ನಗರ : ಸುಳ್ಯಪದವು ಬ್ರಹ್ಮಬೈದರ್ಕಳ ಗರಡಿಯಲ್ಲಿ ಶ್ರೀ ಬ್ರಹ್ಮಬೈದರ್ಕಳ ಮತ್ತು ಪರಿವಾರ ದೈವಗಳ ಪುನಃ ಪ್ರತಿಷ್ಠಾ ಕಲಶಾಭಿಷೇಕ ಹಾಗೂ ವಾರ್ಷಿಕ ನೇಮ ಮಾ.20ರಿಂದ 23ರ ತನಕ ನಡೆಯಲಿದೆ ಎಂದು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರಘುನಾಥ ರೈ ನುಳಿಯಾಲು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಸುಮಾರು 50 ಲಕ್ಷ ರೂ. ವೆಚ್ಚದಲ್ಲಿ ದೈವಸ್ಥಾನದ ಜೀರ್ಣೋದ್ಧಾರ ಕೆಲಸಗಳನ್ನು ಮಾಡಲಾಗಿದೆ. ಹಲವು ಮಂದಿ ದಾನಿಗಳು ಮತ್ತು ಭಕ್ತರ ಶ್ರಮದಾನ ಸೇವೆಯ ಮೂಲಕ ಸಹಕಾರ ನೀಡಿದ್ದಾರೆ. ಆ ಮೂಲಕ ಶ್ರೀ ಕೋಟಿ-ಚೆನ್ನಯ ಬ್ರಹ್ಮಬೈದರ್ಕಳ ಮತ್ತು ಪರಿವಾರ ದೈವಗಳಾದ ಮೂಲ ಮೈಸಂದಾಯ, ಕೊಡಮಣಿತ್ತಾಯ, ಇಷ್ಟದೇವತೆ, ಮಾಯಂದಾಳ್ ದೈವಗಳ ಪ್ರತಿಷ್ಠೆ ನಡೆಯುತ್ತಿದೆ ಎಂದು ತಿಳಿಸಿದರು.
ಕುಂಟಾರು ಬ್ರಹ್ಮಶ್ರೀ ವೇ| ಮೂ| ವಾಸುದೇವ ತಂತ್ರಿ ಮತ್ತು ಲೋಕೇಶ್ ಶಾಂತಿ ಮಂಗಳೂರು ನೇತೃತ್ವದಲ್ಲಿ ವಿಧಿ ವಿಧಾನಗಳು ನಡೆಯಲಿವೆ. ಮಾ. 20ರ ಪೂರ್ವಾಹ್ನ ದಹನಶಾಂತಿ ಹೋಮ ಮತ್ತು ಚೋರಶಾಂತಿ ಹೋಮ, ದೇವತಾ ಪ್ರಾರ್ಥನೆ, ಸ್ವಸ್ತಿ ಪುಣ್ಯಾಹ, ಆಚಾರ್ಯವರಣ, ತೋರಣ ಮುಹೂರ್ತ, ಗಣಪತಿ ಹೋಮ, ಉಗ್ರಾಣ ಮುಹೂರ್ತ ನಡೆಯಲಿದೆ. ಪಡುಮಲೆ ಶ್ರೀ ಕೋಟಿ- ಚೆನ್ನಯ ಪ್ರತಿಷ್ಠಾನದ ಅಧ್ಯಕ್ಷ ನಾರಾಯಣ ರೈ ಕುದಾಡಿ ಉದ್ಘಾಟನೆ ನೆರವೇರಿಸಲಿದ್ದಾರೆ. ಮಧ್ಯಾಹ್ನ ಅನ್ನದಾನ, ಸಂಜೆ ಪ್ರಾಸಾದ
ಪರಿಗ್ರಹ, ಸಪ್ತಶುದ್ಧಿ, ರಾಕ್ಷೋಘ್ನ ಹೋಮ, ವಾಸ್ತು ಪೂಜೆ, ಪ್ರಾಕಾರ ಬಲಿ ನಡೆಯಲಿದೆ. ಮಾ. 21ರ ಬೆಳಗ್ಗೆ ಗಣಪತಿ ಹೋಮ, ನವಗ್ರಹ ಶಾಂತಿಹೋಮ, ಮಧ್ಯಾಹ್ನ ಅನ್ನದಾನ,
ಸಂಜೆ ಬ್ರಹ್ಮರಗುಂಡದಲ್ಲಿ ವಾಸ್ತು ಹೋಮ, ವಾಸ್ತು ಪೂಜೆ, ವಾಸ್ತು ಬಲಿ, ಅಧಿವಾಸ ಕರ್ಮಾದಿಗಳು, ಬಿಂಬ ಶುದ್ಧಿ, ಅಧಿವಾಸ ಹೋಮ, ಬಿಂಬಾಧಿವಾಸ, ತಣ್ತೀಹೋಮ, ಕಲಶಾಧಿವಾಸ, ರಾತ್ರಿ ಅನ್ನದಾನ ನಡೆಯಲಿದೆ ಎಂದರು.
