಸವಾರಿ

706
0
SHARE

ಸುಳ್ಯ : ಸುಳ್ಯ ಶ್ರೀಚೆನ್ನಕೇಶವ ದೇವರ ಜಾತ್ರೆಯಲ್ಲಿ ಬುಧವಾರ ಬೆಳಗ್ಗೆ ಸಣ್ಣ ದರ್ಶನ ಬಲಿ, ನಡು ಬೆಳಗು, ಬಟ್ಟಲು ಕಾಣಿಕೆ ನಡೆಯಿತು. ನೂರಾರು ಭಕ್ತರು ಆಗಮಿಸಿ ಬಟ್ಟಲು ಕಾಣಿಕೆ ಸಮರ್ಪಿಸಿ ಪ್ರಸಾದ ಸ್ವೀಕರಿಸಿದರು.

ರಾತ್ರಿ ಉತ್ಸವ ಬಲಿ ಹೊರಟು ಪಟ್ಟಣ ಸವಾರಿ, ವಿವೇಕಾನಂದ ವೃತ್ತ, ಹಳೆಗೇಟು, ಮಿಲಿಟ್ರಿ ಗ್ರೌಂಡ್‌ ಕಟ್ಟೆ, ಅಮೃತಭವನ, ರಾಮಮಂದಿರ, ಜಟ್ಟಿಪಳ್ಳ ಕಟ್ಟೆ ಪೂಜೆಗಳು ನಡೆದವು.

ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರ ಡಾ| ಹರಪ್ರಸಾದ್‌ ತುದಿಯಡ್ಕ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಡಾ| ಕೆ.ವಿ. ಚಿದಾನಂದ, ಸದಸ್ಯರಾದ ಎಂ. ಮೀನಾಕ್ಷಿ ಗೌಡ, ಪಡ್ಡಂಬೈಲು ವೆಂಕಟ್ರಮಣ ಗೌಡ, ಲಿಂಗಪ್ಪ ಗೌಡ, ರಮೇಶ್‌ ಬೈಪಾಡಿತ್ತಾಯ, ಕೆ. ಉಪೇಂದ್ರ ಕಾಮತ್‌ ಉಪಸ್ಥಿತರಿದ್ದರು.

ಜಟ್ಟಿಪಳ್ಳ ಶ್ರೀರಾಮ ಭಜನ ಸೇವಾ ಸಂಘದ ವತಿಯಿಂದ ಜಟ್ಟಿಪಳ್ಳ ಶ್ರೀ ಚೆನ್ನಕೇಶವ ದೇವರ ವಸಂತ ಕಟ್ಟೆಯಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ದೇವರ ಪೂಜೆ, ಧಾರ್ಮಿಕ ಉಪನ್ಯಾಸ, ಅನ್ನಸಂತರ್ಪಣೆ ನಡೆಯಿತು. ಸಂಜೆ ಸ್ಥಳೀಯ ಪ್ರತಿಭೆಗಳಿಂದ ವೈವಿಧ್ಯಮಯ ಕಾರ್ಯಕ್ರಮ, ರಾತ್ರಿ ಶ್ರೀ ಚೆನ್ನಕೇಶವ ದೇವರ ಪಟ್ಟಣ ಸವಾರಿ ವಸಂತ ಕಟ್ಟೆಗೆ ಆಗಮಿಸಿದ ಬಳಿ ಪೂಜೆ ನಡೆಯಿತು.

ಇಂದಿನ ಕಾರ್ಯಕ್ರಮ

ಜ. 10ರಂದು ಅಜ್ಜಾವರ ಶ್ರೀಶಂಕರ ಭಾರತೀ ವೇದ ಪಾಠ ಶಾಲಾ ವಿದ್ಯಾರ್ಥಿ ಗಳಿಂದ ವೇದ ಪಾರಾಯಣ. ರಾತ್ರಿ ಮಿತೂ ್ತರು ದೈವಗಳ ಮತ್ತು ಕಾನತ್ತಿಲ ದೈವಗಳ ಭಂಡಾರ ಬಂದು ವಾಲಸಿರಿ ನಡೆಯಲಿದೆ.

ಜಾತ್ರೆಯ ಮೆರುಗಿಗೆ ಇಂಬು ತರುವ ಸಂತೆ ಮಳಿಗೆಗಳಲ್ಲಿ ಬುಧವಾರ ಜನಸಂಖ್ಯೆ ಹೆಚ್ಚಾಗಿತ್ತು. ಖರೀದಿಯಲ್ಲಿ ತೊಡಗಿದ್ದು ಕಂಡು ಬಂತು. ಜಾತ್ರೆಯ ಹಿನ್ನೆಲೆಯಲ್ಲಿ ವಾಹನಗಳ ಓಡಾಟ ಸಂಖ್ಯೆ ಹೆಚ್ಚಾಗಿತ್ತು. ಜ.11 ರಂದು ರಥೋತ್ಸವ ನಡೆಯುವ ಕಾರಣ, ಮಳಿಗೆಗಳ ಸಂಖ್ಯೆ, ಜನರ ಓಡಾಟ ಹೆಚ್ಚಳಗೊಳ್ಳಲಿದೆ.

ಓಂ ಶ್ರೀ ಸಾಯಿ ಜ್ಯೋತಿಷ್ಯಾಲಯ
South Canara’s Famous Asrologer
Family issue, ಮದುವೆಯಲ್ಲಿ ವಿಘ್ನ, ಸತಿ-ಪತಿ ಕಲಹ, Court Case, ವಶೀಕರಣ, Love problems, ಸದಾ ಕುಟುಂಬದಲ್ಲಿ ಕಲಹ, Money problem, ಕೆಲಸದಲ್ಲಿ ಕಿರಿಕಿರಿ, ಮಕ್ಕಳ ಸಮಸ್ಯೆ, ವ್ಯಾಪಾರದಲ್ಲಿ ಅಡೆ-ತಡೆ, Loan Issue, ನಿಮ್ಮ ಯಾವುದೇ ಸಮಸ್ಯೆಗೆ 3 ದಿನಗಳಲ್ಲಿ ಶಾಶ್ವತ ಪರಿಹಾರ.
ಹೊಟೇಲ್ ದುರ್ಗಾ ಇಂಟರ್ ನ್ಯಾಶನಲ್, ರೂಂ. ನಂ. 310, 3ನೇ ಮಹಡಿ, ಸಿಟಿ ಬಸ್ ಸ್ಟ್ಯಾಂಡ್ ಹತ್ತಿರ, ಉಡುಪಿ.
ಪಂಡಿತ್ ಸಾಯಿನಾಥ್ ಜೋಶಿ : Ph- 98449-44242

LEAVE A REPLY

Please enter your comment!
Please enter your name here