Home ಧಾರ್ಮಿಕ ಸುದ್ದಿ ಸುಳ್ಯ ಜಾತ್ರೆ ಧ್ವಜಾರೋಹಣ, ಉತ್ಸವಕ್ಕೆ ಚಾಲನೆ

ಸುಳ್ಯ ಜಾತ್ರೆ ಧ್ವಜಾರೋಹಣ, ಉತ್ಸವಕ್ಕೆ ಚಾಲನೆ

1391
0
SHARE

ಸುಳ್ಯ : ಇಲ್ಲಿನ ಇತಿಹಾಸ ಪ್ರಸಿದ್ಧ ಶ್ರೀ ಚೆನ್ನಕೇಶವ ದೇವಸ್ಥಾನದಲ್ಲಿ ಪೂರ್ವ ಶಿಷ್ಟ ಸಂಪ್ರದಾಯದಂತೆ ಜ. 3ರಂದು ಬ್ರಹ್ಮಶ್ರೀ ದೇಲಂಪಾಡಿ ಬಾಲಕೃಷ್ಣ ತಂತ್ರಿ
ಅವರ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳ ಮೂಲಕ ರಾತ್ರಿ ಧ್ವಜಾರೋಹಣ ನಡೆಯಿತು. ಬೆಳಗ್ಗೆ ಉಗ್ರಾಣ ತುಂಬಿಸಿ, ಪನ್ನೆಬೀಡು 4 ಸ್ಥಾನ ದೈವಗಳ ಚಾವಡಿಗಳಿಂದ ಬಲ್ಲಾಳರ ಪೈಯೋಳಿ ತರಲಾಯಿತು. ರಾತ್ರಿ ಕುಕ್ಕನೂರು ದೈವಗಳ ಭಂಡಾರ ಬಂದ ಬಳಿಕ ಧ್ವಜಾರೋಹಣ ನಡೆಯಿತು.

ಈ ಸಂದರ್ಭ ಅನುವಂಶಿಕ ಆಡಳಿತ ಮೊಕ್ತೇಸರ ಡಾ| ಹರ ಪ್ರಸಾದ್‌ ತುದಿಯಡ್ಕ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಡಾ| ಕೆ.ವಿ. ಚಿದಾನಂದ, ಸದಸ್ಯರು ಗಳಾದ ಕೆ.ಉಪೇಂದ್ರ
ಕಾಮತ್‌, ಎಂ.ಮೀನಾಕ್ಷಿ ಗೌಡ, ಪಡ್ಡಂಬೈಲು ವೆಂಕಟ್ರಮಣ ಗೌಡ, ಎನ್‌.ಜಯಪ್ರಕಾಶ್‌ ರೈ, ಲಿಂಗಪ್ಪ ಗೌಡ, ರಮೇಶ್‌ ಬೈಪಾಡಿತ್ತಾಯ, ಎನ್‌.ಎ. ರಾಮಚಂದ್ರ, ಅಕಾಡೆಮಿ ಲಿಬರಲ್‌ ಎಜುಕೇಶನ್‌ ನಿರ್ದೇಶಕಿ ಶೋಭಾ ಚಿದಾನಂದ ಮೊದಲಾದವರು ಉಪಸ್ಥಿತರಿದ್ದರು.

ಸುಳ್ಯ ಶ್ರೀಚೆನ್ನಕೇಶವ ದೇವರ ಜಾತ್ರಾ ಪ್ರಯುಕ್ತ ಸಾಂಸ್ಕೃತಿಕ ಉತ್ಸವಕ್ಕೆ ಚಾಲನೆ ನೀಡ ಲಾಯಿತು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಡಾ| ಕೆ.ವಿ. ಚಿದಾನಂದ ಅವರು ಉದ್ಘಾಟಿಸಿ ಜಾತ್ರೆಯು ವೈವಿಧ್ಯಪೂರ್ಣವಾಗಿ ನಡೆ ಯುತ್ತಿದ್ದು, ಜನರ ಸಹಕಾರ ದೊರೆಯುತ್ತಿದೆ. 6 ದಿವಸಗಳ ಕಾಲ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ ಎಂದರು.

