Home ಧಾರ್ಮಿಕ ಸುದ್ದಿ ಸುಳ್ಳಮಲೆ ನೈಸರ್ಗಿಕ ಗುಹಾ ಸ್ನಾನಕ್ಕೆ ಚಾಲನೆ

ಸುಳ್ಳಮಲೆ ನೈಸರ್ಗಿಕ ಗುಹಾ ಸ್ನಾನಕ್ಕೆ ಚಾಲನೆ

262
0
SHARE

ಸುಳ್ಳಮಲೆ: ಐತಿಹಾಸಿಕ ಮಹತ್ವದ ಸುಳ್ಳಮಲೆ ನೈಸರ್ಗಿಕ ಪವಿತ್ರ ಗುಹಾ ಸ್ನಾನಕ್ಕೆ ಸೋಣ ಅಮಾವಾಸ್ಯೆ ಆ. 30ರಂದು ಕೆರ್ಪು ಇಡುವ ಮೂಲಕ ಚಾಲನೆ ನೀಡಲಾಯಿತು.

ಬೆಳಗ್ಗೆ ಗುಹಾ ಸ್ಥಳದ ಸನಿಹದಲ್ಲಿ ಅರಸು ಮತ್ತು ಪ್ರಧಾನಿ ದೈವಗಳಿಗೆ ತಂಬಿಲ ಸೇವೆ ಪರ್ವ ಬಡಿಸುವ ಮೂಲಕ ಗುಹಾ ಸ್ನಾನಕ್ಕೆ ಯಾವುದೇ ವಿಘ್ನ ಬಾರದಂತೆ ಪ್ರಾರ್ಥನೆ ನಡೆಸಲಾಯಿತು.

ವಾಡಿಕೆಯಂತೆ ಅಮಾವಾಸ್ಯೆಯಿಂದ ಸೆ. 2ರ ಚೌತಿ ತನಕ ಇಲ್ಲಿ ಗುಹೆಯ ಒಳಗೆ ಇಳಿದು ದೊಡ್ಡ ಬಂಡೆಕಲ್ಲಿನ ಒಳ ಪ್ರದೇಶದಲ್ಲಿ ಎತ್ತರದಿಂದ ಧುಮುಕುವ ನೀರಿಗೆ ತಲೆಕೊಟ್ಟು ಸ್ನಾನ ಮಾಡುವುದು ಪರಂಪರೆಯಲ್ಲಿ ನಡೆದು ಬಂದಿದೆ.

ಭಕ್ತರು ಗೋವಿಂದ ಎಂದು ––ನಾಮ ಸ್ಮರಣೆ ಮಾಡುತ್ತಾ ಸಾಲು ಸಾಲಾಗಿ ಗುಹೆ ಒಳಗೆ ಹೊಕ್ಕು ತೀರ್ಥಸ್ನಾನ ಮಾಡುತ್ತಾರೆ. ಈ ಅವಧಿ ಬಿಟ್ಟರೆ ಉಳಿದಂತೆ ಯಾವ ದಿನವೂ ಗುಹಾ ತೀರ್ಥ ಸ್ನಾನಕ್ಕೆ ತೆರಳುವಂತಿಲ್ಲ.

LEAVE A REPLY

Please enter your comment!
Please enter your name here