Home ಧಾರ್ಮಿಕ ಸುದ್ದಿ ಸುಳ್ಯ ದಸರಾ: ಲೋಕಕಲ್ಯಾಣಾರ್ಥ ಚಂಡಿಕಾ ಮಹಾಯಾಗ

ಸುಳ್ಯ ದಸರಾ: ಲೋಕಕಲ್ಯಾಣಾರ್ಥ ಚಂಡಿಕಾ ಮಹಾಯಾಗ

1384
0
SHARE

ಸುಳ್ಯ : ಶ್ರೀ ಶಾರದಾಂಬಾ ದಸರಾ ಸೇವಾ ಟ್ರಸ್ಟ್‌ ಸುಳ್ಯ ಹಾಗೂ ಸಾರ್ವಜನಿಕ ಶ್ರೀ ಶಾರದಾಂಬಾ ಸೇವಾ ಸಮಿತಿ ಸುಳ್ಯ, ತಾಲೂಕು ದಸರಾ ಉತ್ಸವ ಸಮಿತಿ ಆಶ್ರಯದಲ್ಲಿ ನಡೆದ 48ನೇ ವರ್ಷದ ಶ್ರೀ ಶಾರದಾಂಬಾ ಉತ್ಸವ- ಸುಳ್ಯ ದಸರಾದಲ್ಲಿ ಶುಕ್ರವಾರ ಮಹಾಗಣಪತಿ ಹವನ ಸಹಿತ ಚಂಡಿಕಾ ಮಹಾಯಾಗ ನಡೆಯಿತು.

ಶ್ರೀ ಕೇಶವ ಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನದ ಸಹಕಾರದಲ್ಲಿ ಬ್ರಹ್ಮಶ್ರೀ ಪುರೋಹಿತ ನಾಗರಾಜ ಭಟ್‌ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಯಿತು. ನೂರಾರು ಭಕ್ತರು ಪೂಜೆ ಸಲ್ಲಿಸಿದರು. ಬಳಿಕ ಅನ್ನಸಂತರ್ಪಣೆ ನಡೆಯಿತು.

ಶ್ರೀ ಶಾರದಾಂಬಾ ಸೇವಾ ಸಮಿತಿ ಅಧ್ಯಕ್ಷ ನಾರಾಯಣ ಕೇಕಡ್ಕ, ಗೌರವಾಧ್ಯಕ್ಷ ಕೆ. ಗೋಕುಲದಾಸ್‌, ಉಪಾಧ್ಯಕ್ಷರಾದ ಚಿದಾನಂದ ವಿದ್ಯಾನಗರ, ರವಿಚಂದ್ರ ಕೊಡಿಯಾಲಬೈಲು, ಪ್ರಧಾನ ಕಾರ್ಯದರ್ಶಿ ಬೂಡು ರಾಧಾಕೃಷ್ಣ ರೈ, ಕೋಶಾಧಿಕಾರಿ ಕೆ. ರಾಜು ಪಂಡಿತ್‌, ಕಾರ್ಯದರ್ಶಿ ರಾಜೇಶ್‌ ಕುರುಂಜಿಗುಡ್ಡೆ ಮತ್ತು ನಿರ್ದೇಶಕರು, ಶಾರದಾಂಬಾ ದಸರಾ ಸೇವಾ ಟ್ರಸ್ಟ್‌ನ ಅಧ್ಯಕ್ಷ ನವೀನ್‌ ಚಂದ್ರ ಕೆ.ಎಸ್‌., ಪ್ರಧಾನ ಕಾರ್ಯದರ್ಶಿ ಎಂ.ಕೆ. ಸತೀಶ್‌, ನಿರ್ದೇಶಕರಾದ ತೀರ್ಥರಾಮ ಜಾಲ್ಸೂರು, ಉದಯಕುಮಾರ್‌, ಕೆ. ಪುರುಷೋತ್ತಮ, ಗೌರವ ಸಲಹೆಗಾರ್ತಿ, ನಿವೃತ್ತ ಶಿಕ್ಷಕಿ ಕಮಲಾಕ್ಷಿ ವಿ. ಶೆಟ್ಟಿ ಉಪಸ್ಥಿತರಿದ್ದರು. ಸಂಜೆ ರಂಗಮಯೂರಿ ಕಲಾ ತಂಡದಿಂದ ಯಕ್ಷ ರೂಪಕ, ಸಾಂಸ್ಕೃತಿಕ ವೈಭವ ನಡೆಯಿತು.

LEAVE A REPLY

Please enter your comment!
Please enter your name here