ಅನುವಂಶಿಕ ಆಡಳಿತ ಮೊಕ್ತೇಸರ ಡಾ| ಹರಪ್ರಸಾದ್‌ ತುದಿಯಡ್ಕ ಮಾತನಾಡಿದರು. ಜೀರ್ಣೋದ್ಧಾರ ಸಮಿತಿ ಸದಸ್ಯ ಪಡ್ಡಂಬೈಲು ವೆಂಕಟ್ರಮಣ ಗೌಡ ಅವರು ಅಧ್ಯಕ್ಷತೆ
ವಹಿಸಿದ್ದರು. ಇತ್ತೀಚೆಗೆ ಅಗಲಿದ ಶ್ರೀ ಚೆನ್ನಕೇಶವ ಯುವ ಸೇವಾ ಸಂಘದ ಅಧ್ಯಕ್ಷ ಕಿರಣ್‌ಕುಮಾರ್‌ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಶ್ಯಾಮ್‌ ಭಟ್‌ ಅವರು ನುಡಿನಮನ ಸಲ್ಲಿಸಿದರು.

ಜೀರ್ಣೋದ್ಧಾರ ಸಮಿತಿ ಸದಸ್ಯರುಗಳಾದ ಎಂ.ಮೀನಾಕ್ಷಿ ಗೌಡ, , ಎನ್‌.ಜಯಪ್ರಕಾಶ್‌ ರೈ, ಲಿಂಗಪ್ಪ ಗೌಡ, ರಮೇಶ್‌ ಬೈಪಾಡಿ ತ್ತಾಯ ಭಾಗವಹಿಸಿದ್ದರು. ಬಳಿಕ ಕೆವಿಜಿ ಆಯುರ್ವೇದ ವೈದ್ಯ ಕೀಯ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.ಶುಕ್ರವಾರ ಬೆಳಗ್ಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಸಂಜೆ ಸಾಂಸ್ಕೃತಿಕ ವೇದಿಕೆ ಯಲ್ಲಿ ಮಂಚಿ ಅಪ್ಪೆ ಕಲಾ ವಿದರ ತಂಡದಿಂದ ಜಾದೂ ಮಾಯ ಲೋಕ ಪ್ರದರ್ಶನ ಗೊಂಡಿತ್ತು

ಜಾತ್ರೆಯಲ್ಲಿ ಇಂದು ಸುಳ್ಯ ಶ್ರೀ ಚೆನ್ನಕೇಶವ ದೇವರ ಜಾತ್ರೆಯಲ್ಲಿ ಜ. 5ರಂದು ಪನ್ನೇಬೀಡಿನಲ್ಲಿ ಶ್ರೀ ಭಗವತಿ ಸಾನ್ನಿಧ್ಯದಲ್ಲಿ ಪ್ರತಿಷ್ಠಾ ದಿನ ಮಹಾಪೂಜೆ, ಅನ್ನಸಂತರ್ಪಣೆ ನಡೆಯಲಿದೆ. ರಥಬೀದಿಯ ಸಾಂಸ್ಕೃತಿಕ ವೇದಿಕೆಯಲ್ಲಿ ಸಂಜೆ ಗಂಟೆ 6ರಿಂದ ಇಲ್ಲಿನ ನೆಹರೂ ಸ್ಮಾರಕ ಕಾಲೇಜಿನ ವಿದ್ಯಾರ್ಥಿಗಳಿಂದ ಕಲಾವೈಭವ, ಬಳಿಕ ನಾಟ್ಯ ಗುರು ಮಂಜುನಾಥ್‌ ಪುತ್ತೂರು ಇವರ ಶ್ರೀ ಮಂಜುನಾಥ ಸುನಾದ ಮ್ಯೂಸಿಕಲ್ಸ್‌ ನೇರಳಕಟ್ಟೆ ತಂಡದಿಂದ ಸುಗಮ ಸಂಗೀತ ನಡೆಯಲಿದೆ.

LEAVE A REPLY

Please enter your comment!
Please enter your name here