ಬೆಳ್ತಂಗಡಿ : ಸೂಳಬೆಟ್ಟು ಬರಯ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಸನಿಹ ಹರಿಯುತ್ತಿರುವ ಫಲ್ಗುಣಿ ನದಿ ತಟದಲ್ಲಿ ನಿರ್ಮಿಸಲಾದ ಅಪರಕರ್ಮಾಂಗಗಳನ್ನು ನೆರವೇರಿಸುವ ವಿಷ್ಣುಪದ ಕಟ್ಟಡದ ಉದ್ಘಾಟನ ಕಾರ್ಯಕ್ರಮ ಶನಿವಾರ ನಡೆಯಿತು. ಕ್ಷೇತ್ರದ ತಂತ್ರಿ ಸೀತಾರಾಮ ಹೆಬ್ಟಾರ್ ಕಾಜಿಮುಗೇರು ಅವರು ಕಟ್ಟಡವನ್ನು ಉದ್ಘಾಟಿಸಿದರು. ಪುರೋಹಿತ ಪದ್ಮನಾಭ ಜೋಶಿ ಅವರು ಗಣಪತಿ ಹವನವನ್ನು ನೆರವೇರಿಸಿದರು.
ಸಹಮೊಕ್ತೇಸರರಾದ ಪ್ರಕಾಶ್ ಜೋಶಿ, ಚಂದ್ರಕಾಂತ ಗೋರೆ, ಪುರುಷೋತ್ತಮ ತಾಮನ್ಕಾರ್, ಅರ್ಚಕ ವೆಂಕಟೇಶ ಗೋಖಲೆ, ಪ್ರಮುಖರಾದ ಪ್ರಭಾಕರ ಆಠವಳೆ, ಸದಾಶಿವ ಆಠವಳೆ, ಶ್ರೀಕಂಠ ಮೆಹೆಂದಳೆ, ಮುರಲೀಧರ ಗೋಖಲೆ, ಪ್ರವೀಣಚಂದ್ರ ಮೆಹೆಂದಳೆ, ಅಮರೇಶ ಜೋಶಿ, ದಿನೇಶ್ ಅಭ್ಯಂಕಾರ್, ಶ್ರೀಕಾಂತ ಪಟವರ್ಧನ್, ಜಯರಾಮ ಹೆಗ್ಡೆ ಮೊದಲಾದವರು ಉಪಸ್ಥಿತರಿದ್ದರು.