Home ಧಾರ್ಮಿಕ ಸುದ್ದಿ ಸುಳ್ಯ ದಸರಾ: ಮುಂದಿನ ವರ್ಷದಿಂದ ಇನ್ನಷ್ಟು ವೈಭವ

ಸುಳ್ಯ ದಸರಾ: ಮುಂದಿನ ವರ್ಷದಿಂದ ಇನ್ನಷ್ಟು ವೈಭವ

1095
0
SHARE

ಸುಳ್ಯ : ಮೈಸೂರು, ಮಂಗಳೂರು, ಮಡಿಕೇರಿ ದಸರಾದಂತೆ ಸುಳ್ಯದಲ್ಲಿ ದಸರಾ ಉತ್ಸವ ವೈಭವ ತಾಳಬೇಕು. ಇದು ಕೈಗೂಡಬೇಕಾದರೆ ಎಲ್ಲರ ಭಾವನೆ ಒಂದಾಗಬೇಕು. ಮುಂದಿನ ವರ್ಷದಿಂದ ಸುಳ್ಯ ದಸರಾ ಇನ್ನಷ್ಟು ವೈಭವ ಪಡೆದುಕೊಳ್ಳಬೇಕಿದೆ ಎಂದು ದಸರಾ ಉತ್ಸವ ಸಮಿತಿಯ ಅಧ್ಯಕ್ಷ, ಶಾಸಕ ಎಸ್‌. ಅಂಗಾರ ಹೇಳಿದರು.

ಸುಳ್ಯ ಶ್ರೀ ಶಾರದಾಂಬಾ ದಸರಾ ಸೇವಾ ಟ್ರಸ್ಟ್‌, ಸಾರ್ವಜನಿಕ ಶ್ರೀ ಶಾರದಾಂಬಾ ಸೇವಾ ಸಮಿತಿ, ದಸರಾ ಉತ್ಸವ ಸಮಿತಿ ವತಿಯಿಂದ ನಡೆಯುತ್ತಿರುವ ದಸರಾ ಉತ್ಸವದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಂಘರ್ಷಕ್ಕೆ ಎಡೆಮಾಡಿದ ತೀರ್ಪು ನ್ಯಾಯವಾದಿ ಎಂ. ವೆಂಕಪ್ಪ ಗೌಡ ಮಾತನಾಡಿ, ಶಬರಿಮಲೆಯ ಅಯ್ಯಪ್ಪನನ್ನು ದರ್ಶನ ಪಡೆಯಲು 48 ದಿನಗಳ ಕಟ್ಟುನಿಟ್ಟಿನ ವ್ರತಾಚರಣೆ ಇತ್ತು. ಈಗ ಒಂದೆರಡು ದಿನದ ವ್ರತಾಚರಣೆ ಮಾಡಿ ದೇವರ ದರ್ಶನಕ್ಕೆ ಹೋಗುತ್ತಿದ್ದಾರೆ.

ಧರ್ಮದ ಆಚರಣೆಯ ಕಟ್ಟುಪಾಡನ್ನು ಮುರಿದ ಕಾರಣ ಮಹಿಳೆಯರು ದೇಗುಲು ಪ್ರವೇಶಿಸಬಹುದೆನ್ನುವ ನ್ಯಾಯಾಲಯದ ತೀರ್ಪು ಸಂಘರ್ಷಕ್ಕೆ ಎಡೆಮಾಡಿದೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಕೆಲಸ ಯಾರೂ ಮಾಡಬಾರದು ಎಂದರು.

ಕಾಲೇಜು ಪ್ರಾಂಶುಪಾಲೆ ಯಶೋದಾ ರಾಮಚಂದ್ರ, ಜಿ.ಪಂ. ಸದಸ್ಯ ಹರೀಶ್‌ ಕಂಜಿಪಿಲಿ, ಕೆವಿಜಿ ಆಯುರ್ವೇದ ಮೆಡಿಕಲ್‌ ಕಾಲೇಜಿನ ಆಡಳಿತಾಧಿಕಾರಿ ಡಾ| ಡಿ.ವಿ. ಲೀಲಾಧರ್‌, ಉದ್ಯಮಿ ದಾವರ್‌ ರಾಮ ಉಪಸ್ಥಿತರಿದ್ದರು.

ಶಾರದಾಂಬಾ ಸೇವಾ ಸಮಿತಿ ಅಧ್ಯಕ್ಷ ರಾಜು ಪಂಡಿತ ಸ್ವಾಗತಿಸಿ, ಗೌರವಾಧ್ಯಕ್ಷ ಕೆ. ಗೋಕುಲದಾಸ್‌ ಪ್ರಸ್ತಾವನೆಗೈದರು. ದಸರಾ ಉತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ನಾರಾಯಣ ಕೇಕಡ್ಕ ವಂದಿಸಿದರು. ಸೇವಾ ಟ್ರಸ್ಟ್‌ನ ಕಾರ್ಯದರ್ಶಿ ಬೂಡು ರಾಧಾಕೃಷ್ಣ ರೈ ನಿರೂಪಿಸಿದರು.

ಬಳಿಕ ಅನುಗ್ರಹ ಮೆಲೋಡಿಸ್‌ ತಂಡದಿಂದ ಸಂಗೀತ ರಸಮಂಜರಿ ನಡೆಯಿತು.

LEAVE A REPLY

Please enter your comment!
Please enter your name here