ಮಾ. 22: ಕಲಶಾಭಿಷೇಕ ಮಾ. 22ರ ಬೆಳಗ್ಗೆ ಗಣಪತಿ ಹೋಮ, ಬ್ರಹ್ಮರಗುಂಡದಲ್ಲಿ ಪೂಜೆ, ಶಿಖರ ಪ್ರತಿಷ್ಠೆ, ಪ್ರತಿಷ್ಠಾ ಹೋಮ, 11.46ರ ಮಿಥುನ ಲಗ್ನ ಮುಹೂರ್ತದಲ್ಲಿ
ಬ್ರಹ್ಮಬೈದರ್ಕಳ, ಮೂಲ ಮೈಸಂದಾಯ, ಕೊಡಮಣಿತ್ತಾಯ, ಇಷ್ಟದೇವತೆ, ಮಾಯಂದಾಳ್ ದೈವಗಳ ಪುನಃ ಪ್ರತಿಷ್ಠಾ ಕಲಶಾಭಿಷೇಕ, ಪಂಚಪರ್ವ, ಪ್ರಸನ್ನ ಪೂಜೆ, ಮಧ್ಯಾಹ್ನ ಮಂಗಳಾರತಿ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ಕೊಡಮಣಿತ್ತಾಯ, ಮೂಲ ಮೈಸಂದಾಯ, ಇಷ್ಟದೇವತೆ ದೈವಗಳ ಕೋಲ, ರಾತ್ರಿ ಶ್ರೀ ಕೋಟಿ- ಚೆನ್ನಯರು ಗರಡಿ ಇಳಿಯುವುದು, ಸುರಿಯೆ ಒಪ್ಪಿಸುವುದು, ರಾತ್ರಿ ಶ್ರೀದೇವಿ ಮಾಯಂದಾಳ್ ಗರಡಿ ಇಳಿದು ರಂಗಸ್ಥಳ ಪ್ರವೇಶವಾಗಿ ಶ್ರೀ ಮಾಯಂದಾಳ್ ದೇವಿಯ ಹಸ್ತದಿಂದ ಅಭಯ ಹೂ ಪ್ರಸಾದ ವಿತರಣೆ, ಪ್ರಾತಃಕಾಲ ಕೋಟಿ-ಚೆನ್ನಯ ದರ್ಶನ ಪಾತ್ರಿಗಳ ಸೇಟ್, ಕೋಟಿ-ಚೆನ್ನಯರ ಸೇಟ್ ನಡೆಯಲಿದೆ.
ಪ್ರತಿಷ್ಠಾ ಕಲಶೋತ್ಸವ ಸಮಿತಿ ಅಧ್ಯಕ್ಷ ಜಯಂತ ನಡುಬೈಲು, ಪ್ರಧಾನ ಕಾರ್ಯದರ್ಶಿ ಗಿರೀಶ್ ಕುಮಾರ್ ಸಿ.ಎಸ್., ಜೀರ್ಣೋದ್ಧಾರ ಸಮಿತಿ ಕೋಶಾಧಿಕಾರಿ ಎನ್. ದಾಮೋದರ ಮಣಿಯಾಣಿ ನಾಕೂರು ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿದ್ದರು.
ಧಾರ್ಮಿಕ ಸ»ಮಾ. 21ರ ಸಂಜೆ ಧಾರ್ಮಿಕ ಸಭೆಯನ್ನು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಎನ್. ಸುಧಾಕರ ಶೆಟ್ಟಿ ಉದ್ಘಾಟಿಸಲಿದ್ದು,
ಉಪ್ಲೇರಿ ಶ್ರೀ ಮಂತ್ರಮೂರ್ತಿ ಗುಳಿಗ ಸನ್ನಿಧಿಯ ಪ್ರಧಾನ ಕರ್ಮಿ ಗೋಪಾಲಕೃಷ್ಣ ಕುಲಾಲ್ ವಾಂತಿಚಾಲು ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಮಾ. 22ರ ಸಂಜೆ ಧಾರ್ಮಿಕ ಸಭೆಯನ್ನು ಹನುಮಗಿರಿ ಕ್ಷೇತ್ರ ಧರ್ಮದರ್ಶಿ ನನ್ಯ ಅಚ್ಯುತ ಮೂಡೆತ್ತಾಯ ಉದ್ಘಾಟಿಸಲಿದ್ದು, ಸಂತ ಅಲೋಶಿಯಸ್ ಕಾಲೇಜಿನ ಉಪನ್ಯಾಸಕ ಡಾ| ಗಣೇಶ್ಅಮೀನ್ ಸಂಕಮಾರ್ ಉಪನ್ಯಾಸ ನೀಡಲಿದ್ದಾರೆ. ಮಾ. 20ರಿಂದ 23ರ ತನಕ ಪ್ರತಿದಿನ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದವರು ತಿಳಿಸಿದರು.