Home ಧಾರ್ಮಿಕ ಸುದ್ದಿ ಸುಳ್ಯ ಸಾರ್ವಜನಿಕ ಗಣೇಶೋತ್ಸವಕ್ಕೆ ಸುವರ್ಣ ಸಂಭ್ರಮ

ಸುಳ್ಯ ಸಾರ್ವಜನಿಕ ಗಣೇಶೋತ್ಸವಕ್ಕೆ ಸುವರ್ಣ ಸಂಭ್ರಮ

1578
0
SHARE

ಸುಳ್ಯ : ಇಲ್ಲಿನ ಸಿದ್ಧಿವಿನಾಯಕ ಸೇವಾ ಸಮಿತಿ, ಸಾರ್ವಜನಿಕ ಶ್ರೀ ದೇವತಾರಾಧನ ಸಮಿತಿ, ಸುವರ್ಣ ಮಹೋತ್ಸವ ಸಮಿತಿ ಆಶ್ರಯದಲ್ಲಿ ಶ್ರೀ ಚೆನ್ನಕೇಶವ ದೇವಸ್ಥಾನದ ಮುಂಭಾಗದಲ್ಲಿ ಸೆ. 13ರಿಂದ 19ರ ತನಕ ಸಾರ್ವಜನಿಕ ಶ್ರೀ ಗಣೇಶೋತ್ಸವ ಕಾರ್ಯಕ್ರಮ ನಡೆಯಲಿದೆ ಎಂದು ಸಿದ್ಧಿವಿನಾಯಕ ಸೇವಾ ಸಮಿತಿ ಅಧ್ಯಕ್ಷ ಪಿ.ಕೆ. ಉಮೇಶ್‌ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾಜ ಸಂಘಟನೆ ಮತ್ತು ಧರ್ಮ ಜಾಗೃತಿ ಆಶಯದಡಿ 50ನೇ ವರ್ಷದ ಹೊಸ್ತಿಲಿನಲ್ಲಿ ಏಳು ದಿನಗಳ ಕಾರ್ಯಕ್ರಮ ನಡೆಯಲಿದೆ. ಸೆ. 13ರಂದು ಗಣಪತಿ ಹೋಮ, ಬೆಳಗ್ಗೆ ಶಾಸಕ ಅಂಗಾರ ಉತ್ಸವ ಉದ್ಘಾಟಿಸಲಿದ್ದಾರೆ. ಶ್ರೀ ಚೆನ್ನಕೇಶವ ದೇವಸ್ಥಾನದ ಅಧ್ಯಕ್ಷ ದೇರಣ್ಣ ಗೌಡ ಅಡ್ಡಂತಡ್ಕ ಭಾಗವಹಿಸಲಿದ್ದಾರೆ.

ಅನಂತರ ಪುಟಾಣಿಗಳಿಗೆ ವಿವಿಧ ಸ್ಪರ್ಧೆ, ಭಜನ ಕಾರ್ಯಕ್ರಮ, ಸಂಜೆ ಸಭಾಕಾ ರ್ಯಕ್ರಮ ನಡೆಯಲಿದೆ. ಸುವರ್ಣ ಮಹೋತ್ಸವ ಸಮಿತಿ ಗೌರವಾಧ್ಯಕ್ಷ ಡಾ| ಕೆ.ವಿ.ಚಿದಾನಂದ, ಆರೆಸೆಸ್‌ ವಿಭಾಗ ಕಾರ್ಯವಾಹ ನ. ಸೀತಾರಾಮ ಭಾಗವಹಿ ಸಲಿದ್ದಾರೆ. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಸೆ. 14ರಂದು ಭಜನೆ, ಸಂಜೆ ಮಾಯಕ ಅರೆಭಾಷೆ ನಾಟಕ, ರಾತ್ರಿ “ಮಾರುತಿ ಪ್ರತಾಪ’ ಯಕ್ಷಗಾನ ಪ್ರದರ್ಶನ ನಡೆಯಲಿದೆ.

ಮಹಿಳಾ ಕಾರ್ಯಕ್ರಮ ಸೆ. 15ರಂದು ಮಹಿಳಾ ಸಂಪದ, ಯಕ್ಷಗಾನ ತಾಳಮದ್ದಳೆ, ಮಹಾಪೂಜೆ, ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ಸಭಾ ಕಾರ್ಯಕ್ರಮದಲ್ಲಿ ಒಡಿಯೂರು
ಸಾದ್ವಿ ಶ್ರೀ ಮಾತಾನಂದಮಯಿ ಆಶೀರ್ವ ಚನ ನೀಡಲಿದ್ದಾರೆ. ಹಲವು ಗಣ್ಯರು ಉಪಸ್ಥಿತರಿರಲಿದ್ದಾರೆ. ಸಂಜೆ ಹರಿಕಥಾ ಕಾಲಕ್ಷೇಪ, ರಾತ್ರಿ ಗಾನ ನೃತ್ಯ ಸಂಭ್ರಮ ಪ್ರದರ್ಶನಗೊಳ್ಳಲಿದೆ. ಮಹಿಳಾ ಸಾಧಕರಿಗೆ, ವಿವಿಧ ಕ್ಷೇತ್ರಗಳ ಸಾಧಕರಿಗೆ ಸಮ್ಮಾನ, ಮಾತೆಯರು ಮನೆಗಳಲ್ಲಿ ತಯಾರಿಸಿದ ಅಪ್ಪ ನೈವೇದ್ಯವನ್ನು ಶ್ರೀ ದೇವರ ಸನ್ನಿಧಿಯಲ್ಲಿ ಸಮರ್ಪಿಸಲಾಗುತ್ತಿದೆ.

