Home ಧಾರ್ಮಿಕ ಸುದ್ದಿ ಕುಮಾರಧಾರದಲ್ಲಿ ಕುಕ್ಕೆ ಸುಬ್ರಹ್ಮಣ್ಯನ ಅವಭೃಥೋತ್ಸವ

ಕುಮಾರಧಾರದಲ್ಲಿ ಕುಕ್ಕೆ ಸುಬ್ರಹ್ಮಣ್ಯನ ಅವಭೃಥೋತ್ಸವ

1515
0
SHARE

ಸುಬ್ರಹ್ಮಣ್ಯ: ಮಹಾತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇಗುಲದಲ್ಲಿ ಚಂಪಾ ಷಷ್ಠಿ ಜಾತ್ರಾ ಮಹೋತ್ಸವದ ಪ್ರಯುಕ್ತ ಮಾರ್ಗಶಿರ ಶುದ್ಧ ಸಪ್ತಮಿಯ ದಿನವಾದ ಶನಿವಾರ ಕುಮಾರಾ ಧಾರಾದಲ್ಲಿ ಶ್ರೀ ಸುಬ್ರಹ್ಮಣ್ಯ ದೇವರ ನೌಕಾವಿಹಾರ ಮತ್ತು ಅವಭೃಥೋತ್ಸವ ನಡೆಯಿತು. ಶ್ರೀ ದೇಗುಲದ ಪ್ರಧಾನ ಅರ್ಚಕ ವೇ| ಮೂ| ಸೀತಾರಾಮ ಎಡಪಡಿತ್ತಾಯ ಅವರು ಅವಭೃತೋತ್ಸವದ ಧಾರ್ಮಿಕ ವಿಧಿವಿಧಾನ ನೆರವೇರಿಸಿದರು.

ಬೆಳಗ್ಗೆ ದೇಗುಲದ ದ್ವಾದಶಿ ಮಂಟಪದಲ್ಲಿ ಓಕುಳಿ ಪೂಜೆ ಮತ್ತು ಓಕುಳಿ ಚೆಲ್ಲಾಟ ನೆರವೇರಿತು. ಬಳಿಕ ದೇವರಿಗೆ ಓಕುಳಿ ಸಮರ್ಪಣೆಯಾಗಿ ಭಕ್ತರಿಗೆ ಓಕುಳಿ ಪ್ರೋಕ್ಷಣೆ ಮತ್ತು ಓಕುಳಿ ಚೆಲ್ಲಾಟ ನಡೆಯಿತು. ಅನಂತರ ದೇವರ ಅವಭೃತೋತ್ಸವ ಸವಾರಿ ಶ್ರೀ ದೇಗುಲದಿಂದ ಹೊರಟು ಬಿಲದ್ವಾರದ ಕಟ್ಟೆಯಲ್ಲಿ ಕಟ್ಟೆಪೂಜೆ ನೆರವೇರಿತು.

ಕುಮಾರಧಾರ ನದಿಯ ಮತ್ಸ್ಯತೀರ್ಥ ದಲ್ಲಿ ಶ್ರೀ ದೇವರ ನೌಕಾ ವಿಹಾರ ನಡೆಯಿತು. ಬಳಿಕ ಕುಮಾರಧಾರೆಯ ಮತ್ಸéತೀರ್ಥದ ಶ್ರೀ ದೇವರ ಜಳಕದ ಗುಂಡಿಯಲ್ಲಿ ಶ್ರೀ ದೇವರ ಅವಭೃತೋತ್ಸವದ ಧಾರ್ಮಿಕ ವಿಧಿ-ವಿಧಾನವನ್ನು ಪ್ರಧಾನ ಅರ್ಚಕ ವೇ| ಮೂ| ಸೀತಾರಾಮ ಎಡಪಡಿತ್ತಾಯ ಅವರು ನೆರವೇರಿಸಿದರು.

