Home ಧಾರ್ಮಿಕ ಸುದ್ದಿ ಸುಳ್ಯ: ಶ್ರೀ ಗುರುರಾಯರ ಆರಾಧನ ಮಹೋತ್ಸವ

ಸುಳ್ಯ: ಶ್ರೀ ಗುರುರಾಯರ ಆರಾಧನ ಮಹೋತ್ಸವ

1282
0
SHARE

ಸುಳ್ಯ : ಶ್ರೀ ಗುರು ರಾಘವೇಂದ್ರ ಮಠದಲ್ಲಿ ರಾಯರ ಆರಾಧನ ಮಹೋತ್ಸವವು ಮಂಗಳವಾರ ವೇ|ಮೂ| ಮುಕ್ಕೂರು ರಾಘವೇಂದ್ರ ಶಾಸ್ತ್ರಿ ಅವರ ನೇತೃತ್ವದಲ್ಲಿ ನಡೆಯಿತು. ಮಠದ ಅರ್ಚಕ ಶ್ರೀಹರಿ ಎಳಚಿತ್ತಾಯ ಪೂಜೆಯಲ್ಲಿ ಸಹಕರಿಸಿದರು. ಬೆಳಗ್ಗೆ ದೀಪ ಪ್ರಜ್ವಲನೆ, ಪವಮಾನ ಹೋಮ, ಪಂಚಾಮೃತ ಅಭಿಷೇಕ, ಕಲಶಾಭಿಷೇಕ, ಅಲಂಕಾರ ಪೂಜೆ, ಮಹಾಪೂಜೆ, ಸಂಜೆ ಅಷ್ಟಾವಧಾನ ಸೇವೆಗಳು ನಡೆದವು. ನೂರಾರು ಭಕ್ತರು ಪೂಜೆ ಸಲ್ಲಿಸಿ ಅನ್ನ ಪ್ರಸಾದ ಸ್ವೀಕರಿಸಿದರು.

ಬೃಂದಾವನ ಸೇವಾ ಟ್ರಸ್ಟ್‌ ಅಧ್ಯಕ್ಷ ಎಂ.ಎನ್‌. ಶ್ರೀಕೃಷ್ಣ, ಕಾರ್ಯದರ್ಶಿ ಪ್ರವೀಣ್‌ ಎಸ್‌. ರಾವ್‌, ಖಜಾಂಚಿ ರಮೇಶ ಸೋಮಯಾಗಿ, ಮಠ ನಿರ್ಮಾಣ ಸಮಿತಿ ಕಾರ್ಯಾಧ್ಯಕ್ಷ ಮತ್ತು ಸುಳ್ಯ ತಾಲೂಕು ಶಿವಳ್ಳಿ ಸಂಪನ್ನದ ಅಧ್ಯಕ್ಷ ಮುರಳಿಕೃಷ್ಣ ಡಿ.ಆರ್‌., ಕಾರ್ಯದರ್ಶಿ ಪಿ.ಬಿ. ಸುಧಾಕರ ರೈ, ಶಿವಳ್ಳಿ ಸಂಪನ್ನದ ಕಾರ್ಯದರ್ಶಿ ರಾಮಕುಮಾರ್‌ ಹೆಬ್ಟಾರ್‌, ಮಹೋತ್ಸವ ಸಮಿತಿ ಕಾರ್ಯದರ್ಶಿ ಶಶಿಧರ ಎಂ.ಜೆ., ಸಂಚಾಲಕ ಪ್ರಕಾಶ್‌ ಮೂಡಿತ್ತಾಯ, ಖಜಾಂಚಿ ಕೆ. ಪ್ರಭಾಕರ ನಾಯರ್‌, ಶಿವಳ್ಳಿ ಸಂಪನ್ನದ ಮಹಿಳಾ ಘಟಕದ ಅಧ್ಯಕ್ಷೆ ಮಮತಾ ಮೂಡಿತ್ತಾಯ, ಕಾರ್ಯದರ್ಶಿ ಸೌಮ್ಯಾ ಸೋಮಯಾಗಿ, ಪ್ರಥಮ ಮೂಡಿತ್ತಾಯ, ಖಜಾಂಚಿ ಅಖಿಲ್‌ ಸೋಮಯಾಗಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here