ಸೆ. 16ರಂದು ಭಜನೆ, ಸಂಜೆ ಸಂಗೀತ ಸಿಂಚನ, ರಾತ್ರಿ ತುಳು ನಾಟಕ ಪ್ರದರ್ಶ ನಗೊಳ್ಳಲಿದೆ. ಸೆ. 17ರಂದು ಭಜನೆ, ವಿವಿಧ ಸಾಂಸ್ಕೃತಿಕ ವೈವಿಧ್ಯ, ನೃತ್ಯ ಸಂಗಮ-ನೃತ್ಯ ರೂಪಕ, ಸಂಜೆ ಶ್ರೀ ಸ್ವಾಮಿ ಬೋಧ ಸ್ವರೂಪಾನಂದಜಿ ಮಹಾರಾಜ್‌ ಅವರಿಂದ ಉಪನ್ಯಾಸ ನಡೆಯಲಿದೆ.

ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷ ಕೆ.ಎಸ್‌. ಚಂದ್ರಶೇಖರ, ಪ್ರಧಾನ ಕಾರ್ಯದರ್ಶಿ ಭವಾನಿಶಂಕರ ಅಡ್ತಲೆ, ಕೋಶಾಧಿಕಾರಿ ಡಾ| ಲೀಲಾಧರ್‌, ಸಾರ್ವಜನಿಕ ಶ್ರೀ ದೇವತಾರಾಧನ ಸಮಿತಿ ಅಧ್ಯಕ್ಷ ಕೆ.ಎಸ್‌. ಗೋಪಾಲಕೃಷ್ಣ, ಪ್ರಧಾನ ಕಾರ್ಯದರ್ಶಿ ಗುರುದತ್‌ ಶೇಟ್‌, ಸಿದ್ಧಿವಿನಾಯಕ ಸೇವಾ ಸಮಿತಿ ಕಾರ್ಯದರ್ಶಿ ಜಿ.ಜಿ. ನಾಯಕ್‌, ಕೋಶಾಧಿಕಾರಿ ದಾಮೋದರ ಮಂಚಿ, ಮಹಿಳಾ ಸಮಿತಿ ಪ್ರತಿನಿಧಿ ಡಾ| ಯಶೋದಾ ರಾಮಚಂದ್ರ, ಪ್ರಚಾರ ಸಮಿತಿಯ ಚಿತ್ರಾ ಮಟ್ಟಿ, ಆಹಾರ ಸಮಿತಿಯ ಮನೀಶ್‌ ಗೌಡ, ಸ್ವಾಗತ ಸಮಿತಿಯ ಸೋಮನಾಥ ಪೂಜಾರಿ, ಶ್ರೀ ಶಾರದಾಂಬಾ ಸೇವಾ ಸಮಿತಿ ಅಧ್ಯಕ್ಷ ರಾಜು ಪಂಡಿತ್‌ ಉಪಸ್ಥಿತರಿದ್ದರು.

ಸೆ. 19ರಂದು ಶೋಭಾಯಾತ್ರೆ
ಸೆ. 18ರಂದು ಭಜನೆ, ಸಂಜೆ ರಸ ಮಂಜರಿ, ಸಭಾ ಕಾರ್ಯ ಕ್ರಮದಲ್ಲಿ ಮಂಗಳೂರು ಶ್ರೀ ಆದಿಚುಂಚನಗಿರಿ ಶಾಖಾ ಮಠದ ಶ್ರೀ ಧರ್ಮಪಾಲನಾಥ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಶಾಸಕರಾದ ಅಂಗಾರ, ಕೆ.ಜಿ. ಬೋಪಯ್ಯ, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಭಾಗವಹಿಸಲಿದ್ದಾರೆ. ಸೆ. 19ರಂದು ಬೆಳಗ್ಗೆ 108 ತೆಂಗಿನಕಾಯಿ ಮಹಾಗಣಪತಿ ಹವನ, ಪೂರ್ಣಾಹುತಿ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ಮಧ್ಯಾಹ್ನ ನಗರದ ಬೀದಿಯಲ್ಲಿ ವಿಸರ್ಜನ ಶೋಭಾಯಾತ್ರೆ ನಡೆಯಲಿದೆ.

LEAVE A REPLY

Please enter your comment!
Please enter your name here