Home ಧಾರ್ಮಿಕ ಸುದ್ದಿ ಸುಳ್ಯ: ಮುರುಗನ್‌ ದೇವಸ್ಥಾನದಲ್ಲಿ ನಾಗಕನ್ನಿಕೆ ಪ್ರತಿಷ್ಠಾ ಬ್ರಹ್ಮಕಲಶ

ಸುಳ್ಯ: ಮುರುಗನ್‌ ದೇವಸ್ಥಾನದಲ್ಲಿ ನಾಗಕನ್ನಿಕೆ ಪ್ರತಿಷ್ಠಾ ಬ್ರಹ್ಮಕಲಶ

1399
0
SHARE

ಸುಳ್ಯ : ಜಾಲ್ಸೂರು ಗ್ರಾಮದ ಕುಕ್ಕಂದೂರು ಶ್ರೀ ಮುರುಗನ್‌ ದೇವಸ್ಥಾನದಲ್ಲಿ ನಾಗಕನ್ನಿಕೆ ಪ್ರತಿಷ್ಠಾ ಬ್ರಹ್ಮಕಲಶ ಕ್ಷೇತ್ರದ ತಂತ್ರಿ ವೇ| ಮೂ| ಗಣೇಶ್‌ ಭಟ್ ನೇತೃತ್ವದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ದೇವತಾ ಪ್ರಾರ್ಥನೆ, ದೀಪ ಪ್ರತಿಷ್ಠೆ, ಆಚಾರ್ಯ ವರಣ, ಸ್ಥಳ ಶುದ್ಧಿ, ಪ್ರಾಸಾದ ಶುದ್ಧಿ, ಸಂಜೆ ಗುರು ಗಣಪತಿ ಪೂಜೆ, ಪುಣ್ಯಾಹ, ವಾಸ್ತುಹೋಮ, ರಾಕ್ಷೋಘ್ನ, ವಾಸ್ತುಬಲಿ, ಪ್ರಾಕಾರ ಬಲಿ, ಅಧಿವಾಸಾದಿಗಳು, ಬಿಂಬಶುದ್ಧಿ, ಕಲಶಪ್ರತಿಷ್ಠೆ ಹಾಗೂ ಮರುದಿನ ಗುರು ಗಣಪತಿ ಪೂಜೆ, ಪುಣ್ಯಾಹ, ಗಣಪತಿ ಹೋಮ, ಪಂಚಗವ್ಯ ಹವನ, ಪ್ರತಿಷ್ಠಾ ಹೋಮ, ನಾಗ ಕನ್ನಿಕೆ ಪ್ರತಿಷ್ಠೆ ಮತ್ತು ನಾಗ ಪ್ರತಿಷ್ಠೆ ನಡೆಯಿತು. ನಾಗತಂಬಿಲ, ವಿಶೇಷ ಪೂಜೆ, ಪ್ರಸಾದ ವಿತರಣೆ, ಮಧ್ಯಾಹ್ನ ಅನ್ನಸಂತರ್ಪಣೆ ಜರಗಿತು.

ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಜಾಲ್ಸೂರು ಗ್ರಾ.ಪಂ. ಅಧ್ಯಕ್ಷೆ ಶಶಿಕಲಾ ಎಸ್‌. ನಾಯಕ್‌ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭವನ್ನು ಶಾಸಕ ಎಸ್‌. ಅಂಗಾರ ಉದ್ಘಾಟಿಸಿದರು. ಶ್ರೀದೇವಿ ನಾಗರಾಜ್‌ ಭಟ್ ಧಾರ್ಮಿಕ ಉಪನ್ಯಾಸ ನೀಡಿದರು. ಜಿ.ಪಂ. ಸದಸ್ಯೆ ಪುಷ್ಪಾವತಿ ಬಾಳಿಲ, ತಾ.ಪಂ. ಸದಸ್ಯ ತೀರ್ಥರಾಮ ಜಾಲ್ಸೂರು, ಉದ್ಯಮಿ ಸುಧಾಕರ ಕಾಮತ್‌ ವಿನೋಬನಗರ, ಕೃಷಿ ಇಲಾಖಾಧಿಕಾರಿ ಮೋಹನ್‌ ನಂಗಾರು, ಮಾಜಿ ತಾ.ಪಂ. ಸದಸ್ಯ ಗೋಪೀನಾಥ್‌ ಬೊಳುಬೈಲು, ಶ್ರೀ ಕ್ಷೇ.ಧ.ಗ್ರಾ. ಯೋಜನೆ ಜಾಲ್ಸೂರು ವಲಯ ಮೇಲ್ವಿಚಾರಕ ಪ್ರಶಾಂತ್‌, ಗ್ರಾ.ಪಂ. ಸದಸ್ಯ ಸುಬ್ಬಯ್ಯ ನಾಯರ್‌ ಹಿತ್ಲು, ಮುರುಗನ್‌ ದೇವಾಲಯದ ಆಡಳಿತ ಸಮಿತಿ ಅಧ್ಯಕ್ಷ ರಾಮಚಂದ್ರನ್‌, ದ.ಕ. ತಮಿಳು ಸೇವಾ ಸಂಘದ ಅಧ್ಯಕ್ಷ ಕನಕರಾಜ್‌ ವಿ., ಪ್ರ. ಕಾರ್ಯದರ್ಶಿ ವಿಜಯರತ್ನಂ, ಮುತ್ತು ಮಾರಿಯಮ್ಮ ದೇವಸ್ಥಾನದ ಅಧ್ಯಕ್ಷ ಅಳಗಯ್ಯ ಗೌರವ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here