ಅರ್ಚಕರಾದ ರಾಜೇಶ್‌ ಭಟ್‌
ನಡ್ಯಂತಿ ಳಾಯ, ಸತ್ಯನಾರಾಯಣ ನೂರಿತ್ತಾಯ, ಮಧುಸೂಧನ ಕಲ್ಲೂರಾಯ, ಸರ್ವಶ್ವರ ಭಟ್‌ ಸಹಕರಿಸಿದರು. ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇಗುಲದ ವಾರ್ಷಿಕ ಜಾತ್ರೆ ಚಂಪಾ ಷಷ್ಠಿಯ ಪ್ರಧಾನ ದಿನ ಗಳಾದ ಚೌತಿ, ಪಂಚಮಿ ಮತ್ತು ಷಷ್ಠಿ ಹಾಗೂ ಅವಭೃತೋತ್ಸವದಂದು ಕ್ಷೇತ್ರದಲ್ಲಿ ದಾಖಲೆಯ ಒಂದೂವರೆ ಲಕ್ಷಕ್ಕಿಂತಲೂ ಅಧಿಕ ಮಂದಿ ಭಕ್ತರು ಶ್ರೀ ದೇವರ ಭೋಜನ ಪ್ರಸಾದ ಸ್ವೀಕರಿಸಿದರು. ಶ್ರೀ ದೇಗುಲದ ಷಣ್ಮುಖ ಪ್ರಸಾದ ಬೋಜನ ಶಾಲೆ, ಅಂಗಡಿಗುಡ್ಡೆಯ ವಿಶೇಷ ಭೋಜನ ಛತ್ರ ಮತ್ತು ದೇಗುಲದ ಹೊರಾಂಗಣ, ಆದಿಸುಬ್ರಹ್ಮಣ್ಯ, ಶೃಂಗೇರಿ ಮಠ ಮತ್ತು ಗಣಪತಿ ದೇವಸ್ಥಾನದಲ್ಲಿ ಭಕ್ತರು ಭೋಜನ ಸ್ವೀಕರಿಸಿದರು.

ಚಂಪಾ ಷಷ್ಠಿಯ ಪುಣ್ಯದಿನ ಗುರುವಾರ ಸಹಸ್ರಾರು ಮಂದಿ ಪ್ರಸಾದ ಭೋಜನಸ್ವೀಕರಿಸಿದರುಅವಭೃತೋತ್ಸವದ ದಿನವಾದ ಶುಕ್ರವಾರ ಕೂಡಾ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭೋಜನ ಪ್ರಸಾದ ಸ್ವೀಕರಿಸಿದರು. ಕ್ಷೇತ್ರದ ಅಂಗಡಿಗುಡ್ಡೆಯಲ್ಲಿ ವಿಶೇಷ ಭೋಜನ ವ್ಯವಸ್ಥೆಯನ್ನು ಆಡಳಿತ ಮಂಡಳಿಯು ಮಾಡಿತ್ತು. ಇಲ್ಲಿ ಹಾಳೆತಟ್ಟೆ ಮಾದರಿ ವ್ಯವಸ್ಥೆಯನ್ನು ಭಕ್ತರಿಗೆ ಕಲ್ಪಿಸಿದ ಕಾರಣ ಸುಲಲಿತವಾಗಿ ಪ್ರಸಾದ ಸ್ವೀಕರಿಸಬಹುದಾಗಿತ್ತು.

ವಿಶೇಷ ಭೋಜನ ಶಾಲೆ
ಅಂಗಡಿ ಗುಡ್ಡೆಯ ಬೃಹತ್‌ ವಿಶೇಷ ಅನ್ನ ಛತ್ರದಲ್ಲಿ ನೆಲ ಹಾಸನ್ನು ಹಾಕಿ ಭಕ್ತರಿಗೆ ವಿಶೇಷ ಅನುಕೂಲತೆಯನ್ನು ನೂತನ ಆಡಳಿತ ಮಂಡಳಿ ಒದಗಿಸಿತ್ತು. ಪ್ರಪ್ರಥಮ ಬಾರಿಗೆ ಇಲ್ಲಿ ಫ್ಯಾನ್‌, ವಿದ್ಯುತ್‌ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಅಳವಡಿಸಲಾಗಿತ್ತು. ಅಂಗಡಿಗುಡ್ಡೆಯಲ್ಲಿ ತಾತ್ಕಾಲಿಕ ಭೋಜನ ಶಾಲೆಯನ್ನು ನಿರ್ಮಿಸಿ, ಅಲ್ಲಿ ಮೂರು ಕೌಂಟರ್‌ ವ್ಯವಸ್ಥೆಯನ್ನು ಮಾಡಲಾಗಿತ್ತು.

LEAVE A REPLY

Please enter your comment!
Please enter your name here