Home ಧಾರ್ಮಿಕ ಸುದ್ದಿ ಸುಳ್ಯ ದಸರಾ: ವೈಭವದ ಶಾರದಾ ಶೋಭಾಯಾತ್ರೆ

ಸುಳ್ಯ ದಸರಾ: ವೈಭವದ ಶಾರದಾ ಶೋಭಾಯಾತ್ರೆ

1297
0
SHARE

ಸುಳ್ಯ: ಶ್ರೀ ಶಾರದಾಂಬಾ ದಸರಾ ಸೇವಾ ಟ್ರಸ್ಟ್‌ ಸುಳ್ಯ, ಸಾರ್ವಜನಿಕ ಶ್ರೀ ಶಾರದಾಂಬಾ ಸೇವಾ ಸಮಿತಿ ಸುಳ್ಯ, ದಸರಾ ಉತ್ಸವ ಸಮಿತಿ ಸುಳ್ಯ ತಾಲೂಕು ಇದರ ಆಶ್ರಯದಲ್ಲಿ ನಡೆಯುತ್ತಿರುವ 48ನೇ ವರ್ಷದ ಶ್ರೀ ಶಾರದಾಂಬಾ ಉತ್ಸವ-ಸುಳ್ಯ ದಸರಾದ ಅಂಗವಾಗಿ ರವಿವಾರ ರಾತ್ರಿ ಶಾರದಾದೇವಿಯ ಭವ್ಯ ಶೋಭಾಯಾತ್ರೆ ನಡೆಯಿತು.

ಚೆನ್ನಕೇಶವ ದೇವಾಲಯದ ಮುಂಭಾಗದ ಶಾರದೋತ್ಸವ ಮಂಟಪದಿಂದ ಆರಂಭಗೊಂಡ ಮೆರವಣಿಗೆಯು ನಗರದ ಮುಖ್ಯ ರಸ್ತೆಯಲ್ಲಿ ಸಾಗಿ ಶಾರದಾ ಮೂರ್ತಿಯ ಜಲಸ್ತಂಭನ ನಡೆಯಿತು. ಬಗೆ ಬಗೆಯ ಸ್ತಬ್ಧ ಚಿತ್ರಗಳು, ಹುಲಿವೇಷ ತಂಡ, ವರ್ಣಮಯ ಬಣ್ಣದೋಕುಳಿ ಮೆರವಣಿಗೆಗೆ ಮೆರುಗು ತುಂಬಿತ್ತು

LEAVE A REPLY

Please enter your comment!
Please enter your name here