Home ಧಾರ್ಮಿಕ ಸುದ್ದಿ ಸುಳ್ಯ ಜಾತ್ರೆ: ಇಂದು ಪೇಟೆ ಸವಾರಿ, ಕಟ್ಟೆಪೂಜೆ

ಸುಳ್ಯ ಜಾತ್ರೆ: ಇಂದು ಪೇಟೆ ಸವಾರಿ, ಕಟ್ಟೆಪೂಜೆ

388
0
SHARE

ಸುಳ್ಯ : ಚೆನ್ನಕೇಶವ ದೇವಸ್ಥಾನದಲ್ಲಿ ಪೂರ್ವಶಿಷ್ಟ ಸಂಪ್ರದಾಯದಂತೆ ಜಾತ್ರೆಯ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಸಂಜೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯಕ್ಷಗಾನ ಮಂಡಳಿ ಕಲಾವಿದರಿಂದ “ಮಹಾಶೂರ ಭೌಮಾಸುರ’ ಯಕ್ಷಗಾನ ಪ್ರದರ್ಶನಗೊಂಡಿತ್ತು.

ಜಾತ್ರೆಯಲ್ಲಿ ಇಂದು ಜ. 9ರಂದು ಬೆಳಗ್ಗೆ ಸಣ್ಣ ದರ್ಶನ ಬಲಿ, ನಡು ಬೆಳಗು, ಬಟ್ಟಲು ಕಾಣಿಕೆ, ರಾತ್ರಿ ಉತ್ಸವ ಬಲಿ ಹೊರಟು ಪೇಟೆ ಸವಾರಿ, ವಿವೇಕಾನಂದ ವೃತ್ತ, ಹಳೆಗೇಟು,
ಮಿಲಿಟ್ರಿ ಗ್ರೌಂಡ್‌ ಕಟ್ಟೆ, ಅಮೃತಭವನ, ರಾಮಮಂದಿರ, ಜಟ್ಟಿಪಳ್ಳ ಕಟ್ಟೆ ಪೂಜೆಗಳು ನಡೆಯಲಿವೆ.

ಜಟ್ಟಿಪಳ್ಳ ಶ್ರೀರಾಮ ಭಜನ ಸೇವಾ ಸಂಘದ ವತಿಯಿಂದ ಜಟ್ಟಿಪಳ್ಳ ಶ್ರೀ ಚೆನ್ನಕೇಶವ ದೇವರ ವಸಂತ ಕಟ್ಟೆಯಲ್ಲಿ ವರ್ಷಂಪ್ರತಿ ನಡೆಯಲಿರುವ ಸಾಮೂಹಿಕ ಸತ್ಯನಾರಾಯಣ ದೇವರ ಪೂಜೆ, ಧಾರ್ಮಿಕ ಉಪನ್ಯಾಸ, ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ಸ್ಥಳೀಯ ಪ್ರತಿಭೆಗಳಿಂದ ವೈವಿಧ್ಯಮಯ ಕಾರ್ಯಕ್ರಮ ನಡೆಯಲಿದೆ.ರಾತ್ರಿ ಶ್ರೀ ಚೆನ್ನಕೇಶವ ದೇವರ ಪಟ್ಟಣ ಸವಾರಿ ವಸಂತ ಕಟ್ಟೆಗೆ ಆಗಮಿಸಿದ ಬಳಿ ಪೂಜೆ ನೆರವೇರಲಿದೆ.

LEAVE A REPLY

Please enter your comment!
Please enter your name here