Home ಧಾರ್ಮಿಕ ಸುದ್ದಿ ಸುಳ್ಯ: ತಾಲೂಕಿನಾದ್ಯಂತ ಸಂಭ್ರಮದ ನಾಗರಪಂಚಮಿ

ಸುಳ್ಯ: ತಾಲೂಕಿನಾದ್ಯಂತ ಸಂಭ್ರಮದ ನಾಗರಪಂಚಮಿ

1713
0
SHARE

ಸುಳ್ಯ : ನಾಗರ ಪಂಚಮಿ ಹಬ್ಬದ ಪ್ರಯುಕ್ತ ತಾಲೂಕಿನ ವಿವಿಧೆಡೆ ನಾಗ ದೇವರಿಗೆ ವಿಶೇಷ ಪೂಜೆ ನಡೆಯಿತು. ನಾಗಾರಾಧನೆಯ ಹಾಗೂ ಸುಬ್ರಹ್ಮಣ್ಯ ದೇವರ ಆರಾಧನೆ ಕ್ಷೇತ್ರಗಳಲ್ಲಿ ವಿಶೇಷ ಪೂಜೆ, ನಾಗತಂಬಿಲ, ಆಶ್ಲೇಷಾ ಪೂಜೆ ಸೇವೆಗಳನ್ನು ಭಕ್ತರು ಅರ್ಪಿಸಿದರು.

ದೇಗುಲದ ನಾಗನಕಟ್ಟೆಗಳಲ್ಲಿ ಹಾಗೂ ಖಾಸಗಿಯಾಗಿ ಆರಾಧನೆಗೆ ಒಳಪಡುವ ನಾಗನಕಟ್ಟೆಗಳಲ್ಲಿ ಹಾಲಿನ ಅಭಿಷೇಕ, ಸೀಯಾಳ ಅಭಿಷೇಕ ಸೇವೆ ಸಲ್ಲಿಸಲಾಯಿತು. ಮನೆಗಳಲ್ಲಿ ನಾಗನ ಸ್ಮರಣೆ, ಅರಸಿನ ಎಲೆಯ ತಿನಿಸು ಸಹಿತ ಸಂಭ್ರಮ ಮನೆ ಮಾಡಿತ್ತು.

ನಗರದ ಶ್ರೀ ಚೆನ್ನಕೇಶವ ದೇಗುಲದ ನಾಗನಕಟ್ಟೆಯಲ್ಲಿ ವಿಶೇಷ ಪೂಜೆ ನಡೆಯಿತು. ದೇಗುಲದ ಆಡಳಿತ ಮೊಕ್ತೇಸರ ಡಾ| ಹರಪ್ರಸಾದ್‌ ತುದಿಯಡ್ಕ ಉಪಸ್ಥಿತರಿದ್ದರು.
ಅಡಾRರು ಶ್ರೀ ಸುಬ್ರಹ್ಮಣ್ಯಸ್ವಾಮಿ ದೇವಾಲಯದ ನಾಗಬನದಲ್ಲಿ ವಿಶೇಷ ಸೇವೆ ನಡೆಯಿತು. ದೇವಸ್ಥಾನದ ಅರ್ಚಕ ಮಂಜುನಾಥ ಐತಾಳ್‌ ಅವರ ನೇತೃತ್ವದಲ್ಲಿ ನಾಗದೇವರಿಗೆ ಹಾಲಿನ ಅಭಿಷೇಕ, ಸೀಯಾಳ ಅಭಿಷೇಕ ನಡೆಸಲಾಯಿತು. ಪೆರುವಾಜೆ ಶ್ರೀ ಜಲದುರ್ಗಾದೇವಿ ದೇಗುಲದ ದೇವರಮಾರು ಗದ್ದೆಯ ನಾಗನಕಟ್ಟೆಯಲ್ಲಿ ಕ್ಷೇತ್ರದ ಪ್ರಧಾನ ಅರ್ಚಕ ಶ್ರೀನಿವಾಸ ಹೆಬ್ಟಾರ್‌ ಅವರ ನೇತೃತ್ವದಲ್ಲಿ ಪೂಜೆ ನಡೆಯಿತು. ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಿರಂಜನ ಶೆಟ್ಟಿ ಪಾಲ್ತಾಡು ಉಪಸ್ಥಿತರಿದ್ದರು.

ಪೆರುವೋಡಿ ಶ್ರೀ ವಿಷ್ಣುಮೂರ್ತಿ ದೇಗುಲದ ಬೈಲಂಗಡಿ ನಾಗನಕಟ್ಟೆಯಲ್ಲಿ ಕ್ಷೇತ್ರದ ಅರ್ಚಕ ಸುರೇಶ್‌ ಉಪಾಧ್ಯಾಯ ಅವರ ನೇತೃತ್ವದಲ್ಲಿ ವಿಶೇಷ ಪೂಜೆ ನಡೆಯಿತು.
ಜಾಲೂÕರು ಗ್ರಾಮದ ಅಡಾRರು ಶ್ರೀ ಪ್ರಸನ್ನ ಆಂಜನೇಯ ಸ್ವಾಮಿ ಮತ್ತು ಗುಳಿಗರಾಜ ಕ್ಷೇತ್ರದಲ್ಲಿ ಪುರೋಹಿತ ನಾಗರಾಜ ಭಟ್‌ ಅವರ ನೇತೃತ್ವದಲ್ಲಿ ನಾಗರಪಂಚಮಿ ನಡೆಯಿತು.

ನಗರದ ಶ್ರೀರಾಮ ಪೇಟೆಯಲ್ಲಿನ ಶ್ರೀರಾಮ ಭಜನ ಮಂದಿರದ ನಾಗನಕಟ್ಟೆ, ಜಾಲೂÕರು ಗುರು ರಾಘವೇಂದ್ರ ಭಜನ ಮಂದಿರದ ನಾಗನಕಟ್ಟೆಗಳಲ್ಲೂ ನಾಗಾರಾಧನೆ ನಡೆಯಿತು.

LEAVE A REPLY

Please enter your comment!
Please enter your name here