ಬೆಳ್ತಂಗಡಿ : ಸೂಳಬೆಟ್ಟು ಬರಯ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಸಾಮೂಹಿಕ ಶ್ರೀ ಮದ್ಭಾಗವತ ಸಪ್ತಾಹ ಯಜ್ಞ ಡಿ. 12 ರಿಂದ ವಿಧ್ಯುಕ್ತವಾಗಿ ಆರಂಭಗೊಂಡಿತು.
ಭಜನ ಸತ್ಸಂಗ, ಅಷ್ಟಸೇವೆ ಪುರೋಹಿತ ಸತೀಶ್ ಹೆಬ್ಟಾರ್ ಅವರ ನೇತೃತ್ವದಲ್ಲಿ ಹಾಗೂ ಮಹೇಶ್ ಗೋಖಲೆ ಮತ್ತು ಅನಂತ ಗೋಖಲೆ ದುರ್ಗ ಅವರ ಸಹಕಾರದೊಂದಿಗೆ ಭಾಗವತ ವಾಚನ, ಬಳಿಕ ವಿದ್ಯಾವಾರಿಧಿ ಡಾ| ವಾಗೀಶ್ವರೀ ಶಿವರಾಮ ಅವರಿಂದ ಪ್ರವಚನದೊಂದಿಗೆ ಏಳು ದಿನಗಳ ಕಾರ್ಯಕ್ರಮಕ್ಕೆ ನಾಂದಿ ಹಾಡಲಾಯಿತು. ರಾತ್ರಿ ದೇಗುಲದಲ್ಲಿ ಭಜನ ಸತ್ಸಂಗ ಹಾಗೂ ಅಷ್ಟಸೇವೆಗಳು ನಡೆದವು.
ಸಪ್ತಾಹದ ಆಯೋಜಕ ಮೋಹನ ಸೀ. ಚಿಪಳೂಣಕರ್, ಗೋವಿಂದ ಸೀ. ಚಿಪಳೂಣಕರ್, ದೇಗುಲದ ಅರ್ಚಕ ವೆಂಕಟೇಶ ಗೋಖಲೆ, ಆಡಳಿತ ಮೊಕ್ತೇಸರ ಸದಾನಂದ ಸಹಸ್ರಬುದ್ಧೆ ಮತ್ತಿತತರು ಉಪಸ್ಥಿತರಿದ್ದರು. ಡಿ.15ರ ಅಪರಾಹ್ನ ಭೀಷ್ಮಾರ್ಜುನ ತಾಳಮದ್ದಳೆ, 16 ರಂದು ಅಪರಾಹ್ನ ಮೆಂಡೋಲಿನ್ ವಾದನ, 17 ರಂದು ಅಪರಾಹ್ನ ವೇಣುವಾದನ ನಡೆಯಲಿದೆ.