Home ಧಾರ್ಮಿಕ ಸುದ್ದಿ ಸುಳ್ಯ: ಜ. 11ಕ್ಕೆ ರಥೋತ್ಸವ

ಸುಳ್ಯ: ಜ. 11ಕ್ಕೆ ರಥೋತ್ಸವ

1238
0
SHARE

ಸುಳ್ಯ : ಶ್ರೀ ಚೆನ್ನಕೇಶವ ದೇವಸ್ಥಾನದ ವರ್ಷಾವಧಿ ಜಾತ್ರೆಯು ಡಿ. 28ರಂದು ಗೊನೆ ಮುಹೂರ್ತದೊಂದಿಗೆ ಆರಂಭ ಗೊಂಡು ಜ. 12ರ ತನಕ ಬ್ರಹ್ಮಶ್ರೀ ದೇಲಂಪಾಡಿ ಬಾಲಕೃಷ್ಣ ತಂತ್ರಿ ಮಾರ್ಗದರ್ಶನದಲ್ಲಿ ನಡೆಯಲಿದೆ.

ಜ. 3ರಂದು ಉಗ್ರಾಣ ತುಂಬಿಸುವುದು, ರಾತ್ರಿ ಪಯ್ಯೋಳಿ ತರುವುದು, ಕುಕ್ಕನ್ನೂರು ದೈವಗಳ ಭಂಡಾರ ಬಂದು, ಧ್ವಜಾರೋಹಣ ಕಾರ್ಯಕ್ರಮ ನಡೆಯಲಿದೆ. ಜ. 5ರಂದು ಪನ್ನೇಬೀಡಿನಲ್ಲಿ ಪ್ರತಿಷ್ಠಾ ದಿನ, ಜ. 8ರಂದು ರಾತ್ರಿ ಉತ್ಸವ ಬಲಿ ಹೊರಡುವುದು, ಜ. 9ರಂದು ಬೆಳಗ್ಗೆ ಸಣ್ಣ ದರ್ಶನ ಬಲಿ, ನಡು ಬೆಳಗು ಬಟ್ಟಲು ಕಾಣಿಕೆ, ರಾತ್ರಿ ಪಟ್ಟಣ ಸವಾರಿ, ಜ. 10ರಂದು ಮಿತ್ತೂರು ಮತ್ತು ಕಾನತ್ತಿಲ ದೈವಗಳ ಭಂಡಾರ ಬಂದು ವಾಲಸಿರಿ ಉತ್ಸವ ನಡೆಯಲಿದೆ.
ರಥೋತ್ಸವ ಜ. 11ರಂದು ದೊಡ್ಡ ದರ್ಶನ ಬಲಿ, ಬಟ್ಟಲು ಕಾಣಿಕೆ, ರಾತ್ರಿ ಕಲ್ಕುಡ ದೈವಗಳ ಭಂಡಾರ ಬಂದು ರಥೋತ್ಸವ ಸಂಭ್ರಮದಿಂದ ನಡೆಯಲಿದೆ.

ಜ. 12ರಂದು ಬೆಳಗ್ಗೆ ಆರಾಟ ಬಾಗಿಲು ತೆಗೆಯುವುದು, ಮಧ್ಯಾಹ್ನ ಅನ್ನಸಂತರ್ಪಣೆ, ರಾತ್ರಿ ಕಟ್ಟೆ ಪೂಜೆ, ಧ್ವಜಾವರೋಹಣ ನಡೆದು ಮರುದಿನ
ಸಂಪ್ರೋಕ್ಷಣೆ, ಮಂತ್ರಾಕ್ಷತೆಯೊಂದಿಗೆ ಜಾತ್ರೆ ಸಂಪನ್ನಗೊಳ್ಳಲಿದೆ. ಜ. 3ರಿಂದ 9ರ ತನಕ ಪ್ರತಿದಿನ ಸಂಜೆ 7 ಗಂಟೆಯಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ದೇವ
ಸ್ಥಾನದ ಮುಂಭಾಗದಲ್ಲಿ ನಡೆಯಲಿದೆ ಎಂದು ದೇಗುಲದ ಆನುವಂಶಿಕ ಆಡಳಿತ ಮೊಕ್ತೇಸರ ಡಾ| ಹರಪ್ರಸಾದ್‌ ತುದಿಯಡ್ಕ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here