ಸುಬ್ರಹ್ಮಣ್ಯ : ಮುಸ್ಲಿಂ ಯುವ ಸಮೂಹವು ನೈಜ ಅಹ್ಲು ಸುನ್ನತಿ ವಲ್ ಜಮಾಹ ಆಶಯ ಆದರ್ಶವನ್ನು ಎತ್ತಿ ಹಿಡಿದು ಐದು ಹೊತ್ತು ಕಡ್ಡಾಯ ನಮಾಝ್ ವ್ರತ ಹಾಗೂ ಪ್ರವಾದಿ ಸರವರ ಮೇಲೆ ಸ್ವಲಾತ್ ಮುಂತಾದ ಸತ್ಕರ್ಮಗಳನ್ನು ಮಾಡುವ ಮೂಲಕ ಮಾತ್ರ ಇಹಪರ ವಿಜಯಿಯಾಗಲು ಸಾಧ್ಯ ಎಂದು ದ.ಕ. ಜಿಲ್ಲಾ ಸಂಯುಕ್ತ ಖಝಿಗಳಾದ ಫಝಲ್ ಕೋಯಮ್ಮ ತಂಙಳ್ ಕೂರತ್ ಹೇಳಿದರು.
ಎಣ್ಮೂರು ಮುಚ್ಚಿಲ ರಿಫಾಯಿಯ್ಯ ಮಸ್ಜಿದ್ನಲ್ಲಿ ನಡೆದ 10ನೇ ವರ್ಷದ ಸ್ವಲಾತ್ ವಾರ್ಷಿಕ ಕಾರ್ಯಕ್ರಮದಲ್ಲಿ ಕೂಟ್ಟು ಪ್ರಾರ್ಥನೆ ನೆರವೇರಿಸಿ ಮಾತನಾಡಿದರು. ಝೈನುಲ್ ಅಬಿದೀನ್ ತಂಙಳ್ ಅಲ್-ಬುಖಾರಿ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭವನ್ನು ಅಬೂಬಕ್ಕರ್ ಬಾಖವಿ ಕಾಂಞಂಗಾಡ್ ಉದ್ಘಾಟಿಸಿದರು. ಕಾಸರಗೋಡು ದೇಳಿ ಸ-ಅದಿಯಾ ಪ್ರಾಂಶುಪಾಲ ಕೆ.ಪಿ. ಹುಸೈನ್ ಸಅದಿ ಕೆ.ಸಿ. ರೋಡ್ ಮುಖ್ಯ ಪ್ರಭಾಷಣ ಮಾಡಿದರು. ಇಬ್ನ್ ಮೌಲಾ ತಂಙಳ್ ಅಲ್-ಬುಖಾರಿ ಚೇಲಕ್ಕಾಡ್, ದಾರುಲ್ ಅಶ್ಚರಿಯ್ಯ ಸುರಿಬೈಲ್ ಪ್ರಾಂಶುಪಾಲ ಪಿ.ಎ. ಉಸ್ತಾದ್ ಮಾತನಾಡಿದರು.
ಕುಂಞಕೋಯ ತಂಙಳ್ ಸುಳ್ಯ, ಹಸನ್ ಸಖಾಫಿ ಬೆಳ್ಳಾರೆ, ಅಬ್ದುಲ್ ರಹೀಂ ಸಖಾಫಿ ಎಣ್ಮೂರು, ಅಬ್ದುಲ್ ಹಮೀದ್ ಮದನಿ ನಿಂತಿಕಲ್ಲು, ಇಸ್ಲಾಮಿಕ್ ಪಾಜಪಳ್ಳ, ಅಬ್ದುಲ್ ಮಜೀದ್ ರಞ ನಯೀಮಿ ಕರಿಂಬಿಲ, ವಕೀಲ ಐ. ಕುಂಞಪಳ್ಳಿ ಸುಳ್ಯ, ಅಬ್ದುಲ್ ಗಫೂರ್ ಕಲ್ಮಡ್ಕ, ಮೂಸ ಎಲಿಮಲೆ, ಯೂಸುಫ್ ಕೈಕಾರ, ಇಸ್ಮಾಯಿಲ್ ಪಡಿನಂಗಡಿ, ಅಬ್ದುಲ್ ರಹಿಮಾನ್ ಅಲೆಕ್ಕಾಡಿ, ಅಬ್ದುಲ್ಲ ಜಿ. ಎಣ್ಮೂರು, ಮಹಮ್ಮದ್ ಬೆಳ್ಳಾರೆ, ಉಮ್ಮರ್ ಬೀಜದಕಟ್ಟೆ ಸುಳ್ಯ, ಯಾಕೂಬ್ ಸಾಹೇಬ್ ಇಂದ್ರಾಜೆ, ಮಹಮ್ಮದ್ ಇಂತಿಯಾಝ್ ಇಂಜಿನಿಯರ್ ಸುಳ್ಯ, ರಫೀಕ್ ನೇರಳಕಟ್ಟೆ, ಸ್ವಲಾತ್ ಸಮಿತಿ ಅಧ್ಯಕ್ಷ ಮಹಮ್ಮದ್ ಮರಕ್ಕಡ ಹಾಗೂ ಉಲಾಮಾ ಉಮರಾ ನಾಯಕರು ಭಾಗವಹಿಸಿದರು. ಸಲಾಹುದ್ದೀನ್ ಸಖಾಫಿ ಮಾಡನ್ನೂರು ಸ್ವಾಗತಿಸಿ ವಂದಿಸಿದರು. ಬಳಿಕ ಅನ್ನದಾನ ನಡೆಯಿತು.